Monday 9 January 2017

ಹಿಂದಿ ವಿರೋಧೀ ದಿನ : ಉಪನ್ಯಾಸ ವಿಡಿಯೋ


ಹಿಂದಿಯನ್ನು ರಾಷ್ಟ್ರಭಾಷೆಯೆಂದು ಸುಳ್ಳೇ ಹಿರಿದು ಮಾಡುತ್ತಿರುವ ಸರ್ಕಾರಗಳು ದೇಶದ ಸಮೃದ್ಧವಾದ ಇತರ ಭಾಷೆಗಳನ್ನು ಮತ್ತು ಅವುಗಳನ್ನಾಡುವ ಜನತೆಯನ್ನು ಅವಮಾನಿಸುತ್ತಿವೆ. ನೀರಿಳಿಯದ ಗಂಟಲಲ್ಲಿ ಕಡುಬನ್ನು (ಹಿಂದಿ ಕಡುಬೂ ಅಲ್ಲ, ಒಂದು ಕಟ್ಟಿಗೆಯ ತುಂಡು) ತುರುಕಿದಂತೆ ತ್ರಿಭಾಷಾಸೂತ್ರದ ಹೆಸರಿನಲ್ಲಿ ಕಡ್ಡಾಯವಾಗಿ ಕಲಿಸುತ್ತಿವೆ. ಈ ಸೂತ್ರವನ್ನು ಕುವೆಂಪು ‘ಭಾಷಾತ್ರಿಶೂಲ’ ಎಂದು ಕರೆದರು. ಸೋವಿಯತ್ ಒಕ್ಕೂಟದ ವಿಘಟನೆಗೆ ಸೈದ್ಧಾಂತಿಕ ಒಡಕಿನೊಡನೆ ರಷ್ಯನ್ ಭಾಷೆಯ ಹೇರಿಕೆಯೂ ಕಾರಣವೆನ್ನಬಹುದು, ಹಿಂದಿಯಿಂದ ದೇಶದ ಏಕತೆಗೆ ಖಂಡಿತ ಅಪಾಯವಿದೆ. ಅದನ್ನು ಪ್ರತಿಪಾದಿಸುವ ಉಪನ್ಯಾಸವಿದು, ಯುವಬಳಗವೊಂದು ಆಯೋಜಿಸಿದ್ದ ‘ಹಿಂದಿವಿರೋಧೀ ದಿನ’ದಂದು ನೀಡಿದ್ದು.

download

No comments: