ಕನ್ನಡದ ಅತ್ಯಮೂಲ್ಯ ಸಾಮಾಜಿಕ ಸಂದರ್ಭವೆಂದರೆ
ವಚನ ಚಳವಳಿ. ಅದರ ಮಾತಿನ ರೂಪವಾದ ವಚನಸಾಹಿತ್ಯ ಕನ್ನಡದ ಕೆಚ್ಚನ್ನು ಎತ್ತಿ ನಿಲ್ಲಿಸಿತು. ವಚನಗಳೊಡನೆ
ನನ್ನ ನಂಟು ನಲವತ್ತೈದು ವರ್ಷಗಳಿಗೂ ಮೀರಿದ್ದು. ಈ ನೀಳ ಅವಧಿಯಲ್ಲಿ ನಾನು ಆಗಿಂದಾಗ್ಗೆ ಬರೆದ ಸುಮಾರು
ನಲವತ್ತು ಲೇಖನಗಳ ಸಂಕಲನ ಎಂಟುನೂರು ಪುಟಗಳ ಈ ಗ್ರಂಥ. ಇಲ್ಲಿ ಲೇಖನಗಳನ್ನು ಕಾಲಾನುಕ್ರಮವಾಗಿ ಜೋಡಿಸಿರುವುದರಿಂದ
ವಚನಗಳನ್ನು ಕುರಿತ ನನ್ನ ದೃಷ್ಟಿಕೋನ ಬದಲಾಗುತ್ತ ಸಾಗಿ ಬಂದ ದಾರಿಯನ್ನು ಗುರುತಿಸಲು ಸಹಾಯಕವಾಗುತ್ತದೆ.
download
No comments:
Post a Comment