Wednesday, 5 July 2017

ಬೇಕಾಗಿದೆ : ಹಿಂದಿ ಭೂತವನ್ನು ಓಡಿಸಬಲ್ಲ ಮಂತ್ರವಾದಿ


ಇಂಡಿಯದ ದೇಶಭಕ್ತರಿಗೆ ಹುಸಿ ರಾಷ್ಟ್ರೀಯತೆಯ ಅಮಲು ಏರಿದೆ; ಅದರಿಂದ ಅವರು ಏಕತೆಯೆಂದು ಬಡಬಡಿಸುತ್ತ ತೂರಾಡುತ್ತಿದ್ದಾರೆ. ಎಲ್ಲದಕ್ಕೂ ಒಂದೇ ಇದ್ದರೆ ಸಾಕು ಎಂದು ಮಿಕ್ಕವನ್ನೆಲ್ಲ ಅಳಿಸಿಹಾಕಲು ಅವರು ಪಿತೂರಿ ಮಾಡುತ್ತ, ಈಗಾಗಲೇ ವಿವಿಧ ಸ್ಟೇಟ್ ಬ್ಯಾಂಕುಗಳ ಅನನ್ಯತೆಯನ್ನು ಅಳಿಸಿಹಾಕಿದ್ದಾರೆ; ಹಿಂದಿಯನ್ನು ಹೇರಲು ಹುನ್ನಾರ ಮಾಡುತ್ತಿದ್ದಾರೆ. ಚರಿತ್ರೆ ಭೂಗೋಳ ಎರಡೂ ಇಲ್ಲದ ಹಿಂದಿ ಹತ್ತಾರು ಭಾಷೆಗಳನ್ನು ಒರೆಸಿಹಾಕಿ ಮೆರೆಯುತ್ತಿರುವ ಭೂತ. ದೇಶದ ಐಕ್ಯತೆಗಾಗಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಡಂಗುರ ಸಾರುತ್ತ (ಪಶ್ಚಿಮ ಬಂಗಾಳ ಮತ್ತು ನಮ್ಮ ಮಹಾನ್ ದೇಶಪ್ರೇಮಿ ಪ್ರಧಾನಿಯ ಸ್ವಂತ ದೇಶ ಗುಜರಾತ್‍ನ ಉಚ್ಚ ನ್ಯಾಯಾಲಯಗಳು ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದು ಸಾರಿದ್ದರೂ) ನೀರಿಳಿಯದ ಗಂಟಲುಗಳಲ್ಲಿ ಕಲ್ಲಿನ ಕಡುಬನ್ನು ತುರುಕಲು ಹೊರಟಿದ್ದಾರೆ. ಇಂಡಿಯ ದೇಶವೆಂದರೆ ಒಂದು ಎಂಬ ಹುಚ್ಚುತನ ಇವರದು. ಎ.ಇ. ಹ್ಯೂಮ್ ಎಂಬ ನಿವೃತ್ತ ಬ್ರಿಟಿಷ್ ಅಧಿಕಾರಿ ‘ಇಂಡಿಯನ್ ನ್ಯಾಷನಲ್ ಕಾಂಗ್ರಸ್’ ಎಂಬ ಹೆಸರಿನಲ್ಲಿ ನ್ಯಾಷನಲ್ ಎಂಬ ವಿಶೇಷಣವನ್ನು ಇಂಡಿಯಕ್ಕೆ ಅನ್ವಯಿಸಿ ಮೊದಲ ಬಾರಿ ಬಳಸಿದ. ಅವನ ಮನಸ್ಸಿನಲ್ಲಿ ಇಂಡಿಯ ದೇಶ ಎಂದರೆ ಬ್ರಿಟಿಷ್ ಆಡಳಿತಕ್ಕೊಳಗಾಗಿದ್ದ ಪ್ರದೇಶ ಎಂಬ ಕಲ್ಪನೆ ಇತ್ತು. ಜಗತ್ತಿನ ಆದಿಯಿಂದಲೂ ಈಗಿನ ಭಾರತ ಒಂದಾಗಿತ್ತು ಎಂಬ ಭ್ರಮೆ ಈ ದೇಶಪ್ರೇಮಿಗಳಿಗೆ. ಆದರೆ ಅದು ಎಂದೂ ಒಂದಾಗಿರಲಿಲ್ಲ; ಹಿಂದಿಯ ಹೇರಿಕೆಯಿಂದ ಅದು ಒಡೆಯುವುದರತ್ತ ಧಾವಿಸುತ್ತದೆಯೇ ಹೊರತು ಒಂದಾಗಿಸುವ ಕಡೆಗಲ್ಲ. ಭಾರತ ಒಂದು ದೇಶವಲ್ಲ; ಅನೇಕ ಭಾಷಿಕ ರಾಷ್ಟ್ರೀಯತೆಗಳ ಒಕ್ಕೂಟ. ಭಾರತ ಸಂಸ್ಕೃತಿ ಎಂಬುದಿಲ್ಲ; ಇವರ ಕಲ್ಪನೆಯ ಅದು ವಿಕೃತಗೊಂಡ ವೈದಿಕ ಸಂಸ್ಕೃತಿ. ಅದನ್ನು ಹಿಂದಿ ಎಂಬ ತೊಸಕಲು ದಾರದಿಂದ ಹೊಲಿದಿಡಲಾಗುವುದಿಲ್ಲ.
ಗಾಂಧಿ ಮಾಡಿದ ದೊಡ್ಡ ತಪ್ಪು ಎಂದರೆ ಒಂದು ದೇಶಕ್ಕೆ ಒದು ಭಾಷೆ ಇರಬೇಕೆಂದು ಪ್ರತಿಪಾದಿಸಿದ್ದು. ದೇಶಕ್ಕೊಂದೇ ಭಾಷೆಯಲ್ಲ, ಮುಖ್ಯ ಭಾಷೆಗೊಂದು ದೇಶ ಎಂಬುದು ನಿಯಮ. ಜಗತ್ತಿನ ಎಲ್ಲೆಡೆ ಭೌಗೋಳಿಕತೆಗೆ ಮತ್ತು ಅಲ್ಲಿನ ಜನಭಾಷೆಗೆ ಅನನ್ಯ ಸಂಬಂಧ ಇರುವುದನ್ನು ಆಯಾ ದೇಶ ಮತ್ತು ಅದರ ಭಾಷೆಯ ಹೆಸರಿನ ಸಾಮ್ಯದಿಂದ ಗುರುತಿಸಬಹುದು. ಹಾಗಾಗಿ ಭಾಷೆಯಿಂದಲೇ ಒಂದು ದೇಶದ ಅಸ್ತಿತ್ವ. ಅಮೆರಿಕ, ಭಾರತ ಎಂಬಂತಹ ಕೃತಕ ದೇಶಕಲ್ಪನೆಯ ಹಿಂದೆ ವ್ಯಕ್ತಿ ಹೆಸರುಗಳು ಮುಖ್ಯವಾಗಿವೆ, ಯಾವುದೇ ಸಾಮುದಾಯಿಕ ವಿಷಯವಲ್ಲ. ಅಲ್ಲದೆ ಭಾರತ ಎಂಬುದು ಭರತನು ಆಳಿದ ದೇಶ ಎನ್ನುತ್ತಾರೆ; ಯಾವ ಭರತ?  ರಾಮನ ತಮ್ಮನೋ, ಸರ್ವದಮನನೆಂಬ ಹೆಸರಿನ ದುಷ್ಯಂತ-ಶಕುಂತಲೆಯರ ಮಗನೋ, ಜೈನರ ತ್ರಿಷಷ್ಠಿಶಲಾಕಾಪುರುಷರಲ್ಲಿ ಒಬ್ಬನಾದ ಮೊದಲನೆಯ ಚಕ್ರವರ್ತಿಯೋ, ಅಥವಾ ನಾಟ್ಯಶಾಸ್ತ್ರವನ್ನು ಬರೆದ ಭರತಮುನಿಯೋ? ಹಿಂದಿ ಎಂಬ ಹೆಸರು ಎಂದಿನಿಂದ ಇದೆ ಎಂಬುದನ್ನು ಸಂಶೋಧನೆ ಮಾಡಲಿ, ಅದರ ಇತಿಹಾಸ ಒಂದು ಶತಮಾನಕ್ಕೆ ಹೆಚ್ಚಿನದಿದೆಯೇ? ಹಿಂದಿಯನ್ನು ಕೇಂದ್ರ ಸರ್ಕಾರದ ಏಕೈಕ ಅಧಿಕೃತ ಭಾಷೆಯೆಂದು ಸಾರುವುದರ ಮೂಲಕ ನಮ್ಮ ಸಂವಿಧಾನ ಈ ದೇಶದ ಜನರನ್ನು ಕುರಿಗಳು ಮತ್ತು ಕುರುಬರು ಎಂದು ವಿಂಗಡಿಸಿದಂತಾಗಿದೆ. ಹಿಂದಿಯ ಕಾರಣದಿಂದ ಅದನ್ನು ಮಾತಾಡುತ್ತೇವೆನ್ನುವವರಿಗೆ ಇನ್ನಿಲ್ಲದ ಹಿರಿಮೆ ಪ್ರಾಪ್ತವಾಗುವಂತೆ ಸಂವಿಧಾನ ಮಾಡಿದೆ. ಹಿಂದಿ ಎಂಬುದೊಂದು ಭೂತ. ಭೂತ ಹಿಡಿದ ವ್ಯಕ್ತಿ ತಾನಾಗಿ ನಡೆದುಕೊಳ್ಳುವುದಿಲ್ಲ; ಮೈಮೇಲೆ ಬಂದಿರುವ ಭೂತದಂತೆ ರಭಸದಿಂದ ಓಲಾಡುತ್ತಾನೆ. ಹಾಗೆಯೇ ಹಿಂದಿ ಎಂಬ ರಾಷ್ಟ್ರೀಯ ಭೂತ ಬಂದವರು ತಮ್ಮತನವನ್ನೆಲ್ಲ ಬಿಟ್ಟಕೊಟ್ಟು ಹೇಗೆ ಹೇಗೆಯೋ ನಡೆದುಕೊಳ್ಳುತ್ತಾರೆ. ಹಿಂದಿ ಭೂತ ಹಿಡಿದ ಜನರನ್ನು ನೋಡಿ: ಅವರು ಧರಿಸುವುದು ರಾಷ್ಟ್ರೀಯ ಅಂದರೆ ಉತ್ತರದವರ ಉಡುಪು, ಹಿಂದಿ ಸಿನಿಮಗಳಿಗೆ ಆದ್ಯತೆ, ಹಿಂದಿ ಹಾಡುಗಳು ಅವರಿಗೆ ಹೆಚ್ಚು ಇಂಪು. ದೇಶಭಕ್ತಿ ಗೀತೆಯೆಂದರೆ ಹಿಂದಿ ಹಾಡು - ಹೀಗೆ ಯುವಜನತೆಯ ಮಿದುಳಿನಲ್ಲಿ ಹಿಂದಿಯ ಅಮಲನ್ನು ನಮ್ಮ ವಾಹಿನಿಗಳು ಮತ್ತು ಸರ್ಕಾರ ಹಿಡಿಸುತ್ತಿವೆ.
ಕನ್ನಡದ ಜನ ಏಕೆ ಹೀಗಾಗಿದ್ದಾರೆಯೋ ತಿಳಿಯದು. ನಾವಿನ್ನೂ ರಾಷ್ಟ್ರೀಯ ಪಕ್ಷಗಳೆಂಬ ದೆಹಲಿ ಬಾಲಬಡುಕ ಜನರನ್ನೇ ಚುನಾವಣೆಯಲ್ಲಿ ಆಯ್ಕೆಮಾಡುತ್ತಿದ್ದೇವೆ, ಅದು ಸಿಂದಾಬಾದನ ಬೆನ್ನೇರಿದ ಭೂತದ ಹಾಗೆ ನಮಗೆ ಅಂಟಿಕೊಂಡುಬಿಟ್ಟಿದೆ, ಕೊಡವಿದರೂ ಉದುರುತ್ತಿಲ್ಲ. ನೆರೆಹೊರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳಗಳಲ್ಲಿ ಈ ರಾಷ್ಟ್ರೀಯ ಪಕ್ಷಗಳ ಭೂತ ಕಾಡುತ್ತಿಲ್ಲ. ಆದರೆ ಕನ್ನಡಿಗರಿಗೆ ಬಿಡುಗಡೆಯ ದಿನ ಎಂದೋ. ನಮ್ಮ ರಾಜ್ಯ ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡು ಮುಗ್ಧ ವಿದ್ಯಾರ್ಥಿಗಳನ್ನು ಹಿಂಸಿಸುತ್ತಿದೆ. ತ್ರಿಭಾಷಾಸೂತ್ರವನ್ನು ಕುವೆಂಪು ತ್ರಿಶೂಲ ಸೂತ್ರ ಎಂದರು. ತ್ರಿಭಾಷಾ ಸೂತ್ರ ಒಂದು ಮೋಸದ ತಂತ್ರ. ನಮ್ಮ ಮಕ್ಕಳು ಕನ್ನಡದ ಜೊತೆಗೆ ರಾಷ್ಟ್ರಭಾಷೆ ಹಿಂದಿ ಮತ್ತು ಅಂತಾರಾಷ್ಟ್ರೀಯ ಭಾಷೆ ಇಂಗ್ಲಿಷನ್ನು ಕಲಿಯಬೇಕು. ಜನರ ದೃಷ್ಟಿಯಲ್ಲಿ ಈ ಕ್ರಮದಲ್ಲಿ ಅವುಗಳ ಮಹತ್ವ ಹೆಚ್ಚಾಗುತ್ತದೆ. ನಮ್ಮ ಜನರೆಲ್ಲ ಕನ್ನಡ ನಾಡನ್ನು ಬಿಟ್ಟು ಹೋಗಲು ತವಕಿಸುತ್ತಿರುವುದರಿಂದ ಹಿಂದಿ-ಇಂಗ್ಲಿಷ್‍ಗಳನ್ನು ಕಲಿಯಲು ಅವರಿಗೆ ಅತೀವ ಉತ್ಸಾಹ. ನಮ್ಮ ಮಕ್ಕಳು ಮೂರು ಭಾಷೆ ಕಲಿಯಬೇಕು, ಹಿಂದಿ ಜನ ತಮ್ಮ ಭಾಷೆಯನ್ನು ಕಲಿತು, ಇಂಗ್ಲಿಷನ್ನು ಹಾಗೂ ಹೀಗೂ ಜೇಬಿಗಿಳಿಸಿಕೊಂಡು ದೇಶವಾಳುವುದು, ನಮ್ಮ ಹುಡುಗರು ಸೇವಕರಂತೆ ಅವರ ಹಿಂದೆ ಡವಾಲಿ ಧರಿಸಿ ಓಡಾಡುವುದು. ಹಿಂದೆ ಬಟ್ಲರ್ ಇಂಗ್ಲಿಷ್ ಅನ್ನುತ್ತಿದ್ದರಲ್ಲ, ಹಾಗೆ ನಮ್ಮ ಹುಡುಗರು ಹಿಂದಿಯನ್ನು ಹೇಗಾದರೂ ಕಲಿತು ಸಾಹೇಬರ ಸೇವೆ ಮಾಡುವ ಸೌಭಾಗ್ಯವನ್ನು ಹೊಂದಬೇಕು. ಎಷ್ಟಾದರೂ ಇವರದ್ದು ಕಲಿತ ಹಿಂದಿಯಲ್ಲವೇ? ಹಾಗಾಗಿ ಹಿಂದಿಯಲ್ಲೇ ಹುಟ್ಟಿ ಬೆಳೆದವರಂತೆ ಇವರು ಆ ಭಾಷೆಯ ಮೇಲೆ ಪ್ರಭುತ್ವ ಸಾಧಿಸಲು ಸಾಧ್ಯವೇ? ಇಂಗ್ಲಿಷ್‍ನ ರೀತಿಯೂ ಇದೇ, ಹೀಗಾಗಿ ನಮ್ಮ ಹುಡುಗರು ‘ಈ ದರಿದ್ರ ಕನ್ನಡ ದೇಶದಲ್ಲಿ ಏಕೆ ಹುಟ್ಟಿದೆನೋ, ಹಿಂದಿಯವನಾಗಿಯೋ ಅಥವಾ ಅದಕ್ಕಿಂತ ಮಿಗಿಲಾಗಿ ಇಂಗ್ಲಿಷಿನವನಾಗಿಯೋ ಹುಟ್ಟಬೇಕಾಗಿತ್ತು!’ ಎಂದು ಪೇಚಾಡಿಕೊಳ್ಳಬೇಕು. ನಮ್ಮ ಸರ್ಕಾರ ನಿರೀಕ್ಷಿಸುವ ಪರಿಣಾಮ ಇದೇ ಎಂದು ಕಾಣುತ್ತದೆ.
1962 ರಲ್ಲಿ ತಮಿಳುನಾಡಿನಲ್ಲಿ ಹಿಂದಿವಿರೋಧಿ ಚಳವಳಿ ಬಹು ದೊಡ್ಡದಾಗಿ ನಡೆಯಿತು; ಆಗ ನೆಹರೂ ಕೊಟ್ಟ ಆಶ್ವಾಸನೆ ದಕ್ಷಿಣದವರು ಹಿಂದಿಯನ್ನು ಒಪ್ಪಿಕೊಳ್ಳುವವರೆಗೆ (ದಕ್ಷಿಣದವರೆಂದರೆ ತಮಿಳರು ಮಾತ್ರ, ಮಿಕ್ಕವರು ಅದನ್ನು ಪ್ರಸಾದವೆಂಬಂತೆ ಕಣ್ಣಿಗೊತ್ತಿಕೊಂಡು ಸೇವಿಸುತ್ತಿದ್ದಾರೆ!) ಇಂಗ್ಲಿಷ್ ಕೂಡ ಸಹಭಾಷೆಯಾಗಿ ಜಾರಿಯಲ್ಲಿರುತ್ತದೆ ಎಂದು. ಹಿಂದಿಯನ್ನು ನೀವು ಬಳಸಬೇಕೆಂದಿಲ್ಲ, ಆದರೆ ಅದು ಇಂಗ್ಲಿಷ್‍ನ ಜೊತೆ ಇರುತ್ತದೆ, ಇತರ ಭಾಷೆಗಳ ಸ್ಥಾನವೇನೂ ಬದಲಾಗುವುದಿಲ್ಲ. ಇಂಗ್ಲಿಷ್ ಜೊತೆಯಲ್ಲಿದ್ದರೂ ಹಿಂದಿಯ ಬಳಕೆಗೆ ಅಡ್ಡಿಯಿಲ್ಲ.  ಮುಖ್ಯಮಂತ್ರಗಳ ಸಭೆಯನ್ನುದ್ದೇಶಿಸಿ ಪ್ರಧಾನಿಯವರು ಮಾತನಾಡುವುದು ಹಿಂದಿಯಲ್ಲಿಯೇ, ಸಂಸತ್ತಿನಲ್ಲಿ ನೀವು ಇಂಗ್ಲಿಷ್‍ನಲ್ಲಿ ಪ್ರಶ್ನೆ ಕೇಳಿದರೂ ಸಚಿವರು ಉತ್ತರಿಸುವುದು ಹಿಂದಿಯಲ್ಲಿಯೇ. ಆ ಭಾಷೆ ಅರ್ಥವಾಗದಿದ್ದರೆ ದೆಹಲಿಯಲ್ಲಿನ ಸಂಸತ್ತು ಎಂಬ ಸಭೆಯಲ್ಲಿ ಕುಳಿತುಕೊಳ್ಳುವ ಯೋಗ್ಯತೆ ನಿಮಗೆಲ್ಲಿ ಬರುತ್ತದೇ?
ಬಿಜೆಪಿ ಎಂಬ ರಾಷ್ಟ್ರೀಯತೆಯ ಭೂತ ಬಲವಾಗಿ ಹೊಕ್ಕ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲಂತೂ ಹಿಂದಿಯನ್ನು ದನಗಳ ಗಂಟಲಿನಲ್ಲಿ ಔಷಧಿಯನ್ನು  ಗೊಟ್ಟದ ಮೂಲಕ ಬಲವಂತವಾಗಿ ಸುರಿಯುವ ಹಾಗೆ ನಮಗೆ ಎರೆಯಲಾಗುತ್ತಿದೆ. ನಮ್ಮ ಪ್ರಧಾನಿಯವರು ಗುಜರಾತಿಯನ್ನು ಮರೆತು, ಹಿಂದಿಯಲ್ಲಿಯೇ ಎಲ್ಲೆಡೆ ವ್ಯವಹರಿಸುತ್ತಾರೆ. ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಕೆಲವು ಕಡೆಗಳಲ್ಲಾದರೂ ತಮ್ಮ ತಾಯಿನುಡಿಯನ್ನು ಬಳಸುತ್ತಿದ್ದರೇನೋ; ಆದರೆ ಈಗ ಆತ ಅಖಿಲ ಭಾರತದ ವ್ಯಕ್ತಿ. ತಾನು ಹೋದ ಕಡೆ ಗುಜರಾತಿಯಲ್ಲಿಯೇ ಮಾತಾಡಿ ಎದುರಿಗಿರುವ ಸಭೆಯವರು ಯಾವ ಭಾಷೆಯವರೋ ಆ ಭಾಷೆಯಲ್ಲಿ ಅದನ್ನು ಭಾಷಾಂತರಗೊಳಿಸುವ ವ್ಯವಸ್ಥೆ ಮಾಡಲಾರದ ಆತ ಬಹುಭಾಷೆಯುಳ್ಳ ದೇಶದ ಬಹುತೆಯನ್ನು ಹೇಗೆ ಕಾಪಾಡಬಲ್ಲ? ತಾನೊಂದು ಇಸ್ತ್ರಿಪೆಟ್ಟಿಗೆ. ವೈವಿಧ್ಯವೇ ಇಲ್ಲದಂತೆ ಎಲ್ಲವನ್ನೂ ಸಪಾಟುಗೊಳಿಸಬೇಕೆಂಬ ಭ್ರಮೆ ಆತನಲ್ಲಿದೆ. ಖಾಸಗಿ ವಾಹಿನಿಗಳಲ್ಲಿಯೂ ಕೇಂದ್ರ ಸರ್ಕಾರದ ಜಾಹೀರಾತುಗಳೆಲ್ಲ ಹಿಂದಿಯ ಅಕ್ಷರಗಳನ್ನೇ ಬಿಂಬಿಸುವುದು. ರೈಲ್ಷೆ ಇಲಾಖೆಯು ಕನ್ನಡ ಪತ್ರಿಕೆಗಳಲ್ಲಿ ಪ್ರಕಟಿಸುವ ಜಾಹೀರಾತುಗಳೂ ಹಿಂದಿಯಲ್ಲಿಯೇ ಇರುತ್ತವೆ. ರೈಲ್ವೆ ಸವಲತ್ತು, ಸುರಕ್ಷತೆ ಹಿಂದಿಯರಿಗೆ ಮಾತ್ರ ಸಂಬಂಧಿಸಿದ್ದು, ಮಿಕ್ಕವರು ಏನಾದರೂ ಸರಿಯೇ! ಪ್ರಧಾನಿಯವರು ಜನರುನ್ನುದ್ದೇಶಿಸಿ ಹೇಳುವ ‘ಮಂಕಿ ಬಾತ್’ ಹೆಸರಿಗನುಗುಣವಾಗಿಯೇ ಹಿಂದಿಯಲ್ಲಿರುತ್ತದೆ!
ಕನ್ನಡಿಗರಲ್ಲಿ ‘ದೇಶಭಕ್ತಿ’ ಅತಿಯಾಗಿಬಿಟ್ಟಿದೆ. ನಮ್ಮ ನಾಡಿನಿಂದ ಚುನಾಯಿತನಾಗಿ ಹೋಗಿ ಕೇಂದ್ರದಲ್ಲಿ ಮಂತ್ರಿಯಾಗಿರುವ ಒಬ್ಬಾತನನ್ನು ಸಂಸತ್ತಿನಲ್ಲಿ ಕನ್ನಡದಲ್ಲಿಯೇ ಏಕೆ ಮಾತಾಡಬಾರದು ಎಂದು ಒಮ್ಮೆ ಕೇಳಿದ್ದಕ್ಕೆ ಆತನ ಉತ್ತರ: ‘ನಾವು ಪ್ರಮಾಣವಚನವನ್ನು ಕನ್ನಡದಲ್ಲಿಯೇ ಸ್ವೀಕರಿಸಿದ್ದೇವೆ, ಅಂತಾರಾಷ್ಟ್ರೀಯ ಮಾತೃಭಾಷಾ ದಿನವಾದ ಫೇಬ್ರವರಿ 21 ರಂದು ಕನ್ನಡದಲ್ಲಿಯೂ ಮಾತಾಡುತ್ತೇವೆ’ ಎಂದು. ಮಾತೃಭಾಷಾ ದಿನದ ಆಚರಣೆಯ ಹಿಂದಿನ ಕಾರಣವೇನು ಎಂಬುದು ಆತನಿಗೆ ಗೊತ್ತಿದ್ದಂತಿಲ್ಲ. ಪಾಕಿಸ್ತಾನ ಆದಾಗ ಉರ್ದುವನ್ನು ಬಲವಂತವಾಗಿ ಹೇರಿದ್ದರಿಂದ ಬಂಗಾಳಿ ಪ್ರದೇಶವಾದ ಪೂರ್ವ ಪಾಕಿಸ್ತಾನದಲ್ಲಿ ವಿರೋಧ ಬಲವಾಗಿ ಡಾಕಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ಪಾಕಿಸ್ತಾನ ಪೋಲೀಸರು ಮಾಡಿದ ಗೋಲೀಬಾರ್‍ನಿಂದ ಐದು ಮಂದಿ ವಿದ್ಯಾರ್ಥಿಗಳು ಸತ್ತರು; ಪೂರ್ವ ಪಾಕಿಸ್ತಾನ ಸ್ವತಂತ್ರ ರಾಷ್ಟ್ರವಾಗಲು ಈ ಉರ್ದುವಿರೋಧವೇ ಕಾರಣ. ಬಂಗ್ಲಾ ದೇಶವಾದ ಮೇಲೆ ಈ ಹಿನ್ನೆಲೆಯಲ್ಲಿ ಬಂಗ್ಲಾ ದೇಶ ವಿಶ್ವಸಂಸ್ಥೆಗೆ ಮನವಿಮಾಡಿಕೊಂಡದ್ದರಿಂದ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸಲು ವಿಶ್ವಸಂಸ್ಥೆಯಲ್ಲಿ ತೀರ್ಮಾನವಾಯಿತು. ಅಂದರೆ ಪರಭಾಷಿಕರ ಮೇಲೆ ಹಿಂದಿಯನ್ನು ಬಲಂತವಾಗಿ ಹೇರಿದರೆ ನಮ್ಮ ದೇಶದಲ್ಲಿಯೂ ಇದು ಮರುಕಳಿಸಬಹುದು ಎಂಬ ಪ್ರಜ್ಞೆಯೂ ಇವರಿಗಿಲ್ಲ. ಯಾವುದೋ ಸೈದ್ಧಾಂತಿಕ ನೆಲೆಯಲ್ಲಿ ವಿವಿಧ ಭಾ಼ಷಿಕ ವಲಯಗಳು  ಒಂದಾಗಿದ್ದ ಸೋವಿಯತ್ ಒಕ್ಕೂಟ ಒಡೆದುಹೋಗಲು ರಷ್ಯನ್ ಭಾಷೆಯ ಹೇರಿಕೆಯೂ ಬಹು ಮುಖ್ಯ ಕಾರಣವಾಯಿತು.
ರಾಷ್ಟ್ರಭಾಷೆಯ ಹೆಸರಿನಲ್ಲಿ ಎಲ್ಲೆಡೆಯೂ ಹಿಂದಿಯನ್ನು ಒರಟುತನದಿಂದಲೂ ನೇರವಾಗಿಯೂ ಸೂಕ್ಷ್ಮವಾಗಿಯೂ ಹೇರುತ್ತಿರುವುದರ ನೆನಪು ಮನಸ್ಸಿನಲ್ಲಿ ಕುದಿಯುತ್ತಿರುವುದರಿಂದ ಹಿಂದಿಯ ಬಗ್ಗೆ ಮೊನಚಾಗಿ ಬರೆಯುವ ಹಾಗಾಗುತ್ತದೆ. ಅದೂ ಕನ್ನಡದಂತೆಯೇ ಒಂದು ಭಾಷೆಯಾಗಿರಬಹುದು (ಆದರೆ ಒಂದಲ್ಲ ಹತ್ತಾರು ಭಾಷೆಗಳ ಕಲಸುಮೇಲೋಗರವೂ ಹೌದು) ಅದರ ಬಗ್ಗೆ ನಾವು ದ್ವೇಷ ಸಾಧಿಸಬೇಕಾಗಿಲ್ಲ. ಆದರೆ ಸರ್ಕಾರದ ಅಸಂಗತ ಭಾಷಾ ನೀತಿ ಅದನ್ನು ದ್ವೇಷಿಸುವಂತೆ ನಮ್ಮನ್ನು ಪ್ರೇರಿಸುತ್ತದೆ. ನಮ್ಮ ಮೇಲೆ ಸವಾರಿ ಮಾಡುವ ಭಾಷೆ ಅದು, ನಮ್ಮನ್ನು ದನಗಳಂತೆ ಭಾವಿಸಿ ಚಾವಟಿಯಿಂದ ಹೊಡೆಯುವ ಯಜಮಾನ ತಾನು ಎಂಬುದರಿಂದ, ‘ನಮ್ಮ’  ದೇಶದಲ್ಲಿಯೇ ನಮ್ಮನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡುತ್ತಿರುವುದರಿಂದಾಗಿ ಇಂಥ ತೀವ್ರ ವಿರೋಧ ನಮ್ಮಲ್ಲಿ ಮಡುಗಟ್ಟಿರುವುದು.
ಇದಕ್ಕೆ ಕಾರಣ ಕನ್ನಡ ನಾಡು ದೆಹಲಿಯ ‘ಬಾಯ್ದಂಬುಲಕ್ಕೆ  ಕೈಯಾನುವ’ ರಾಷ್ಟ್ರೀಯ ಎನ್ನಿಸಿಕೊಂಡ ಪಕ್ಷಗಳೇ ನಮ್ಮನ್ನಾಳುತ್ತಿರುವುದು. ತಮಿಳುನಾಡಿನಲ್ಲಿ ಹಿಂದಿ ವಿರೋಧ ನಡೆದಂದಿನಿಂದ ಇಲ್ಲಿಯವರೆಗೆ ದ್ರಾವಿಡ ಪಕ್ಷಗಳಲ್ಲದೆ ಬೇರೆಯವರು ಅಲ್ಲಿನ ಆಡಳಿತವನ್ನು ಹಿಡಿಯಲು ಆ ಜನ ಅವಕಾಶವನ್ನೇ ಕೊಟ್ಟಿಲ್ಲ. ಅತ್ಯಂತ ಭ್ರಷ್ಟ ಮುಖ್ಯಮಂತ್ರಿಯೂ ಮತ್ತೊಮ್ಮೆ ಆಯ್ಕೆಗೊಂಡಾಗ ಪ್ರಧಾನಿ ಚೆನ್ನೈಗೆ ಹೋಗಿ ಅವರಿಗೆ ಗೌರವ ತೋರಿಸುತ್ತಾರೆ; ಮನೆಯಲ್ಲಿ ತಳ್ಳುವ ಕುರ್ಚಿಯಿಂದಲೇ ಸಕಲ ಕಾರ್ಯನಿರ್ವಹಣೆ ಮಾಡುವ ವಿರೋಧಪಕ್ಷದ ನಾಯಕರನ್ನು ಅವರ ಮನೆಗೇ ಹೋಗಿ ಭೇಟಿ ಮಾಡಿ ಅವರ ಕೃಪೆಯನ್ನು ಬೇಡುತ್ತಾರೆ. ದಕ್ಷಿಣದ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಅಲ್ಲಿನ ಪಕ್ಷಗಳೇ ಅಧಿಕಾರದಲ್ಲಿವೆ; ಕನ್ನಡ ನಾಡು ಅತಿ ದೇಶಭಕ್ತರ ಬೀಡಾಗಿ ಈ ಸ್ಥಿತಿಗಿಳಿದಿದೆ. ಇದು ಎಂದು ಹೋಗುತ್ತದೆಯೋ! ಹಿಂದೆ ನಮ್ಮಲ್ಲಿ ಪ್ರಾದೇಶಿಕ ಪಕ್ಷ ಕಟ್ಟುವ ಪ್ರಯತ್ನ ನಡೆಸಿದವರು ‘ರಾಷ್ಟ್ರೀಯ’ ಪಕ್ಷಗಳಿಂದ ಉಚ್ಚಾಟನೆಗೊಂಡವರು, ಅಥವಾ ಅಲ್ಲಿ ಬಯಸಿದ್ದು ಸಿಕ್ಕಲಿಲ್ಲವೆಂದು ಹತಾಶೆಗೊಳಗಾದವರು. ಅವರಲ್ಲಿ ಕೆಲವರು ಉತ್ತರದ ನಾಯಕರ ಹಿಡಿತಕ್ಕೆ ಹೋಗಲು ತವಕಿಸಿದ್ದೂ ಉಂಟು. ಅಂದರೆ ನಮ್ಮ ನಾಯಕರಿಗೆ ಉತ್ತರಕುಮಾರರೇ ವೀರಾಧಿವೀರರು, ಅವರ ಸೇನಾಧಿಪತ್ಯದಲ್ಲಿಯೇ ತಾವು ಚುನಾವಣೆಯ ಸಮರವನ್ನು ಗೆಲ್ಲುವ ತವಕ. ನಮ್ಮ ಅತ್ಯಂತ ಪ್ರಾಚೀನ ಉಪಲಬ್ಧ ಗ್ರಂಥವಾದ ‘ಕವಿರಾಮಾರ್ಗ’ವು ಕವಿಗಳಿಗಲ್ಲದೆ ಜನರಿಗೂ ಮಾರ್ಗ ತೋರಿಸಿದೆ. ಅದೆಂದರೆ “ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾವಲಯವಿಲೀನವಿಶದವಿಷಯವಿಶೇಷಂ” ಎಂಬ ಮಾತು. “ಜಗತ್ತಿನ ಭಾಗವಾದ ಕನ್ನಡ ಎಂಬ ವಿಶಾಲ ನಾಡಿನ ಜನಪದರು ವಿಶಿಷ್ಟರು” ಎಂಬುದು. ಕನ್ನಡ ಜನ ಒಟ್ಟು ಜಗತ್ತಿನ ಭಾಗವೇ ಹೊರತು ಮತ್ತಾವುದೋ ಭೂಭಾಗದ ಭಾಗ ಅಲ್ಲ ಎಂಬ ಭಾವನೆ ಅದರದ್ದು. ನಾವು ಆ ಭಾವನೆಯನ್ನು ಮರೆತು ಇನ್ನಾವುದೋ ಭೂಭಾಗದ ತುಂಡು ಎಂಬ ಅಮಲನ್ನು ಹೊತ್ತು ಈ ಸ್ಥಿತಿಗೆ ಬಂದಿದ್ದೇವೆ.
ಸದ್ಯಕ್ಕೆ ಭಾರತದ ಭಾಷಿಕ ವಲಯಗಳು ಬೇರಾಗುವ ಸಂದರ್ಭಗಳು ಕಾಣುತ್ತಿಲ್ಲ. ಹೀಗಾಗಿ ನಾವು ಆಲೋಚಿಸಬೇಕಾದದ್ದು ಪ್ರಸ್ತುತ ಪರಿಸ್ಥಿತಿಯಲ್ಲಿಯೇ ನಮ್ಮತನವನ್ನು ಉಳಿಸಿಕೊಳ್ಳುವ ಮಾರ್ಗ ಯಾವುದು ಎಂಬುದನ್ನು ಕಂಡುಕೊಳ್ಳುವುದು. ಅದಕ್ಕೆ ಅನೇಕ ಮಾರ್ಗಗಳಿವೆ. ಕೇಂದ್ರವು ಯಾವ ಭಾಷೆಯಲ್ಲಿ ವ್ಯವಹರಿಸಬೇಕು ಎಂಬ ಪ್ರಶ್ನೆ ಬಂದಾಗ, ಯಾವುದೇ ಭಾಷೆಯನ್ನು ಬಳಸಿದರೆ ಇತರ ಭಾಷಿಕರಿಗೆ ಅಸಮಾಧಾನವಾಗುವುದು ಸಹಜ ಮತ್ತು ನ್ಯಾಯ. ಇಂಗ್ಲಿಷ್ ಪರಕೀಯಭಾಷೆಯಾದರೂ ಒಂದು ರೀತಿಯ ನಮ್ಮದೇ ಇಂಗ್ಲಿಷ್ ಇಲ್ಲಿ ನೆಲೆಗೊಂಡಿರುವುದರಿಂದಲೂ, ಎಲ್ಲ ಭಾಷಿಕರಿಗೂ ಸಮಾನ ಸುಲಭ-ಕಷ್ಟವಾದುರಿಂದಲೂ ಒಂದು ಹಂತದವರೆಗೆ ಅಂದರೆ ರಾಜ್ಯ-ಕೇಂದ್ರ ಮತ್ತು ರಾಜ್ಯ-ರಾಜ್ಯ ವ್ಯವಹಾರಗಳ ನೆಲೆಗಳಲ್ಲಿ - ಅದನ್ನು ಒಪ್ಪಬಹುದು; ಆದರೆ ಅದು ಪರಕೀಯಭಾಷೆ ಎಂಬ ಕಾರಣ ಅದಕ್ಕೆ ವಿರೋಧವೂ ಇದೆ. ಸಂಸ್ಕೃತವನ್ನೂ ಕೆಲವರು ಮುಂದೊಡ್ಡುತ್ತಾರೆ. ಆದರೆ ಹಿಂದೆ ಬಹುಸಂಖ್ಯಾತರನ್ನು ಕತ್ತಲಲ್ಲಿಡಲು ಬಳಕೆಯಾದ ಭಾಷೆ ಅದು; ಅದನ್ನು ಕಲಿಯುವುದು ಸುಲಭವೂ ಅಲ್ಲ, ಅದರ ಬಗೆಗೆ ಜನಸಾಮಾನ್ಯರಿಗೆ ಯಾವುದೇ ಆತ್ಮೀಯತೆಯಿಲ್ಲ, ಮತ್ತದು ಹತ್ತಿರವೂ ಅಲ್ಲ; ಅಲ್ಲದೆ ಅದು ಆಡುನುಡಿಯಲ್ಲ, ಕೃತಕವಾದ ಗ್ರಾಂಥಿಕ ಭಾಷೆ. ಹೀಗಾಗಿ ಅದನ್ನು ಬಳಸಲು  ಪ್ರಬಲ ವಿರೋಧ ವ್ಯಕ್ತವಾಗುವುದು ಸಹಜ. ಇನ್ನೊದು ಮಾರ್ಗವೂ ಇದೆ. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್ ಅವರ ಮಾತು ನೆನಪಾಗುತ್ತದೆ: ಇಂಗ್ಲಿಷನ್ನು ಆಡಳಿತದಿಂದ ಓಡಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ  ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿಯನವರು ‘ತಮ್ಮ ಸರ್ಕಾರಕ್ಕೆ ಉತ್ತರ ಪ್ರದೇಶ ಸರ್ಕಾರದಿಂದ ಹಿಂದಿಯಲ್ಲಿ ಪತ್ರ ಬಂದರೆ ಅದಕ್ಕೆ ಉತ್ತರಿಸಲಾಗುವುದಿಲ್ಲ’ ಎಂಬ ಪ್ರಸಂಗ ಅದು. ಆಗ  ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಉತ್ತರಿಸುತ್ತ ತಮಿಳುನಾಡಿನಿಂದ ತಮ್ಮ ಸರ್ಕಾರಕ್ಕೆ ಇಂಗ್ಲಿಷ್‍ನಲ್ಲಿ ಪತ್ರ ಬಂದರೆ ನಾವು ತಮಿಳಿನಲ್ಲಿಯೇ ಮಾರುತ್ತರ ಕಳಿಸುವ ಏರ್ಪಾಟುಮಾಡುತ್ತೇವೆಂದು ಹೇಳಿದರು. ರಾಜ್ಯಮಟ್ಟದಲ್ಲಿನ ಜನಭಾಷೆಯಾದ ಹಿಂದಿಯನ್ನು ಮಾನ್ಯ ಮಾಡುವ ಮನೋಭಾವದೊಂದಿಗೆ, ತನ್ನ ಭಾಷೆಗೆ ನೀಡುವಷ್ಟೇ ಮಾನ್ಯತೆಯನ್ನು ಬೇರೆ ರಾಜ್ಯದ ಜನಭಾಷೆಗೂ ನೀಡುವುದು ತಮ್ಮ ಆಶಯವೇ ಹೊರತು ಪರಭಾಷೆಯಾದ, ದಾಸ್ಯದ ಸಂಕೇತವಾದ, ಇಂಗ್ಲಿಷ್‍ಗೆ ಅಲ್ಲ ಎಂಬ ಭಾವನೆಯನ್ನು ಅದು ಸೂಚಿಸುತ್ತದೆ. ಈ ಉತ್ತರ ರಾಷ್ಟ್ರ ಮಟ್ಟದಲ್ಲಿ ವಿವಿಧ ರಾಜ್ಯಭಾಷೆಗಳಿಗೆ ಕಲ್ಪಿಸಬೇಕಾದ ಸ್ಥಾನದ ಬಗ್ಗೆ ಉಪಯುಕ್ತ ಸುಳಿವು ನೀಡುತ್ತದೆ. ಇಂಡಿಯದ ಎಲ್ಲ ರಾಜ್ಯಗಳಲ್ಲಿ ಎಲ್ಲ ರಾಜ್ಯಭಾಷೆಗಳಲ್ಲಿ ವ್ಯವಹರಿಸುವ ಒಂದು ವ್ಯವಸ್ಥೆ ಇರಬೇಕು. ರಾಜ್ಯರಾಜ್ಯಗಳ ನಡುವೆ ಜನಸಾಮಾನ್ಯರೇನೂ ಪತ್ರವ್ಯವಹಾರ ಮಾಡುವ ಸಂದರ್ಭಗಳು ಇರುವುದಿಲ್ಲ. ಸರ್ಕಾರಗಳ ಮಟ್ಟದಲ್ಲಿ ಬರುವ ಪತ್ರಗಳ ಸಂಖ್ಯೆ ತುಂಬ ಸೀಮಿತವಾಗಿರುವುದರಿಂದ ಅವುಗಳ ಅನುವಾದ ವ್ಯವಸ್ಥೆ ಬಹು ಕಷ್ಟಕರವಾದುದೇನೂ ಆಗುವುದಿಲ್ಲ. ಇನ್ನು ಕೇಂದ್ರ-ರಾಜ್ಯಗಳ ನಡುವಣ ವ್ಯವಹಾರ: ಕೇಂದ್ರ ಸರ್ಕಾರವು ಎಲ್ಲ ರಾಜ್ಯಭಾಷೆಗಳ ಜೊತೆ ಆಯಾ ರಾಜ್ಯಭಾಷೆಯಲ್ಲಿಯೇ ವ್ಯವಹರಿಸಬೇಕು. ಸಂಸತ್ತಿನಲ್ಲಿ ಬೇರೆ ಬೇರೆ ರಾಜ್ಯಗಳ ಸದಸ್ಯರು ತಮ್ಮ ತಮ್ಮ ಭಾಷೆಗಳಲ್ಲಿ ಮಾತಾಡುವ ಅವಕಾಶವಿದ್ದು, ಇತರ ಭಾಷಿಕ ಸದಸ್ಯರಿಗೆ ತಮ್ಮ ಭಾಷೆಯಲ್ಲಿಯೇ ಸಮಾನಾಂತರವಾಗಿ ಅನುವಾದಗೊಂಡು ಕೇಳಿಸುವ ತಾಂತ್ರಿಕ ಸೌಲಭ್ಯವಿರಬೇಕು. ವಿಶ್ವಸಂಸ್ಥೆಯಲ್ಲಿಯೂ ಯೂರೋಪಿಯನ್ ಯೂನಿಯನ್‍ನಲ್ಲಿಯೂ ಈ ವ್ಯವಸ್ಥೆ ಇದೆಯಲ್ಲ. ಜಗತ್ತಿಗೆ ಸಾಫ್ಟ್‌ವೇರ್ ತಂತ್ರಜ್ಞಾನಿಗಳನ್ನು ರಫ್ತುಮಾಡುತ್ತಿರುವ ನಮ್ಮ ದೇಶದಲ್ಲಿ ಇಂತಹ ತಂತ್ರಾಂಶವನ್ನು ರೂಪಿಸುವುದು ಕಷ್ಟವೇನಲ್ಲ, ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿನ ಸಿ-ಡಾಟ್‍ಗೆ ಈ ಕೆಲಸವನ್ನು ವಹಿಸಿದರೆ ‘ಕಣ್ಣುಮುಚ್ಚಿಬಿಚ್ಚುವೈಸು ಬೇಗ’ ಈ  ಕಾರ್ಯ ನನಸಾಗುತ್ತದೆ.
ನಮ್ಮ ರಾಜ್ಯ ಸರ್ಕಾರ ತುರ್ತಾಗಿ ಒಂದು ಕೆಲಸವನ್ನು ಮಾಡಬೇಕು: ಅದೆಂದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೆ ತರುವುದು. ಕುವೆಂಪು ಅವರು ಸೂಚಿಸಿದಂತೆ ‘ಕನ್ನಡ ಮತ್ತು ಇನ್ನೊಂದು ಭಾಷೆ’; ಇದು ಎಲ್ಲ ಭಾಷಿಕ ವಲಯಕ್ಕೂ ಅನ್ವಯವಾಗಬೇಕು. ಆಯಾ ನಾಡಿನಲ್ಲಿ ಆಯಾ ರಾಜ್ಯಭಾಷೆಯೇ ಸಾರ್ವಭೌಮ. ಅದರೊಡನೆ ಇನ್ನೊಂದು ಭಾಷೆ. ಅದು ಇಂಗ್ಲಿಷ್ ಅಥವಾ ಹಿಂದಿಯೇ ಆಗಬೇಕಿಲ್ಲ.   ನಮ್ಮ ಹುಡುಗರು ತಮಿಳನ್ನೋ ತೆಲುಗನ್ನೋ ಬಂಗಾಳಿಯನ್ನೋ ಕಲಿಯಲಿ, ಬಿಡಿ. ಆಗ ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯವಾದ ‘ಸಮಾನತೆ’ಗೆ ಒಂದು ಅರ್ಥ ಸಿಕ್ಕುತ್ತದೆ. “ನನ್ನ ಹೊಟ್ಟೆಯೇ ನಿನಗೆ ಅತ್ಯಂತ ಸುರಕ್ಷಿತ ಸ್ಥಳ” ಎಂದು ಕುರಿಗಳಿಗೆ ಹೇಳಿ ಅವುಗಳನ್ನು ನುಂಗುವ ತೋಳದ ಪ್ರವೃತ್ತಿಯಂತೆ ರಾಜ್ಯಗಳ ಸ್ವಾಯತ್ತತೆಯನ್ನು ನುಂಗಿಹಾಕುವ  ರಾಷ್ಟ್ರೀಯತೆ ಬೇಡವೆಂದು ಕುವೆಂಪು ತಮ್ಮೊಂದು ಕವನದಲ್ಲಿ ಸೂಚಿಸುತ್ತಾರೆ. ಈಗಲಾದರೂ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು. ಇಂಡಿಯದಲ್ಲಿ ಉಳಿದರೂ ಗುಲಾಮರಾಗದಂತೆ ನಮ್ಮನ್ನು ನಾವು ಕಾಪಿಟ್ಟುಕೊಳ್ಳಬೇಕು. ಅದಕ್ಕೆ ಬೇಕಾದುದು ಜನರ ಇಚ್ಛಾಶಕ್ತಿ. ಜನಕ್ಕೆ ಆ ಮನೋಭಾವ ಬಂದರೆ ಅಗದು ರಾಜಕೀಯ ಇಚ್ಛಾಶಕ್ತಿಯಾಗುವುದಕ್ಕೆ ಅಡ್ಡಿ ಯಾವುದೂ ಇರುವುದಿಲ್ಲ.
******
                                                                   


Thursday, 2 February 2017

ಹಳಗನ್ನಡ ಪದಸಂಪದ

ಹಳಗನ್ನಡದ ಶಬ್ದಗಳಗೆ ಕೇವಲ ಅರ್ಥಗಳನ್ನು ನೀಡಿರುವ ಶಬ್ದಗಳ ಬಗೆಯನ್ನೂ ಸೂಚಿಸದ ಬೃಹತ್ ಶಬ್ದಸೂಚಿಯಿದು. ಪ್ರಯೋಗವಾಕ್ಯಗಳನ್ನು ನಿರೀಕ್ಷಿಸುವವರು ‘ಚಂಪೂ ನುಡಿಗನ್ನಡಿ’ಯನ್ನು ಅವಲೋಕಿಸಬಹುದು

Wednesday, 18 January 2017

ಸಾವಿನ ಸುತ್ತ

¸ÁªÀÅ JA§ÄzÀÄ J®ègÀÆ ºÀÄnÖ£ÉÆqÀ£É vÀªÀÄä §UÀ®°èAiÉÄà ºÉÆvÀÄÛ vÀAzÀzÀÄÝ, ¸ÁªÀÅ ¸ÀA¨sÀ«¸ÀĪÀªÀgÉUÀÆ CzÀÄ £ÀªÀÄä£ÀÄß ©qÀĪÀÅ¢®è. CzÀÄ EµÀÄÖ C¤ªÁAiÀÄðªÁzÀgÀÆ CzÀgÀ C£ÀĨsÀªÀ ªÀÄ£ÀĵÀåjUÉ zÀPÀÌ®Ä ¸ÁzsÀåªÉà E®è. »ÃUÁV AiÀiÁªÀ 
zÁ±Àð¤PÀ K£Éà ªÁåSÁå£À ªÀiÁrzÀgÀÆ CzÉ®è MAzÀÄ jÃwAiÀÄ ªÁåSÁå£À CxÀªÁ ¸Àé¸ÁAvÀé£ÀzÀ jÃw ªÀiÁvÀæªÉà DV©qÀÄvÀÛzÉ. CzÀgÀ §UÉV£À AiÀiÁªÀÅzÉàfeÁÕ¸É vÀ£Àß°èAiÉÄà ¥ÀAiÀÄðªÀ¸Á£ÀUÉƼÀÄîªÀAxÀzÉà ºÉÆgÀvÀÄ CzÀgÁZÉUÉ
ºÉÆÃUÀ¯ÁgÀzÀÄ. ¸ÁªÀÅ £ÀªÀÄUÉ ¹PÀÄ̪ÀÅzÀÄ CzÀÄ ªÀiÁqÀĪÀ ¥ÀjuÁªÀÄUÀ¼À ªÀÄÄSÁAvÀgÀ ªÀiÁvÀæªÉÃ; CzÀÆ JµÉÆÖAzÀÄ 
§UÉAiÀÄ°è! CªÀÅUÀ¼À£ÀÄß »r¢qÀĪÀ ªÀÄÆ®PÀªÉà CzÀgÀ §UÉV£À PËvÀÄPÀ-«¸ÀäAiÀÄUÀ¼À£ÀÄß ¯ÉÃRPÀ ªÀåPÀÛ¥Àr¸ÀÄvÁÛ£É. E°è£À ºÀvÀÆÛ PÀvÉUÀ¼À°è£À ¸Á«£À ¸ÀAzÀ¨sÀðzÀ°è ºÀvÁÛgÀÄ ªÀiÁ£ÀªÀªÀÄÄRUÀ¼À zÀ±Àð£ÀªÁUÀÄvÀÛzÉ. F PÀvÉUÀ¼À£ÀÄß 
C£ÀĪÁ¢¸ÀĪÁUÀ £À£ÀUÉ C¤ªÀðZÀ¤ÃAiÀÄ J¤ß¸ÀĪÀ C£ÀĨsÀªÀ; ºÀÈzÀAiÀÄ ºÀUÀÄgÁzÀ ¨sÁªÀ.
link

Thursday, 12 January 2017

ಕೆ. ವಿ. ಅಯ್ಯರ್ : ಒಂದು ಒಟ್ಟು ನೋಟ


ಕೆ.ವಿ. ಅಯ್ಯರ್
1
ತಮ್ಮ ‘ಶಾಂತಲಾ’ ಮತ್ತು ‘ರೂಪದರ್ಶಿ’ ಕಾದಂಬರಿಗಳಿಂದಾಗಿ ಕನ್ನಡ ನಾಡಿನ ಮನೆಮಾತಾಗಿದ್ದವರು ದಿವಂಗತ ಕೆ.ವಿ. ಅಯ್ಯರ್. ಅಲ್ಲದೆ, ಅವರು ಕನ್ನಡ ಉಪಾಧ್ಯಾಯವರ್ಗಕ್ಕೆ ಸೇರದ ಅಪರೂಪದ ಸಾಹಿತಿಗಳು. ಅವರ ಹವ್ಯಾಸ, ಆಸಕ್ತಿ ಮತ್ತು ವೃತ್ತಿ ಅಂಗಸಾಧನೆ: ಅಂಗಸಾಧನೆಯಿಂದ ತಮ್ಮ ದೇಹವನ್ನು ವಜ್ರಸಮ ಮಾಡಿಕೊಂಡಿದ್ದುದರ ಜೊತೆಗೆ, ಮುಖತಃ ಮತ್ತು ಅಂಚೆಯ ಮೂಲಕ ದೇಹದಾರ್ಢ್ಯ ತರಗತಿಗಳನ್ನು ನಡೆಸಿ ಅನೇಕ ಯುವಕರಿಗೆ ಅಂಗಸೌಷ್ಠವದ ಬಗ್ಗೆ ತಿಳಿವಳಿಕೆ ನೀಡಿದವರು ಅವರು. ಕೆ.ವಿ. ಅಯ್ಯರ್ ಹುಟ್ಟಿದ್ದು 1898 ನೇ ಇಸವಿ ಜನವರಿ 8 ರಂದು, ಕೋಲಾರ ಜಿಲ್ಲೆಯ ದೇವರಾಯಸಮುದ್ರದಲ್ಲಿ, ನಾರಾಯಣ ಅಯ್ಯರ್ ಮತ್ತು ಲಕ್ಷ್ಮಮ್ಮ ದಂಪತಿಗಳ ಮಗನಾಗಿ. ತಂದೆಯ ನಿಧನಾನಂತರ ಅವರು ತಾಯಿಯವರೊಡನೆ 1906 ರಲ್ಲಿ ಬೆಂಗಳೂರಿಗೆ ಬಂದರು. ಬೆಂಗಳೂರು ಮತ್ತು ಮೈಸೂರುಗಳಲ್ಲಿ ಇಂಟರ್‍ಮೀಡಿಯಟ್‍ವರೆಗೆ ಸಾಂಪ್ರದಾಯಿಕ ವಿದ್ಯಾಭ್ಯಾಸ ಮಾಡಿದರು. 1920 ರಲ್ಲಿ ಅವರು ಜಾನಕಮ್ಮನವರನ್ನು ಮದುವೆಯಾದರು. ಮುಂದೆ ಅವರ ಜೀವನವೆಲ್ಲ ಬೆಂಗಳೂರಿನಲ್ಲಿಯೇ ಸಾಗಿತು.
ಅಯ್ಯರ್ ಅವರಿಗೆ ಮೊದಲಿನಿಂದಲೂ ದೇಹಸೌಷ್ಠವ ಮತ್ತು ಆರೋಗ್ಯಗಳ ಬಗ್ಗೆ ತುಂಬ ಆಸಕ್ತಿ. ಮೊದಲಿನಿಂದಲೂ ತಾವಾಗಿಯೇ ಹಲವಾರು ಬಗೆಯ ವ್ಯಾಯಾಮಗಳಲ್ಲಿ ತೊಡಗಿಕೊಂಡು ತಮ್ಮ ದೇಹವನ್ನು ಸುಷ್ಠುವಾಗಿರಿಸಿಕೊಂಡರು. ಅದರಲ್ಲಿಯೂ ವಿಶೇಷ ಆಹಾರದ ಆವಶ್ಯಕತೆಯಿರದ, ಹೆಚ್ಚು ವೇಳೆಯನ್ನು ವ್ಯಯ ಮಾಡಬೇಕಾಗದ, ಎಲ್ಲರೂ ಸುಲಭವಾಗಿ ಅನುಸರಿಸಬಹುದಾದ ಮತ್ತು ವಿಶೇಷ ಉಪಕರಣಗಳ ನೆರವಿಲ್ಲದೆ ಮಾಡಬಹುದಾದ ತಮ್ಮದೇ ಆದ ವ್ಯಾಯಾಮ ಪದ್ಧತಿಯನ್ನು ಅವರು ರೂಪಿಸಿದರು. ಅವರ ಶಿಷ್ಯರಾದ ಶ್ರೀ ಎಸ್. ಅನಂತರಾವ್ ಅವರ ಪ್ರಕಾರ ಅಯ್ಯರ್ ಅಯ್ಯರ್ ಅವರ ವ್ಯಾಯಾಮ ಪದ್ಧತಿಯ ಪ್ರಮುಖ ಲಕ್ಷಣಗಳು ಇವು:
1.     ಚಿಕ್ವವರು, ದೊಡ್ಡವರು, ತೀರ ವಯಸ್ಸಾದವರು, ಹೆಂಗಸರು, ಗಂಡಸರು, ಬಲಹೀನರಾದವರು, ಕೆಲವು ಕಾಯಿಲೆಗಳಿಂದ ಬಳಲುವವರು ಎಲ್ಲರೂ ಈ ಕ್ರಮದಲ್ಲಿ ವ್ಯಾಯಾಮ ಮಾಡಬಹುದು.
2.     ಯಾವ ಉಪಕರಣಗಳಾಗಲೀ ನಿರ್ದಿಷ್ಠ ಸ್ಥಳವಾಗಲೀ ಬೇಕಿಲ್ಲ.
3.     ಹೃದಯದ ಮೇಲೆ ಅಥವಾ ಬೇರೆ ಯಾವ ಅಂಗಾಂಗದ ಮೇಲೆಯೂ ಒತ್ತಡ ಉಂಟುಮಾಡುವುದಿಲ್ಲ.
4.     ಈ ವ್ಯಾಯಾಮ ಪದ್ಧತಿಯನ್ನು ಅನುಸರಿಸುವುದರಿಂದ ಡಯಾಬಿಟಿಸ್, ಆಸ್ತಮ ಮುಂತಾದ ಕಾಯಿಲೆಗಳು ಪೂರ್ಣವಾಗಿ ವಾಸಿಯಾಗುತ್ತವೆ; ಔಷಧಗಳು ಶಮನಕಾರಿಯೇ ಹೊರತು ಗುಣಕಾರಿಯಲ್ಲ.
5.     ದಿನನಿತ್ಯದ ಸಾಧರಣ ಆಹಾರವೇ ಸಾಕು, ವಿಶೇಷ ಆಹಾರದ ಆವಶ್ಯಕತೆಯಿಲ್ಲ.
6.     ವ್ಯಾಯಾಮವು ಅಂಗಾಂಗಗಳ ದೃಢತೆ ಹಾಗೂ ಶರೀರಬಲವನ್ನು ಹೆಚ್ಚಿಸುತ್ತದೆ.
ಅಯ್ಯರ್ ಅವರು ಬೆಂಗಳೂರಿನ ಚಾಮರಾಜಪೇಟೆಯಲ್ಲಿ 1922 ರಲ್ಲಿ ‘ಹಕ್ರ್ಯುಲಿಸ್ ಜಿಮ್ನೇಸಿಯಂ’ ಹೆಸರಿನಲ್ಲಿ ಒಂದು ವ್ಯಾಯಾಮಶಾಲೆಯನ್ನು ತೆರೆದರು. ಅದೊಂದು ದೊಡ್ಡ ಬಂಗಲೆ, ಸುತ್ತ ವಿಸ್ತಾರವಾದ ಕಾಂಪೌಂಡ್. ಆ ಶಾಲೆಯ ಒಂದು ಭಾಗ ಅಯ್ಯರ್ ಅವರ ವಾಸದ ಮನೆಯೂ ಹೌದು. ಎಲ್ಲ ವಯಸ್ಸಿನವರುಗಳಿಗೆ ಸೂಕ್ತ ವ್ಯಾಯಾಮ ದೊರೆಯುವಂತೆಯೂ, ಕ್ರಮವಾದ ರೀತಿಯಲ್ಲಿ ಮುಂದುವರಿಯಲು ಸಾಧ್ಯವಾಗುವಂತೆಯೂ ಅವರು ಸೆಟ್ ವ್ಯಾಯಾಮವನ್ನು ರೂಪಿಸಿದ್ದರು. ಜೊತೆಗೆ ತಿಂಗಳಿಗೊಮ್ಮ ವಿದ್ಯಾರ್ಥಿಯ ಪ್ರಗತಿಯನ್ನು ಮಾಪನ ಮಾಡುವ ಪದ್ಧತಿ ಬೇರೆ. ಅಲ್ಲದೆ, ಎಲ್ಲರಿಗೂ ಒಂದೇ ಬಗೆಯ ಶಿಕ್ಷಣವಲ್ಲ, ಪ್ರತಿ ವಿದ್ಯಾರ್ಥಿಯ ಆವಶ್ಯಕತೆಗನುಗುಣವಾದ ಕ್ರಮ.
ಅಯ್ಯರ್ ಅವರು ವ್ಯಾಯಾಮ ಶಿಕ್ಷಣ ನೀಡುವುದರ ಜೊತೆಗೆ ವಾಸಿಯಾಗದೆಂದು ಭಾವಿಸಲಾಗುತ್ತಿದ್ದ ಕೆಲವು ರೋಗಗಳಿಗೂ ವ್ಯಾಯಾಮದ ಮೂಲಕವೇ ಚಿಕಿತ್ಸೆ ನೀಡುತ್ತಿದ್ದರಂತೆ. ವಿದೇಶಗಳಲ್ಲಿ ಬಳಸುತ್ತಿದ್ದ ಅತ್ಯಾಧುನಿಕ ವ್ಯಾಯಾಮೋಪಕರಣಗಳನ್ನು ಅಯ್ಯರ್ ಅವರು ತರಿಸಿ ಬಳಸುತ್ತಿದ್ದರು. ವಿ.ಸೀ ಅವರಿಗಿದ್ದ ತಡೆಯಲಾರದ ಬೆನ್ನು ಚಳುಕನ್ನು ಅಯ್ಯರ್ ತಮ್ಮ ಸಂವಹನ (massage) ಮೂಲಕ ಸುಧಾರಿಸಿದರಂತೆ. ಹಾಗೆಯೇ ಆಗಿನ ಮಹಾರಾಜರಾದ ಕೃಷ್ಣರಾಜ ಒಡೆಯರ್ ಅವರಿಗೂ ಸಂವಹನ ಚಿಕಿತ್ಸೆಯನ್ನು ನಡೆಸಿದ್ದರು.
ಅಯ್ಯರ್ ಅಂಚೆ ಮೂಲಕವೂ ವ್ಯಾಯಾಮ ಶಿಕ್ಷಣ ನೀಡುತ್ತಿದ್ದರು. ಪಾಠಗಳನ್ನು ತಯಾರಿಸಿ ಅಂಚೆಗೆ ಹೋಗಲು ಅವುಗಳನ್ನು ಸ್ವತಃ ತಾವೇ ಸಿದ್ಧಗೊಳಿಸುತ್ತಿದ್ದರು. ಅವರ ಪಾಠಗಳೆಲ್ಲ ಇಂಗ್ಲಿಷ್‍ನಲ್ಲಿ ರಚಿತವಾದವು, ಪ್ರಾಯಶಃ ಬೇಡಿಕೆಯಿಲ್ಲದ್ದರಿಂದಲೋ ಏನೋ ಕನ್ನಡದಲ್ಲಿ ತಯಾರಿಸಲಿಲ್ಲ. ‘ಪರ್‍ಫೆಕ್ಟ್ ಫಿಸಿಕ್’, ‘ಸೂರ್ಯ ನಮಸ್ಕಾರ’, ‘ಫಿಸಿಕ್ ಅಂಡ್ ಫಿಗರ್’ ಮತ್ತು ‘ಕೆಮಿಕಲ್ ಚೇಂಜಸ್ ಇನ್ ಫಿಸಿಕಲ್ ಎಕ್ಸರ್‍ಸೈಸಸ್’ ಎಂಬ ನಾಲ್ಕು ಪುಸ್ತಕಗಳನ್ನು ಅವರು ರಚಿಸಿದರು.
ಅಯ್ಯರ್ ಅವರು ಅನೇಕ ಕಡೆಗಳಲ್ಲಿ ತಮ್ಮ ದೇಹದಾಢ್ರ್ಯ ಪ್ರದರ್ಶನಗಳನ್ನು ನೀಡಿದರು. ಕಬ್ಬಿಣದ ಸಲಾಕೆಗಳನ್ನು ಬಾಗಿಸುವುದು, ಕಬ್ಬಿಣದ ಮೊಳೆಯನ್ನು ಮುರಿಯುವುದು, ಎದೆಗೆ ಕಬ್ಬಿಣದ ಸರಪಳಿ ಬಿಗಿಸಿಕೊಂಡು ಎದೆಯುಬ್ಬಿಸಿ ಅದನ್ನು ಕತ್ತರಿಸುವುದು ಮುಂತಾದವನ್ನು ಅವರು ಪ್ರದರ್ಶಿಸುತ್ತಿದ್ದರು. ತಮ್ಮ ಜೊತೆಗೆ ತಮ್ಮ ಶಿಷ್ಯರನ್ನೂ ಇಂಥ ಪ್ರದರ್ಶನಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅವರ ಸ್ನಾಯುನಿಯಂತ್ರಣ ವಿಶೇಷ ಆಕರ್ಷಣೆ; ಹೊರಕಾಣುವ ತಮ್ಮ ದೇಹದ ಮಾಂಸಖಂಡಗಳನ್ನು ಮನಬಂದಂತೆ ಕುಣಿಸುವುದು, ವಿವಿಧ ಭಂಗಿಗಳಲ್ಲಿ ಶರೀರಸೌಷ್ಠವವನ್ನು ತೋರಿಸುವುದು - ಹೀಗೆ ಪ್ರದರ್ಶನದಲ್ಲಿ ವಿವಿಧ ಮಾಟಗಳಿರುತ್ತಿದ್ದವು. ಅಯ್ಯರ್ ಇಂಥ ಪ್ರದರ್ಶನಗಳಿಗೆ ತಮ್ಮದೇ ಆದ ಬೆಳಕಿನ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದ್ದರು; ಜೊತೆಗೆ ತಮ್ಮದೇ ನಿರೂಪಣೆ. ಅವರ ವ್ಯಾಯಾಮಶಾಲೆಗೆ ಕೈಲಾಸಂ, ಶಿವರಾಮ ಕಾರಂತ, ವಿಸೀ ಮುಂತಾದ ಅನೇಕ ಸಾಹಿತಿಗಳು ಭೇಟಿ ನೀಡುತ್ತಿದ್ದರು. ಅಯ್ಯರ್ ಅವರ ವಾಸದ ಮನೆಯ ಒಂದು ಮೂಲೆಯ ಒಂದು ಕಿರುಕೋಣೆ ಕೈಲಾಸಂ ಅವರ ‘ನೂಕ್’ ಆಗಿತ್ತು. ಕೈಲಾಸಂ ತಮ್ಮ ನಾಟಕಗಳ ಸಂಭಾಷಣೆಗಳನ್ನು ಮೌಖಿಕವಾಗಿ ಹೇಳುತ್ತಿದ್ದಂತೆ ಅಯ್ಯರ್ ಅವುಗಳನ್ನು ಬರೆದುಕೊಳ್ಳುತ್ತಿದ್ದರು. ಕೈಲಾಸಂ ಕೂಡ ಸ್ವಲ್ಪ ಕಾಲ ಅಯ್ಯರ್ ಅವರ ಶಾಲೆಯಲ್ಲಿ ವ್ಯಾಯಾಮ ಮಾಡಿದರಂತೆ. ಕೈಲಾಸಂ ಅವರ ದೃಷ್ಟಿಯಲ್ಲಿ ಮಹಾಭಾರತದ ಸುಯೋಧನನ ಮೈಕಟ್ಟು ಅಯ್ಯರ್ ಅವರ ದೇಹದಂತೆಯೇ ಇದ್ದಿರಬೇಕು. ಅವರು ಸುಯೋಧನ ಪಾತ್ರವನ್ನು ಸೃಷ್ಟಿಸಿದ್ದು ಅಯ್ಯರ್ ಅವರ ದೇಹವನ್ನು ದೃಷ್ಟಿಯಲ್ಲಿರಿಸಿಕೊಂಡೇ ಎಂದೂ ಹೇಳುತ್ತಾರೆ. ಬ್ರಾನ್ ಜೊತೆಗೆ ಬ್ರೈನೂ ಬೇಕು ಎಂದ ಕೈಲಾಸಂ ಮಾತು ಕೇಳಿಯೇ ಅಯ್ಯರ್ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಗಾಢವಾಗಿ ಬೆಳೆಸಿಕೊಂಡರೆಂಬುದು ಈಗ ಜನಜನಿತವಾದ ಕತೆ.
ಅಯ್ಯರ್ ಅವರಿಗೆ ಜ್ಞಾನದಾಹ; ಎಲ್ಲವನ್ನೂ ತಿಳಿದುಕೊಳ್ಳುವ ಹಂಬಲ. ಗಡಿಯಾರ, ಟೇಪ್ ರೆಕಾರ್ಡರ್, ರೇಡಿಯೋ ಮುಂತಾದ ಸಲಕರಣೆಗಳನ್ನು ಭಾಗಗಳಾಗಿ ಬಿಚ್ಚಿ ಅದರ ರಚನೆಯನ್ನು ಅರಿತು ಮತ್ತೆ ಅವುಗಳನ್ನು ಜೋಡಿಸುವುದು ಅವರ ಪ್ರಿಯವಾದ ಹವ್ಯಾಸ. ಕೈಲಾಸಂ ಅವರ ಪ್ರೇರಣೆಯಿಂದ ಸಾಹಿತ್ಯಾಭ್ಯಾಸದಲ್ಲಿ ತೊಡಗಿದ ಅಯ್ಯರ್, ತಮಗೆ ಡಿಗ್ರಿಯಿಲ್ಲದ ಕೊರತೆಯನ್ನು ನಿವಾರಿಸಿಕೊಳ್ಳಲು ಅಮೆರಿಕದ ದೈಹಿಕಶಿಕ್ಷಣ ಪ್ರಕೃತಿ ಚಿಕಿತ್ಸೆಗೆ ಸಂಬಂಧಿಸಿದ ಒಂದು ಸಂಸ್ಥೆಯಿಂದ ಡಿಗ್ರಿ ಪಡೆದು ‘ಪ್ರೊಫೆಸರ್’ ಆದರು. ಅವರಿಗೆ ಸಾವಿನನಂತರ ಆತ್ಮ ಉಳಿಯುವುದೆಂಬುದರಲ್ಲಿ ತುಂಬ ನಂಬಿಕೆ; ಸತ್ತವರ ಆತ್ಮದೊಡನೆ ಸಂಪರ್ಕ ಸಾಧಿಸುವುದರ ಬಗ್ಗೆ ಅಚಲ ವಿಶ್ವಾಸ. ಮೀಡಿಯಂ ಮೂಲಕ ಆತ್ಮದೊಡನೆ ಮಾತನಾಡಲು ಸಾಧ್ಯ ಎಂಬುದು ಅವರ ದೃಢ ನಿಲವು.
ಅಯ್ಯರ್ ಒಂದು ರೀತಿಯಲ್ಲಿ ಕ್ರಾಂತಿಕಾರಿ ಮನೋಭಾವದವರು. ಅವರು ಅನೇಕ ವಿಧವಾ ಹಾಗೂ ಅಂತರ್ಜಾತೀಯ ವಿವಾಹಗಳ ಉಸ್ತುವಾರಿ ಹೊತ್ತವರು. ಪ್ರಖ್ಯಾತ ಗಾಯಕಿ ಶ್ರೀಮತಿ ಎಂ.ಎಸ್. ಸುಬ್ಬುಲಕ್ಷ್ಮಿ ಮತ್ತು ಶ್ರೀ ಸದಾಶಿವಂ ಅವರ ಮದುವೆಯನ್ನು ಅಯ್ಯರ್ ಖುದ್ದಾಗಿ ನೆರವೇರಿಸಿದರಂತೆ. ಇಂತಹ ಅನೇಕ ಮದುವೆಗಳು ಅವರ ’ವ್ಯಾಯಾಮಶಾಲೆ’ಯಲ್ಲಿಯೇ ನೆರವೇರಿದವು. ಅನೇಕ ಸಂಗತಿಗಳಲ್ಲಿ ಅವರದು ನಂಬಿಕೆಯ ಮನಸ್ಸಾಗಿದ್ದರೂ, ಸಾಮಾಜಿಕ ವಿಷಯಗಳಲ್ಲಿ ಅವರು ಉದಾತ್ತ ರೀತಿಯ ಆಲೋಚನೆಗಳನ್ನು ಹೊಂದಿದ್ದವರು. ಇಂಥ ಸನ್ನಿವೇಶಗಳಲ್ಲ ಅವರು ಸಮಾಜದ ವಿರೋಧವನ್ನು ಕೆಚ್ಚೆದೆಯಿಂದ ಎದುರಿಸಬಲ್ಲವರಾಗಿದ್ದರು.
1948 ರಲ್ಲಿ ಅಯ್ಯರ್ ಈಗಿನ ಜಯಚಾಮರಾಜೇಂದ್ರ ರಸ್ತೆಗೆ ತಮ್ಮ ‘ವ್ಯಾಯಾಮಶಾಲೆ’ಯನ್ನು ವರ್ಗಾಯಿಸಿಕೊಂಡರು, ಸ್ವಂತ ಕಟ್ಟಡಕ್ಕೆ. ಅದು ಕೇವಲ ಶರೀರದಾರ್ಢ್ಯವನ್ನು ಪೋಷಿಸುವ ಸಂಸ್ಥೆ ಮಾತ್ರವಾಗಿರಲಿಲ್ಲ. ಕಲೆಯ ಪ್ರೋತ್ಸಾಹದ ತಾಣವೂ ಆಗಿತ್ತು. ಅವರಿಗೆ ಸಂಗೀತ-ನಾಟಕಗಳ ಹವ್ಯಾಸ. ಎಲ್ಲ ಬಗೆಯ ಸಂಗೀತವೂ ಅವರಿಗಿಷ್ಟ. ನಟನೆಯ ಮತ್ತು ನಟರ ಬಗ್ಗೆ ಅವರಿಗೆ ವಿಶೇಷ ಆದರ. ‘ರವಿ ಕಲಾವಿದರು’ ನಾಟಕತಂಡಕ್ಕೆ 1954 ರಿಂದ 1980 ರವರೆಗೂ ಅಯ್ಯರ್ ಅಧ್ಯಕ್ಷರಾಗಿ ಅದನ್ನು ಪೋಷಿಸಿದರು. ಈ ಕಲಾಬಳಗಕ್ಕಾಗಿ ಅಯ್ಯರ್ 1968 ನೇ ಇಸವಿಯ ಹೊತ್ತಿಗೆ ಸುಮಾರು ನಲವತ್ತು ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಸಂಗ್ರಹಿಸಿಕೊಟ್ಟಿದ್ದರು. ಆ ತಂಡ ಸುಮಾರು ಕಾಲು ಶತಮಾನ ಚಟುವಟಿಕೆಯಿಂದ ಕೂಡಿದ್ದು ಅನೇಕ ರಾಜ್ಯ ಮಟ್ಟದ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ, ಕೆಲವೊಮ್ಮೆ ಪ್ರಶಸ್ತಿ ಗಳಿಸಿ ಹೆಸರು ಮಾಡಿತು.
ಅಯ್ಯರ್ ಅವರಿಗೆ ಸಿನಿಮಾ ನೋಡುವ ಹುಚ್ಚು ಬಹಳ. ತಾವು ನೋಡುವುದಲ್ಲದೆ, ಗೆಳೆಯರನ್ನೂ ಕರೆದೊಯ್ಯುವುದು. ಅವರೊಡನೆ ತಾವು ನೋಡಿದ ಅನೇಕ ಪಾಶ್ಚಾತ್ಯ ಚಿತ್ರಗಳ ಬಗ್ಗೆ ಶಿವರಾಮ ಕಾರಂತರು ನೆನಪಿಸಿಕೊಳ್ಳುತ್ತಿದ್ದರು. ಚೆನ್ನಾಗಿದೆಯೆನಿಸಿದ ಚಿತ್ರಗಳನ್ನು ಹತ್ತಾರು ಬಾರಿ ನೊಡುವುದು ಅವರ ವಾಡಿಕೆ. ‘ರೂಪದರ್ಶಿ’ ಕಾದಂಬರಿಯಲ್ಲಿ ಬರುವ ಇಟಲಿಯ ವರ್ಣನೆಯನ್ನು ಓದಿದವರಿಗೆ ಲೇಖಕರು ಹತ್ತಾರು ಬಾರಿಯಾದರೂ ಆ ದೇಶವನ್ನು ನೋಡಿರಬೇಕೆಂದು ಅನುಮಾನ ಬರುವಷ್ಟು ಸಹಜತೆ ಕಾಣಿಸುತ್ತದೆ. ಆದರೆ ಅಯ್ಯರ್ ಅವರು ಒಮ್ಮೆಯಾದರೂ ವಿದೇಶಕ್ಕೆ ಹೋದವರಲ್ಲ. ಆದರೆ ಮಗ-ಸೊಸೆ ವಿದೇಶಗಳಿಗೆ ಹೋದಾಗ ಏನೇನು ನೋಡಬೇಕೆಂಬುದನ್ನು ವಿವರವಾಗಿ ಅಯ್ಯರ್ ಹೇಳಿ ಕಳಿಸುತ್ತಿದ್ದರಂತೆ. ಅವರ ಈ ಖಚಿತ ವಿದೇಶಜ್ಞಾನಕ್ಕೆ ಕಾರಣ ಸಿನಿಮ ಎಂದು ಕಾರಂತರು ಹೇಳುತ್ತಿದ್ದರು.
ಈ ರೀತಿ ಅಯ್ಯರ್ ಅವರದು ಕುತೂಹಲಕಾರಿಯಾದ ಜೀವನ. ದೇಹ-ಮನಸ್ಸುಗಳೆರಡಕ್ಕೂ ಸಮಾನ ಪ್ರಾಧಾನ್ಯ ನೀಡುತ್ತಿದ್ದ, ಎರಡರ ಹದಕ್ಕೂ ಬೆಲೆಯೀಯುತ್ತಿದ್ದ ಅಯ್ಯರ್ ಔಪಚಾರಿಕವಾಗಿ ಓದಿದ್ದು ಕಡಿಮೆಯಾದರೂ, ಅವರ ತಿಳಿವಳಿಕೆಯಾಗಲೀ ಅಭಿರುಚಿಯಾಗಲೀ ಅತ್ಯುತ್ಕøಷ್ಟ ಮಟ್ಟದ್ದು. ವ್ಯಾಯಾಮವನ್ನು ಜೀವನೋಪಾಯದ ಮಾರ್ಗವಾಗಿ ಆಯ್ದುಕೊಂಡರೂ, ವೃತ್ತಿಯಾಚೆಗೆ ಹಲವರ ರೋಗಗಳನ್ನು ವಾಸಿಮಾಡುವ ಹವ್ಯಾಸವನ್ನು ಹೊಂದಿದ್ದವರು. ಅವರು ಕಠಿಣ ದೇಹ ಕೋಮಲ ಮನಸ್ಸುಗಳ ಅಪೂರ್ವ ಸಂಗಮ ಎಂದು ಬಲ್ಲವರು ಹೇಳುತ್ತಾರೆ.
2
ಕೈಲಾಸಂ ಅವರ ಪ್ರೇರಣೆಯ ಮೇರೆಗೆ ಕೆ.ವಿ. ಅಯ್ಯರ್ ಸಾಹಿತ್ಯದ ಹುಚ್ಚು ಬೆಳೆಸಿಕೊಂಡದ್ದನ್ನು ಹಿಂದೆ ಗಮನಿಸಿದೆವಲ್ಲ, ಆ ಓದಿನ ರೀತಿ ಕಾಲ ಕಳೆಯುವ ಬಗೆಯದಲ್ಲ. ಕನ್ನಡ, ಸಂಸ್ಕøತ ಸರಿಯೇ, ಇಂಗ್ಲಿಷ್ ಪುಸ್ತಕಗಳನ್ನೂ ಓದುತ್ತಿದ್ದರು. ಹಳಗನ್ನಡ ಕಾವ್ಯಗಳನ್ನೂ ಓದುವಷ್ಟರ ಮಟ್ಟಿಗೆ ಅವರ ಓದು ಆಳಕ್ಕಿಳಿಯಿತು. ಪಂಪನ ಕಾವ್ಯವನ್ನು ತಮ್ಮ ‘ಬೆಡ್‍ಸೈಡ್ ಲವ್’ ಎಂದು ಕರೆಯುವಷ್ಟರ ಮಟ್ಟಿಗೆ ಅವರ ರುಚಿ ಹದಗೊಂಡಿತು. ಅವರ ಸಾಹಿತ್ಯ ರಚನೆಯೂ ಇದೇ ರೀತಿ ಸಾಗಿ ಬಂದದ್ದು. ‘ಸಮುದ್ಯತಾ’ ಎಂಬ ಅಯ್ಯರ್ ಅವರ ಕಥಾ ಸಂಕಲನಕ್ಕೆ ಮುನ್ನುಡಿ ಬರೆದಿರುವ ಜಿ.ಪಿ. ರಾಜರತ್ನಂ ಅಯ್ಯರ್ ಅವರ ಸಾಹಿತ್ಯ ಕೃಷಿಯ ಬಗ್ಗೆ ಕೆಲವು ಕುತೂಹಲಕರ ವಿಷಯಗಳನ್ನು ಹೇಳುತ್ತಾರೆ. ಸುಮಾರು ನಲವತ್ತನೇ ಇಸವಿಯ ಹೊತ್ತಿಗೆ ಕೈಬರಹದ ಒಂದು ನೋಟ್ ಬುಕ್ಕನ್ನು ಇವರ ಕೈಗಿತ್ತು, “ಇದನ್ನು ಓದಿ ನೋಡಿ” ಎಂದರಂತೆ. ಅದು ಕತೆಯ ಹಾಗಿತ್ತು, ಆದರೆ ಅದರಲ್ಲಿ ಯಾವ ರುಚಿಯೂ ಕಾಣಿಸಲಿಲ್ಲ. ಇದನ್ನು ಅಯ್ಯರ್ ಅವರಿಗೆ ಹೇಳಲಾರದೆ ಅವರ ಕಣ್ತಪ್ಪಿಸಿ ಓಡಾಡುತ್ತಿದ್ದರು. ಮುಂದೆ ಒಂದು ದಿನ ರಾಜರತ್ನಂ ಅವರನ್ನು ತಮ್ಮ ಮನೆಗೆ ಕರೆದೊಯ್ದು ತಮ್ಮ ‘ದೆಯ್ಯದ ಮನೆ ಅಥವಾ ಆಷಾಢ ಬಹುಳ ಅಮಾವಾಸ್ಯೆ’ ಎಂಬ ನೀಳ್ಗತೆ ಓದಿದರಂತೆ. ಅದನ್ನು ಕೇಳಿ ರಾಜರತ್ನಂ ಅವರಿಗೆ ಅಯ್ಯರ್ ಅವರ ಬರಹದ ಶಕ್ತಿಯ ಬಗೆಗಿನ ಅಭಿಪ್ರಾಯ ಬದಲಾಯಿತು. ಹಿಂದೆ ರಾಜರತ್ನಂ ಅಯ್ಯರ್ ಅವರ ಕಣ್ತಪ್ಪಿಸಿ ಓಡಾಡಲು ಕಾರಣವಾದ ಬರಹದ ಪ್ರಸ್ತಾಪ ಬಂತಲ್ಲ, ಮುಂದೆ ಅದನ್ನೇ ಪರಿಷ್ಕರಿಸಿದಾಗ ಮೂಡಿಬಂದದ್ದು ಅವರ ಪ್ರಖ್ಯಾತ ಕಾದಂಬರಿ ‘ರೂಪದರ್ಶಿ’. ‘ಶಾಂತಲಾ’ ಕಾದಂಬರಿಯನ್ನು ಓದಿದ ಮೇಲಂತೂ “ಶಾರದೆ ಯಾವ ಹೊತ್ತಿಗೆ ಯಾರನ್ನು ತನ್ನ ಉಪಕರಣವಾಗಿ ಎತ್ತಿಕೊಳ್ಳುತ್ತಾಳೋ” ಎನ್ನಿಸಿತಂತೆ.
ಈ ಹಿಂದೆ ಪ್ರಸ್ತಾಪಿಸಿದ ವ್ಯಾಯಾಮ ಸಂಬಂಧಿ ಗ್ರಂಥಗಳನ್ನಲ್ಲದೆ ಅಯ್ಯರ್ ಬರಹದ ಸಂಖ್ಯೆ ಬಹಳವಲ್ಲ. ವ್ಯಾಯಾಮ ಗ್ರಂಥಗಳು ಇಂಗ್ಲಿಷಿನವು, ಸೃಜನಶೀಲ ಬರವಣಿಗೆ ಕನ್ನಡದ್ದು. ಅವರು ‘ರೂಪದರ್ಶಿ’ ಮತ್ತು ‘ಶಾಂತಲಾ’ ಎಂಬ ಎರಡು ಕಾದಂಬರಿಗಳನ್ನು ಬರೆದರು. (‘ಲೀನಾ’ ಎಂಬ ಮತ್ತೊಂದು ಕಾದಂಬರಿ ಇದೆಯಾದರೂ, ಅದು ‘ರೂಪದರ್ಶಿ’ಯ ಮುಂದಿನ ಭಾಗ; ಚಿಕ್ಕದು, ಜೊತೆಗೆ ಮೊದಲರ್ಧ ‘ರೂಪದರ್ಶಿ’ಯ ಕೊನೆಯ ಭಾಗದ ಕೆಲವಧ್ಯಾಯಗಳ ಪುನರಾವರ್ತನೆ. ಹೀಗಾಗಿ ಅದನ್ನು ಸ್ವತಂತ್ರ ಕೃತಿ ಎನ್ನುವುದು ಕಷ್ಟ.) ‘ಸಮುದ್ಯತಾ’ ಎಂಬ ಏಕೈಕ ಕಥಾಸಂಕಲನ. ‘ಕೈಲಾಸಂ ಸ್ಮರಣೆ’ ಎಂಬ ಜ್ಞಾಪಕಚಿತ್ರ. ಇಷ್ಟೇ ಅವರ ಸ್ವಂತ ರಚನೆ. ಆದರೆ ಅವರು ಕೆಲವು ಅನುವಾದ-ರೂಪಾಂತರಗಳನ್ನೂ ಮಾಡಿದ್ದಾರೆ. ಶೂದ್ರಕನ ಸಂಸ್ಕøತ ನಾಟಕ ‘ಮೃಚ್ಛಕಟಿಕ’ವನ್ನವರು ಸಂಗ್ರಹಿಸಿ, ಒಂದೆರಡು ಕಿರು ಮಾರ್ಪಾಟುಗಳೊಂದಿಗೆ ಅದರ ರಂಗಪಠ್ಯವನ್ನು ಸಿದ್ಧಗೊಳಿಸಿದರು. ಇಂಗ್ಲಿಷಿನಿಂದ ಅಥವಾ ಇಂಗ್ಲಿಷ್ ಮೂಲಕ ಕನ್ನಡಕ್ಕೆ ರೂಪಾಂತರಿಸಿದ ನಾಟಕಗಳ ಸಂಖ್ಯೆ ನಾಲ್ಕು: ಇಬ್ಸೆನ್‍ನ ಮೂರು ಮತ್ತು ಆಲಿವರ್ ಗೋಲ್ಡ್‍ಸ್ಮಿತ್‍ನ ಒಂದು. ಇವುಗಳಲ್ಲಿ ‘ಮೃಚ್ಛಕಟಿಕ’ 1978 ರಲ್ಲಿ, ಅವರ ಜೀವಿತ ಕಾಲದಲ್ಲಿಯೇ, ಮುದ್ರಣಗೊಂಡಿದ್ದರೂ ಉಳಿದ ನಾಟಕಗಳು ಮರಣಾನಂತರದ ಪ್ರಕಟನೆಗಳು. ಅನ್ಯ ಭಾಷೆಯಿಂದ ಕನ್ನಡಕ್ಕೆ ತಂದುವನ್ನು ಬಿಟ್ಟರೆ ಅವರ ಸ್ವಂತ ಕೃತಿಗಳು ಸಂಖ್ಯೆಯ ದೃಷ್ಟಿಯಿಂದ ಬಹಳ ಕಮ್ಮಿ; ಕೇವಲ ನಾಲ್ಕು ಅಥವಾ ಐದು. ಆದರೆ ಅವರು ತಮ್ಮ ಕೃತಿಗಳ ಮೂಲಕ, ಅದೂ ಎರಡು ಕಾದಂಬರಿಗಳಿಂದ, ಕನ್ನಡ ಒದುಗರ ಮೇಲೆ ಬೀಸಿದ ಮೋಡಿ ಅಚ್ಚರಿ ಹುಟ್ಟಿಸುವಂಥದು.
3
       ಮೊದಲು ಅಯ್ಯರ್ ಅವರಿಗೆ ಹೆಸರು-ಜನಪ್ರಿಯತೆಗಳನ್ನು ತಂದಿತ್ತ ಕಾದಂಬರಿಗಳನ್ನು ಕುರಿತು ಪರಿಶೀಲಿಸಬಹುದು. ಅವರು ಮೊದಲು ಬರೆದು, ಪರಿಷ್ಕರಿಸಿ, ಪ್ರಕಟಿಸಿದ ಕಾದಂಬರಿ ‘ರೂಪದರ್ಶಿ’. ಫ್ಲಾರೆನ್ಸ್ ನಗರದ ಚರ್ಚಿನಲ್ಲಿ ಏಸುವಿಗೆ ಸಂಬಂಧಿಸಿದ ಜೀವನವನ್ನು ಚಿತ್ರಿಸಬೇಕಾದಾಗ ಮೈಕೇಲ್ ಏಂಜೆಲೋ ಮೊದಲು ಮುಗ್ಧತೆಯ ಸಾಕಾರನಾದ ಬಾಲ ಏಸುವನ್ನು, ನಂತರ ಕೆಡುಕಿನ ಪ್ರತಿರೂಪವಾದ ಜೂದಾಸನನ್ನು ಚಿತ್ರಿಸಲು ರೂಪದರ್ಶಿಗಳನ್ನು ಹುಡುಕಿಕೊಂಡು ಹೋಗಿ. ಕೊನೆಗೆ ಸೂಕ್ತರಾದವರನ್ನು ಆಯ್ದುಕೊಂಡು ತನ್ನ ಚಿತ್ರೀಕರಣ ಕಾರ್ಯವನ್ನು ಮುಗಿಸುವುದು ಈ ಕಾದಂಬರಿಯ ಕಥಾವಸ್ತು. ‘ರೀಡರ್ಸ್ ಡೈಜೆಸ್ಟ್’ನಲ್ಲಿ ಕಾಣಿಸಿಕೊಂಡಿದ್ದ ಒಂದು ಪುಟದ ಬರವಣಿಗೆಯನ್ನು ಓದಿ ಈ ಕಾದಂಬರಿಯನ್ನು ತಾವು ರಚಿಸಿದುದಾಗಿ ಲೇಖಕರೇ ಹೇಳಿಕೊಂಡಿದ್ದಾರೆ. ತುಂಬ ತೆಳುವಾದ ಈ ಕತೆಯನ್ನು ಅಯ್ಯರ್ ತಮ್ಮ ಕಲ್ಪನಾವಿಲಾಸದಿಂದ ಹಿಗ್ಗಲಿಸಿರುವುದು ಮಾತ್ರವಲ್ಲದೆ ಓದುಗರ ಮನಸ್ಸನ್ನು ಸೆರೆಹಿಡಿಯುವ ಕಾದಂಬರಿಯಾಗಿಸಿದ್ದಾರೆ.
       ಸುಮಾರು ಐನೂರು ವರ್ಷಗಳಷ್ಟು ಹಿಂದೆ ಇಟಲಿಯ ಇಟಲಿಯ ಫ್ಲಾರೆನ್ಸ್ ನಗರದಲ್ಲಿ ಅಲ್ಲಿನ ಚರ್ಚ್ ಕಟ್ಟಡ ಮುಗಿದ ಬಳಿಕ ಅದರಲ್ಲಿ ಏಸುವಿನ ಜೀವನಚರಿತ್ರೆಯನ್ನು ಚಿತ್ರಿಸಬೇಕೆಂದು ನಿರ್ಧರಿಸಿ ದೇವಾಲಯದ ಧರ್ಮದರ್ಶಿಗಳು ಆ ಕೆಲಸಕ್ಕೆ ಮೈಕೇಲ್ ಏಂಜೆಲೋನನ್ನು ಒಪ್ಪಿಸುತ್ತಾರೆ. ಆತ ಏಸುವಿನ ಮುಗ್ಧತೆ ದಿವ್ಯತೆಗಳನ್ನು ಮೂಡಿಸಲು ಒಬ್ಬ ರೂಪದರ್ಶಿ ಬೇಕೆಂದು ಅವನ ಅನ್ವೇಷಣೆಗೆ ಹೊರಡುತ್ತಾನೆ. ಪೀಸಾ ನಗರಕ್ಕೆ ಬಂದಾಗ ಅಲ್ಲಿ ಅವನಿಗೆ ಆಕಸ್ಮಿಕವಾಗಿ ಕಂಡ ಅರ್ನೆಸ್ಟೋ ಎಂಬ ಬಾಲಕನನ್ನು ಆಯ್ಕೆ ಮಾಡಿಕೊಂಡು, ಆ ಹುಡುಗನ ಏಕೈಕ ದಿಕ್ಕಾಗಿದ್ದ ಅಜ್ಜಿಯನ್ನು ಒಪ್ಪಿಸಿ, ಅವಳಿಗೆ ಸಕಲ ಅನುಕೂಲಗಳನ್ನು ಒದಗಿಸಿ ಫ್ಲಾರೆನ್ಸ್‍ಗೆ ಹುಡುಗನನ್ನು ಕರೆತಂದು ಬಾಲ ಏಸುವಿನ ಚಿತ್ರಣವನ್ನೆಲ್ಲ ಸಮರ್ಪಕವೆನ್ನಿಸುವಂತೆ ಮಾಡಿ ಮುಗಿಸಿದ. ಆನಂತರ ಹುಡುಗ ತನ್ನ ಪಾಡಿಗೆ ತಾನು ಹೋದ. ಮೈಕೇಲ್ ಏಂಜೆಲೋ ಮುಂದೆ ಏಸು ಜೀವನದ ಅನೇಕ ಭಾಗಗಳ ಚಿತ್ರಣ ಮಾಡಿದ. ಇನ್ನು ಏಸುವಿನ ಕೊನೆಯ ದಿನಗಳ ಚಿತ್ರಣ ಬಾಕಿ ಉಳಿಯಿತು. ಆಗ ಚಿತ್ರಕಾರನಿಗೆ ಮತ್ತೊಮ್ಮೆ ರೂಪದರ್ಶಿಯ ಆವಶ್ಯಕತೆ ತಲೆದೋರಿತು: ಈ ಸಲ, ಏಸುವಿಗೆ ದ್ರೋಹ ಬಗೆದ ಅವನ ಆಪ್ತ ಶಿಷ್ಯ ಜೂದಾಸ್ ಇಸ್ಕಾರಿಯತ್‍ನ ಚಿತ್ರಣಕ್ಕಾಗಿ. ಅಷ್ಟು ಹೊತ್ತಿಗೆ ಸಾಕಷ್ಟು ವರ್ಷಗಳೇ ಸಂದಿದ್ದವು; ಆಗ ಮೈಕೇಲನಿಗೆ ಸುಮಾರು ಅರುವತ್ತು ವರ್ಷಗಳು. ಸರಿ, ಅವನು ಮತ್ತೊಮ್ಮೆ ರೂಪದರ್ಶಿಯ ಅನ್ವೇಷಣೆಗೆ ಹೊರಟ. ಎಲ್ಲೆಲ್ಲೋ ಸುತ್ತಾಡಿ ಎಂಪೋಲಿ ಎಂಬ ಹಳ್ಳಿಗೆ ಬಂದ. ಅದು ಸೈತಾನನ ಊರು ಎಂದೇ ಪ್ರಸಿದ್ಧವಾಗಿತ್ತು. ಆ ಊರಿನ ಹೆಂಡದ ಪಡಖಾನೆಯ ಬಳಿ ಕುಡುಕರ ಗುಂಪೊಂದನ್ನು ನೋಡಿದ; ಅದರಲ್ಲಿ ತನ್ನ ಕಲ್ಪನೆಯ ಜೂದಾಸನ ಪ್ರತಿಬಿಂಬದಂತಹ ವ್ಯಕ್ತಿಯೊಬ್ಬನನ್ನು ಕಂಡ. ಅವನ ಹೆಸರು ಗರಿಬಾಲ್ಡಿ; ಅವನಿಗೆ ಹಣದ ಆಸೆ ತೋರಿಸಿ ತನ್ನೊಡನೆ ಕರೆತಂದು ತನ್ನ ಕೆಲಸ ಆರಂಭಿಸಿದ.
       ಗರಿಬಾಲ್ಡಿ ಅಲ್ಲಿ ಆ ಹಿಂದೆ ಮೈಕೇಲ್ ಚತ್ತಿಸಿದ್ದ ಬಾಲ ಏಸುವಿನ ಚಿತ್ರಗಳನ್ನೇ ನೋಡುತ್ತಿರುವಾಗ ಅವನ ಮೈ ಕಂಪಿಸಲು ತೊಡಗಿತು, ಮುಖದಲ್ಲಿ ವಿಚಿತ್ರ ಪ್ರತಿಕ್ರಿಯೆ; ಶಕ್ತಿ ಕುಂದಿದಂತೆ ಜೋರಾಗಿ ಅರಚುತ್ತ ತಾನು ಕೂತಿದ್ದ ಅಟ್ಟದ ಮೇಲಿಂದಲೇ ಉರುಳಿ ಬಿದ್ದ. ಶೀತಲೋಪಚಾರವಾದ ಮೇಲೆ ಅವನು ಮೈಕೇಲ್ ಅನ್ನು ಹಿಂದೆ ಕರೆಯುತ್ತಿದ್ದಂತೆ ‘ಚಿಕ್ಕಪ್ಪ’ ಎಂದು ಕರೆದಾಗ ಮೈಕೇಲ್‍ಗೆ ಅಚ್ಚರಿ. ಕ್ರೌರ್ಯದ ಪ್ರತಿರೂಪ ಜೂದಾಸನ ರೂಪದರ್ಶಿ ಅಗಲು ಬಂದ ಗರಿಬಾಲ್ಡಿಯೇ ಮುಗ್ಧತೆಯ ಸಾಕಾರವಾದ ಬಾಲ ಏಸುವಿನ ರೂಪದರ್ಶಿಯಾದ ಅರ್ನೆಸ್ಟೋ. ಮೈಕೇಲ್‍ನ ಬಲವಂತಕ್ಕೊಳಗಾಗಿ ಗರಿಬಾಲ್ಡಿ ಈ ನಡುವಣ ಕತೆ ಹೇಳಿದ: ಮತ್ತೆ ಪೀಸಾಕ್ಕೆ ಮರಳಿದ ಅರ್ನೆಸ್ಟೋ ಅಜ್ಜಿಯನ್ನು ಕಳೆದುಕೊಂಡು ನಾನಾ ಕಷ್ಟಗಳಿಗೊಳಗಾಗುತ್ತಾನೆ. ಊರೂರು ಅಲೆಯುತ್ತ ಕರಾರಾ ನಗರಕ್ಕೆ ಬಂದು ಅಮೃತಶಿಲೆಯ ವ್ಯಾಪಾರಿ ಟಾಯಿಟ್ ಬಳಿ ಕೆಲಸಕ್ಕಿದ್ದಾಗ, ಇವನು ತನ್ನ ಹೆಂಡತಿಯನ್ನು ಆಕರ್ಷಿಸುವನೆಂಬ ಅನುಮಾನದಿಂದ ಅವನು ಅರ್ನೆಸ್ಟೋ ಮುಖದ ಮೇಲೆ ಕಲ್ಲನ್ನು ಎತ್ತಿ ಹಾಕಿ ವಿರೂಪಗೊಳಿಸುತ್ತಾನೆ. ತನ್ನ ಪ್ರೇಯಸಿ ಯುವೋನಳನ್ನು ನೋಡಲಾಗದ ಅವನ ಮನಸ್ಸಿನಲ್ಲಿ ಸಂಪೂರ್ಣ ಬದಲಾವಣೆಯಾಗಿ “ತನ್ನಗಿನ್ನು ಸೈತಾನನೇ ದಿಕ್ಕು” ಎಂಬ ಮನೋಭಾವವುಂಟಾಗುತ್ತದೆ. ಟಾಯಿಟ್‍ನನ್ನು ಕೊಲ್ಲುವ ಏಕೈಕ ಉದ್ದೇಶದಿಂದ ಕಾಯುತ್ತಿದ್ದು, ಒಮ್ಮೆ ಅವನಿಗೆ ಏಟು ಕೊಟ್ಟಾಗ ಅವನು ಕೊಟ್ಟ ತಿರುಗೇಟಿನಿಂದ ನದಿಗೆ ಬಿದ್ದು ತನ್ನ ಸ್ಮರಣಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಮುಂದೆ ಗರಿಬಾಲ್ಡಿಯೆನಿಸುತ್ತಾನೆ; ಈಗ ಬಾಲ ಏಸುವಿನ ಚಿತ್ರಗಳನ್ನು ಕಂಡು ಅವನ ನೆನಪು ಮರುಕಳಿಸಿರುತ್ತದೆ. ಆಗ ಸಂಜೆ, ದೇವಾಲಯದ ಗಂಟೆಗಳು ಬಾರಿಸುವಾಗ ಗರಿಬಾಲ್ಡಿ ಅಟ್ಟಣೆಯಿಂದ ಕೆಳಗೆ ಬಿದ್ದು ಸಾಯುತ್ತಾನೆ.
       ಇಷ್ಟು ಕತೆಯನ್ನು ಅಯ್ಯರ್ ನಾಲ್ಕು ಭಾಗಗಳಲ್ಲಿ, ಸುಮಾರು ಮುನ್ನೂರು ಪುಟಗಳಲ್ಲಿ ನಿರೂಪಿಸುತ್ತಾರೆ. ಕಾದಂಬರಿಯ ಓಟ ಸುಲಲಿತವಾಗಿದೆ, ಓದುಗನ ಮನಸ್ಸನ್ನು ಗೆದ್ದು ಸಾಗುತ್ತದೆ. ಕಾದಂಬರಿಯ ವಸ್ತು ಅಥವಾ ಕೇಂದ್ರ ಸಮಸ್ಯೆ, ಮಗುವಿನ ಮುಗ್ಧತೆ ವಯಸ್ಸಾದಂತೆ ಮಾಯವಾಗುತ್ತ ದೊಡ್ಡವನಾದ ಮೇಲೆ ಪೂರ್ತಿ ಕಣ್ಮೆರೆಯಾಗುವುದಲ್ಲ ಎಂಬ ಅಚ್ಚರಿ. ಹೀಗಾಗಲು ಕಾರಣ ಮನುಷ್ಯ ತನ್ನ ಬದುಕಿನಲ್ಲಿ ಅನುಭವಿಸುವ ಕಷ್ಟ ಪರಂಪರೆ ಎಂಬುದು ಲೇಖಕರ ನಂಬಿಕೆ. ಅರ್ನೆಸ್ಟೋ ಜಿಯೋವನಿಯ ಮನೆಯ ಕಷ್ಟ ಅನುಭವಿಸಿ, ಕಳ್ಳತನದ ಆರೋಪಕ್ಕೆ ಒಳಗಾಗಿ, ಪೋಲೀಸರ ದೌರ್ಜನ್ಯಕ್ಕೊಳಗಾಗುತ್ತಾನೆ. ಸ್ವಲ್ಪ ಕಾಲ ನೆಮ್ಮದಿಯೆನಿಸಿದರೂ ಮತ್ತೆ ಟಾಯಿಟ್ಟನ ಕ್ರೌರ್ಯಕ್ಕೊಳ್ಳಗಾಗುತ್ತಾನೆ, ಅಲ್ಲೂ ಕಳ್ಳತನದ ಆರೋಪಕ್ಕೊಳಗಾಗುತ್ತಾನೆ. ಹೀಗಾಗುವುದು ಯಾಕೆ? ದುರದೃಷ್ಟದಿಂದಲೇ? ಅದಕ್ಕೆ ಕಾರಣವೇನು? ಹೇಳುವುದು ಕಷ್ಟ. ಮೈಕೇಲ್ ತನಗೆ ಹಣದ ಆಸೆ ತೋರಿಸಿ ಕರೆದೊಯ್ದುದೇ ಇದಕ್ಕೆಲ್ಲ ಕರಣವೆಂದು ಅರ್ನೆಸ್ಟೋ ಆರೋಪಿಸುತ್ತಾನೆ. ಅಂದರೆ ಹಣವೇ ಇದಕ್ಕೆ ಕಾರಣ. ಆದರೆ ಹಣವಿರುವ ಕೆಲವರು ಒಳ್ಳೆಯವರೂ ಇರುತ್ತಾರಲ್ಲ, ಹೇಗೆ!
       ಅತೀವ ಕಷ್ಟ ಪರಂಪರೆಯಿಂದ ತಾನು ಕೆಡುಕಿನ ಆರಾಧಕನಾದೆನೆಂದು ಅರ್ನೆಸ್ಟೋ ಹೇಳಿಕೊಳ್ಳುತ್ತಾನೆ. ತನ್ನ ರೂಪು-ಸುಖ-ಶಾಂತಿಗಳು ಟಾಯಿಟ್ಟನಿಂದ ನಾಶವಾದಾಗ ಅವನು “ಇನ್ನು ನನಗೆ ಸೈತಾನನೇ ಗತಿ” ಎಂದು ನಿರ್ಧರಿಸುತ್ತಾನೆ. ಅರ್ನೆಸ್ಟೊನ ಕಷ್ಟ ಪರಂಪರೆಗೆ ಅವನ ದುರ್ದೈವ ಕಾರಣವೆಂದು ಲೇಖಕರು ಭಾವಿಸಿದರೂ, ತನಗೆ ಬೇರೆ ಆಯ್ಕೆಗಳಿದ್ದರೂ ಅಪಾಯಕಾರಿ ದಾರಿ ಹಿಡಿಯುವ ಅವನ ತಪ್ಪು ಆಯ್ಕೆಯೇ ಅವನ ಕಷ್ಟಗಳಿಗೆ ಕಾರಣವಲ್ಲವೇ? ಎಂಬ ಪ್ರಶ್ನೆ ನಮ್ನನ್ನು ಕಾಡುತ್ತದೆ. ದೈವ-ಸೈತಾನ ಈ ಎರಡೂ ಮನುಷ್ಯನನ್ನು ಮಾನವ ಸಹಜತೆಯಿಂದ ದೂರ ಸರಿಸುತ್ತವೆ; ಎರಡೂ ಅತಿರೇಕಗಳು ಮಾನವನನ್ನು ಅಸಹಜವಾಗಿಸುತ್ತವೆ. ಮಾನವನೆಂದರೆ ಒಳಿತು-ಕೆಡುಕುಗಳ ಒಂದು ಬಗೆಯ ಸಮತೋಲನ. ಮನುಷ್ಯರಲ್ಲಿ ಹಣ ಸೈತಾನತ್ವವನ್ನು ಮೂಡಿಸುತ್ತದೆಂದು ಲೇಖಕರು ಒಮ್ಮೆ ಹೇಳಿದರೆ, ಮತ್ತೊಮ್ಮೆ ಮಾಂಸಾಹಾರ ಎನ್ನುತ್ತಾರೆ. ಇಂಥ ತರ್ಕವನ್ನು ಒಪ್ಪಲು ಸಾಧ್ಯವಿಲ್ಲ. ಅಲ್ಲದೆ, ಅರ್ನೆಸ್ಟೋನನ್ನು ಸೈತಾನ ಆವರಿಸಿಕೊಂಡರೂ ಅವನ ಕ್ರೋಧ ಟಾಯಿಟ್ ವಿರುದ್ಧ, ಲೀನಾ ಬಗ್ಗೆ ಅವನಿಗೆ ಅತೀವ ಗೌರವ. ಅವನಿಗೆ ಯುವೋನಾ ಬಗ್ಗೆ, ಲಿಸ್ಸಾ ತಾಯಿ, ಅಜ್ಜಿಯರ ಬಗ್ಗೆಯೂ ಮೃದು ಭಾವನೆಗಳಿವೆ. ಅಂದರೆ ಅವನಲ್ಲಿ ತಾರತಮ್ಯ ಜ್ಞಾನ ಅಳಿದಿಲ್ಲ ಅಲ್ಲವೇ? ಅರ್ನೆಸ್ಟೊನಲ್ಲಿ ಸೈತಾನ ಹೊಕ್ಕ ಮೇಲೆ ಒಮ್ಮೆ ಬೆಟ್ಟದ ಮೇಲೆ ಹೆಣ್ಣು ಆಡೊಂದರ ಹಾಲು ಹಿಂಡಿ ಕುಡಿದು ಅದನ್ನು ಕೊಲ್ಲಲು ಹಿಂಜರಿಯುತ್ತಾನೆ.
       ಸುಖ-ದುಃಖ, ಪ್ರೀತಿ-ಕ್ರೌರ್ಯ, ಒಳಿತು-ಕೆಡುಕು ಇವುಗಳನ್ನು ಅತಿರೇಕದ ಸ್ಥಿತಿಯಲ್ಲಿ ಚಿತ್ರಿಸಿ ಲೇಖಕರು ಭಾವುಕ ವಾತಾವರಣವನ್ನು ಸೃಷ್ಟಿಸುತ್ತಾರೆ; ಅದರಲ್ಲಿ ಓದುಗ ತಾರ್ಕಿಕತೆಯನ್ನು ಮರೆಯುತ್ತಾನೆ. ಅರ್ನೆಸ್ಟೋ ದೈವದಲ್ಲಿ ನಂಬಿಕೆಯಿದ್ದಾಗಲೂ ಕೆಲವು ತಪ್ಪು ನಿರ್ಧಾರಗಳನ್ನು ಮಾಡುತ್ತಾನೆ, ಸೈತಾನ ಹೊಕ್ಕ ಮೇಲೆಯೂ ತಪ್ಪು ನಿರ್ಧಾರಗಳನ್ನು ಮಾಡುತ್ತಾನೆ. ಅಂದರೆ ಅವನ ಕಷ್ಟಗಳಿಗೆ ಮುಖ್ಯ ಕಾರಣ ಅವನ ತಪ್ಪು ನಿರ್ಧಾರಗಳು ಎಂದೇಕೆ ಭಾವಿಸಬಾರದು?    
       ಅತಿರೇಕದ ಚಿತ್ರಣವನ್ನು ಆಯ್ದುಕೊಳ್ಳುವ ಲೇಖಕ ಭಾವುಕ ಸ್ಥಿತಿಯನ್ನು ನಿರ್ಮಿಸಿ, ಅನಿವಾರ್ಯವಾಗಿ ಕಪ್ಪು-ಬಿಳಿಪು ಪಾತ್ರಗಳನ್ನು ಚಿತ್ರಿಸುವಂತಾಗುತ್ತದೆ. ‘ರೂಪದರ್ಶಿ’ಯಲ್ಲಿ ಆಗಿರುವುದೂ ಇದೇ. ಮುಖ್ಯ ಪಾತ್ರಗಳೆಲ್ಲ, ಒಂದೆಡೆ ದೋಷರಹಿತ ಒಳ್ಳೆಯ ಪಾತ್ರಗಳು, ಮತ್ತೊಂದೆಡೆ ಸೈತಾನನ ಪ್ರತಿರೂಪಗಳು. ಲಿಸ್ಸಾ, ನನ್ನೆಟ್ಟಿ, ಮಾರ್ಕಸ್, ಮೈಕೇಲ್, ಪೀಸಾ ನಗರದಿಂದ ಹೊರಬಂದಾಗ ಜೊತೆಗೆ ಬರುವ ನಾಯಿ ಇವೆಲ್ಲ ನೂರಕ್ಕೆ ನೂರು ಒಳ್ಳೆಯ ಪಾತ್ರಗಳು.
       ಪೂರ್ತಿ ಒಳ್ಳೆಯತನದ ಸಾಕಾರವಾಗಿದ್ದ ಅರ್ನೆಸ್ಟೋ ಪೂರ್ಣ ಕೆಟ್ಟ ಪಾತ್ರವಾದ ಗರಿಬಾಲ್ಡಿಯಾಗುತ್ತಾನೆ. ತನ್ನ ಬಗೆಗಿನ ಆತ್ಮಾನುಕಂಪದ ಕಾರಣದಿಂದಲೇ ಅರ್ನೆಸ್ಟೋ ತನಗೆ ಒದಗಿ ಬಂದ ಸಹಾಯವನ್ನೆಲ್ಲ ತಿರಸ್ಕರಿಸುತ್ತಾನೆ: ಲಿಸ್ಸಾ, ನನ್ನೆಟ್ಟಿ, ತೋಟದ ಮಾಲೀPನಾಗಿದ್ದÀ ಲಿಸ್ಸಾ ಅಣ್ಣ, ಯುವೋನಾ - ಹೀಗೆ ಒಳ್ಳೆಯವರ ಸಹಾಯ ಸಹವಾಸಗಳನ್ನು ತಿರಸ್ಕರಿಸಿ ಅರ್ನೆಸ್ಟೊ ಒಂದು ಬಗೆಯಲ್ಲಿ ಸೈತಾನನನ್ನು ತನ್ನೆಡೆಗೆ ಆಹ್ವಾನಿಸುತ್ತಾನೆ ಎನಿಸುತ್ತದೆ. ಅವನೇ ಎರಡು ಅತಿರೇಕಗಳ ಸಮ್ಮಿಲನವಾಗಿದ್ದಾನೆ.
       ಕಾದಂಬರಿಯ ಕಟ್ಟಡ ಚೆನ್ನಾಗಿದೆ. ಮೈಕೇಲ್ ಏಂಜೆಲೋ, ಟಾಯಿಟ್, ಜಿಯೋವನಿ, ಫ್ಲಾರೆನ್ಸ್‍ನ ದೇವಾಲಯ ಇವುಗಳಿಗೆ ಕಲ್ಪಿಸಿರುವ ಸಂಬಂಧವು ಕೌಶಲಪೂರ್ಣವಾಗಿದ್ದು ಸನ್ನಿವೇಶಗಳ ಬೆಳವಣಿಗೆಗೆ ಪೂರಕವಾಗಿದೆ. ಅರ್ನೆಸ್ಟೋ ಗರಿಬಾಲ್ಡಿಯಾಗುವ ಪರಿಯಂತೂ ಮನಮುಟ್ಟುವ ರೀತಿಯಲ್ಲಿ ಚಿತ್ರಿತವಾಗಿದೆ. ಕಾದಂಬರಿಯ ಶೈಲಿ ಅದರ ಆಶಯಕ್ಕೆ ಅನುಗುಣವಾಗಿದೆ, ಎಂದರೆ ಅದರ ಭಾವುಕ ಸನ್ನಿವೇಶಗಳಿಗೆ ಪೂರಕವಾಗಿದೆ. ಕಾದಂಬರಿಯ ಬಹುಭಾಗ ನಿರೂಪಣೆಯಿಂದ ಕೂಡಿದೆ. ಅಲ್ಲಿನ ಸಂಭಾಷಣೆಗಳು ಕೂಡ ನಿರೂಪಣೆಯಂತೆ ಕಾಣುವಷ್ಟು ದೀರ್ಘವಾಗುತ್ತವೆ. ಆದರೆ ಸನ್ನಿವೇಶಗಳು ಭಾವುಕತೆಯಲ್ಲಿ ತೋಯುವುದರಿಂದ ಈ ದೀರ್ಘತೆ ಅರಿವಿಗೇ ಬರುವುದಿಲ್ಲ. ಸಂಭಾಷಣೆಯ ಭಾಷೆಯೂ ನಿರೂಪಣೆಯದರಂತೆಯೇ ಗ್ರಾಂಥಿಕವಾಗಿದೆ.
       ಕಾದಂಬರಿಯ ಕತೆಯ ಓಟವನ್ನಾಗಲೀ ಪಾತ್ರಗಳನ್ನಾಗಲೀ ಲೇಖಕರು ಅವುಗಳ ಪಾಡಿಗೆ ಬಿಡುವುದಿಲ್ಲ. ಕಾದಂಬರಿಯುದ್ದಕ್ಕೂ ಕಾಣಿಸಿಕೊಳ್ಳುವ ಜೀವನ ವಿಶ್ಲೇಷಣೆಯು ಪಾತ್ರಗಳು ತಮ್ಮ ಜೀವನದಲ್ಲಿ ಕಂಡುಂಡ ಅನುಭವಗಳ ಹಿನ್ನೆಲೆಯಲ್ಲಿ ಮೂಡಿಬಂದುವಾಗಿರದೆ ಲೇಖಕರ ಸ್ವಂತದ್ದೆಂಬ ಭಾವನೆ ಬರುತ್ತದೆ. ಮೈಕೇಲ್ ಅರ್ನೆಸ್ಟೋನ ಅಜ್ಜಿಯ ಜೊತೆ ಮಾತನಾಡುತ್ತ ದೇವಾಲಯದ ಸಾಂಕೇತಿಕತೆಯನ್ನು ವಿವರಿಸುವ ರೀತಿಯನ್ನು ನಿದರ್ಶನಕ್ಕೆ ತೆಗೆದುಕೊಳ್ಳಿ. ಅಂತೆಯೇ ಒಬ್ಬನು ಊಟಕ್ಕಿಲ್ಲದಾಗ ಮಾಡುವ ಪ್ರಾರ್ಥನೆಯ ರೀತಿ, ಹೃದಯ ತುಂಬಿ ಬಂದಾಗ ಮೂಡುವ ಉದಾತ್ತತೆ, ಕನಿಷ್ಠ ಸೌಕರ್ಯ ದೊರೆತಾಗ ಮನಸ್ಸು ಹೆಚ್ಚು ಬೇಡುವ ವೈಚಿತ್ರ್ಯ - ಇವುಗಳನ್ನು ಹೇಳುವಾಗ ಸಾಮಾನ್ಯವಾಗಿ ಒಪ್ಪಿತವಾದ ಅಭಿಪ್ರಾಯಗಳನ್ನು ಲೇಖಕರು ಮಂಡಿಸುತ್ತಾರೆಯೇ ವಿನಾ ಆಯಾ ಪಾತ್ರಗಳ ಅನುಭವದ ಹಿನ್ನೆಲೆಯಲ್ಲಲ್ಲ.
       ಕೆಲವು ವೇಳೆ ವರ್ಣನೆಯಲ್ಲಿ ಲೇಖಕರ ಸೂಕ್ಷ್ಮತೆ ಕಾಣುತ್ತದೆ. ಮೈಕೇಲ್ ಏಂಜೆಲೋ ಗರಿಬಾಲ್ಡಿಯನ್ನು ಫ್ಲಾರೆನ್ಸ್ ಕಡೆ ಕರೆತರುವಾಗ ಅವನ ಮನಸ್ಸು ಒಂದು ಬಗೆಯ ವಿಭ್ರಮೆಗೆ ಒಳಗಾದಂತೆ ಚಿತ್ರಿಸುವುದು, ಫ್ಲಾರೆನ್ಸ್ ತಲುಪಿದಾಗ ಅದನ್ನು ನೋಡಿ ಬೆಚ್ಚುವ ರೀತಿ ಇವೆಲ್ಲ ಅವನಲ್ಲಿ ಆ ಊರು ಯಾವುದೋ ಆಳದ ನೆನಪುಗಳನ್ನು ಕೆದಕುತ್ತಿರುವ ಬಗೆಯನ್ನು ನವಿರಾಗಿ ಸೂಚಿಸುತ್ತವೆ. ಅಂತೆಯೇ, ರೂಪದರ್ಶಿಯಾದಾಗಿನ ಮೊದಲ ದಿನ ಮೈಕೇಲ್ ಏಂಜೆಲೋ ಚಿತ್ರಿಸಿದ್ದ ಬಾಲ ಏಸುವಿನ ಚಿತ್ರಿಕೆಗಳನ್ನು ಕಂಡ ಗರಿಬಾಲ್ಡಿ ತದೇಕವಾಗಿ ಅವುಗಳನ್ನು ನೋಡುವ ರೀತಿ, ಮರದ ಹಲಗೆ ಕೆಳಗೆ ಬಿದ್ದು ದೊಡ್ಡ ಶಬ್ದವಾದರೂ ಕದಲದ ಅವನ ಚಿತ್ತೈಕಾಗ್ರತೆಯ ವರ್ಣನೆಗಳು, ಅವನ ನೆನಪುಗಳು ಮರುಕಳಿಸಿದಂತೆ ಅವನಲ್ಲಿ ಆಗುವ ಬದಲಾವಣೆಗಳು , ಅಟ್ಟಣೆಯಿಂದ ಜ್ಞಾನ ತಪ್ಪಿ ಬೀಳುವುದು, ಎಚ್ಚರವಾದ ಬಳಿಕ ಪಾನಕ ಕೊಟ್ಟಾಗ ‘ಚಿಕ್ಕಪ್ಪಾ’ ಎಂದು ಮೈಕೇಲ್‍ನನ್ನು ಸಂಬೋಧಿಸುವುದು, ಹಾಗೆಯೇ ಅವನ ಆಗಿನ ಧ್ವನಿ ಕೇಳಿ ಮೈಕೇಲ್‍ಗೆ ಹಿತಕರ ಅನುಭವವಾಗಿ ಅರ್ನೆಸ್ಟೋನ ನೆನಪಾಗುವುದು ಇವೆಲ್ಲ ಮನೋಜ್ಞವಾದ ವರ್ಣನೆಗಳು.
       ಹೀಗೆ, ಭಾವುಕತೆಯನ್ನು ಇಷ್ಟಪಡುವ ಓದುಗನಿಗೆ ‘ರೂಪದರ್ಶಿ’ಯು ಹಿತ ಕೊಡುವ ಬರವಣಿಗೆ. ಕಾದಂಬರಿಯ ರಚನೆ ಸ್ಥೂಲತೆಯನ್ನು ಹೊಂದಿದ್ದು, ವಸ್ತು-ಪಾತ್ರ-ಸನ್ನಿವೇಶಗಳಿಗೆ ಅನುಗುಣವಾದ ಬೆಳವಣಿಗೆಯನ್ನು ಹೊಂದುವುದಿಲ್ಲ. ಕಾದಂಬರಿಯ ಸ್ವರೂಪವೇ ಅಂಥದ್ದು. ಅಯ್ಯರ್ ಅವರ ಬರವಣಿಗೆಯ ರೀತಿ ನಿರೂಪಣಾತ್ಮಕವಾದದ್ದು, ಶೋಧನಾತ್ಮಕವಾದದ್ದಲ್ಲ. ಈ ಅತೃಪ್ತಿಯನ್ನು ಉಂಟುಮಾಡಿದರೂ, ಕೆದಕಿ ನೋಡುವÀದವರಿಗೆ ಇದರ ಒದು ಸಂತೋೀಷವನ್ನು ಕೊಡುವುದರಲ್ಲಿ ಅನುಮಾನವಿಲ್ಲ; ಕಾದಂಬರಿ ಕಂಡ ಪುನರ್ಮುದ್ರಣಗಳೇ ಇದನ್ನು ಸಾರಿ ಹೇಳುತ್ತವೆ.
       ‘ಲೀನಾ’ ಬೇರೆಯಾಗಿ ಮುದ್ರಿತವಾಗಿದ್ದರೂ, ಅದು ‘ರೂಪದರ್ಶಿ’ಯ ಮುಂದುವರಿದ ಭಾಗವೇ ಆಗಿದೆ. ಅಲ್ಲದೆ, ಈ ಕಾದಂಬರಿಯನ್ನು ಬರೆಯಲು ಸಾರ್ವಜನಿಕರ ಒತ್ತಾಯ ಕಾರಣವೆಂದು ಲೇಖಕರು ಹೇಳುತ್ತಾರೆ. ಹೀಗಾಗಿ ಇದರಲ್ಲಿ ಸಾರ್ವಜನಿಕರ ಅತೃಪ್ತಿಯನ್ನು ಹೋಗಲಾಡಿಸುವ ಗುರಿಯಿದ್ದಂತಿದೆ. ‘ರೂಪದÀರ್ಶಿ’ಯೊಂದಿಗೆ ‘ಲೀನಾ’ ಬೆರೆಯುವುದೇ ಇಲ್ಲ; ಅದನ್ನು ಸ್ವತಂತ್ರವಾದುದೆಂದೂ ಪರಿಗಣಿಸಲು ಸಾಧ್ಯವಾಗುವುದಿಲ್ಲ. ಇದರ ಒಂದು ನೂರ ಮೂವತ್ತ ಪುಟಗಳಲ್ಲಿ ಮೊದಲ ನಲವತ್ತೊಂಬತ್ತು ಪುಟಗಳು ‘ರೂಪದರ್ಶಿ’ಯ ಮೊದಲ ಭಾಗದ ಇಪ್ಪತ್ಮೂರನೆಯದರಿಂದ ಇಪ್ಪತ್ತೊಂಬತ್ತನೆಯವರೆಗಿನ ಏಳು ಅಧ್ಯಾಯಗಳೆ ಆಗಿವೆ.
       ಕೆಡುಕನಾದ ಟಾಯಿಟ್ ಪರಿಸ್ಥಿತಿ ಪರಂಪರೆಯಿಂದ ಪ್ರಭಾವಿತನಾಗಿ ಸಾತ್ವಿಕನಾಗಿ ಮಾರ್ಪಟ್ಟು, ತನ್ನ ಪೂರ್ವಕೃತ್ಯಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾನೆ. ಅರ್ನೆಸ್ಟೋ ಗರಿಬಾಲ್ಡಿಯಾಗಲು ಕಾರಣನಾದ ಟಾಯಿಟ್ ಫಾದರ್ ಆಗಿ ಮಾರ್ಪಡುತ್ತಾನೆ. ಮೇರಿ ತಾಯಿಯ ಚಿತ್ರವನ್ನು ಸೀಳಲು ಕಾರಣವಾದ ಚಾಕುವಿನಬಿಂದಲೇ ತನ್ನ ಹೊಟ್ಟೆಯನ್ನು ಸೀಳಿಕೊಂಡು ಪುನೀತನಾಗುತ್ತಾನೆ. ‘ರೂಪದರ್ಶಿ’ಯಲ್ಲಿ ಒಳಿತು-ಕೆಡುಕುಗಳ ಪ್ರತಿರೂಪಗಳನ್ನು ಹುಡುಕಿಕೊಂಡು ಹೋಗುವ ಮೈಕೇಲ್ ಏಂಜೆಲೋ ಕ್ರಿಯೆ ಸಾಂಕೇತಿಕವಾಗುತ್ತದೆ. ಆದರೆ ‘ಲೀನಾ’ದೊಡನೆ ಅದನ್ನಿಟ್ಟು ನೋಡಿದಾಗ ಕತೆಗೆ ಬೇರೆಯೇ ಆದ ಆಯಾಮವೊಂದು ಲಭ್ಯವಾಗುತ್ತದೆ. ಈಗ ಇವರಿಬ್ಬರ ಪರಿವರ್ತನೆಗೂ ಪರಿಸ್ಥಿತಿಗಳೇ ಕಾರಣ. ಇವರಿಬ್ಬರಲ್ಲಿ ಯಾರದ್ದು ಹೆಚ್ಚು ಗಟ್ಟಿಯಾದ ವ್ಯಕ್ತಿತ್ವ? ಕೆಡುಕನ್ನು ತನ್ನ ಮುಗ್ಧತೆಯಲ್ಲಿ ಮರೆಮಾಚಿಕೊಂಡಿದ್ದ ಅರ್ನೆಸ್ಟೋವೋ ಅಥವಾ ತನ್ನ ಕೆಡುಕಿನಲ್ಲಿ ಪ್ರಾಯಶ್ಚಿತ್ತದ ಬೀಜಗಳನ್ನು ಹುದುಗಿಸಿಕೊಂಡಿದ್ದ ಟಾಯಿಟ್ಟೋ?
       ‘ಶಾಂತಲಾ’ವನ್ನು ಲೇಖಕರು ಒಂದು ಐತಿಹಾಸಿಕ ಕಾದಂಬರಿಯೆಂದು ಕರೆಯುತ್ತಾರೆ. ಮುನ್ನುಡಿಯಲ್ಲಿ “ಆಂತರ್ಯದಲ್ಲಿ ಇದು ಒಂದು ಪ್ರೇಮಮಯ ಸಂಸಾರದ ಚಿತ್ರ” ಎನ್ನುತ್ತಾರೆ. ಕಾದಂಬರಿ ಆರಂಭವಾಗುವುದು ಹೊಯ್ಸಳ ರಾಜಮಾತೆಯು ಮಗ ವಿಷ್ಣವರ್ಧನನ ಬಗ್ಗೆ ಕಳವಳಪಡುವ ಪ್ರಸಂಗದಿಂದ. ಅವನಿಗೆ ಮದುವೆಯಾಗುವ ಹಂಬಲವೇ ಇದ್ದಂತಿಲ್ಲ; ಹೀಗಾದರೆ ರಾಜ್ಯ ಪರರ ಪಾಲಾಗುವುದಲ್ಲ ಎಂಬ ಚಿಂತೆ ಆಕೆಯದು. ಹೀಗಾಗಿ ಅವಳ ಪ್ರಯತ್ನದಿಂದ ವಿಷ್ಣವರ್ಧನ ಶಾಂತಲೆ ಮತ್ತು ಅವಳ ಆತ್ಮೀಯಳಾದ ಲಕ್ಷ್ಮಿಯರನ್ನು ಒಟ್ಟಿಗೇ ಮದುವೆ ನಿಲ್ಲುವಂತಾಯಿತು. ರಾಜನೂ ಅವರಿಬ್ಬರಲ್ಲಿ ಭೇದವೆಣಿಸದಿದ್ದರೂ ಶಾಂತಲೆ ಮಾತ್ರ ಪಟ್ಟದ ರಾಣಿಯಾಗಲು ಅವಕಾಶ; ಆದರೆ ಅವರಿಬ್ಬರದೂ ಏಕದೇಹನ್ಯಾಯ. ಈ ಮಧ್ಯೆ ಕುವರ ವಿಷ್ಣು ಶಾಂತಲೆಗೆ ಆಪ್ತನಾದ. ತನಗೆ ಮಕ್ಕಳಿಲ್ಲ, ವಿಷ್ಣುವರ್ಧನನ ನಂತರ ರಾಜನಾಗಬೇಕಾದ ಕುವರ ವಿಷ್ಣು ಗರುಡನಾದ. ಹೀಗಾಗಿ ಲಕ್ಷ್ಮಿಯ ಮಗನಿಗೆ ಪಟ್ಟಕ್ಕೆ ಅರ್ಹತೆ ಬರುವಂತೆ ಅವಳನ್ನು ಪಟ್ಟಮಹಿಷಿಯಾಗಿ ಮಾಡುವ ತವಕ ಅವಳದು. ಅದು ಸಾಧ್ಯವಾಗಬೇಕಾದರೆ ತಾನು ಇಲ್ಲವಾಗುವುದು. ಅದನ್ನು ನೆರವೇರಿಸಲು ಅವಳು ವಿಷ್ಣುವರ್ಧನ-ಲಕ್ಷ್ಮಿಯರು ವೇಲಾಪುರಿಗೆ ಹೋದ ಸಮಯದಲ್ಲಿ ಕುವರವಿಷ್ಣುವಿನ ಜೊತೆ ಶಿವಗಂಗೆಗೆ ಹೋದಳು. ಕುವರವಿಷ್ಣುವನ್ನು ನೀರು ತರಲು ಕಳಿಸಿ ತಾನು ಶಿವಗಂಗೆಯ ತುದಿಯಲ್ಲಿದ್ದ ಕೋಡುಗಲ್ಲು ಬಸವನ ವಿಗ್ರಹವಿದ್ದ ತಾಣ ತಲುಪಿ ಅಲ್ಲಿಂದ ಕೆಳಗೆ ಹಾರಿಕೊಂಡಳು; ಅಲ್ಲಿಗೆ ಬಂದ ಕುವರವಿಷ್ಣುವೂ ಬಲಿದಾನ ಮಾಡಿಕೊಂಡ.  ವಿಷ್ಣುವರ್ಧನ ಹೆಂಡತಿಯ ಮರಣದಿಂದ ಹುಚ್ಚನಂತಾಗುತ್ತಾನೆ; ಶಾಂತಲೆಯ ಆತ್ಮ ಲಕ್ಷ್ಮಿಯ ದೇಹದಲ್ಲಿ ಸೇರುತ್ತದೆ. ಅವಳನ್ನೇ ಶಾಂತಲೆಯೆಂದು ಭಾವಿಸಿ ದೊರೆ ಅವಳೊಡನೆ ಬದುಕುತ್ತಾನೆ.
ಇಷ್ಟು ಕತೆಯನ್ನು ಅಯ್ಯರ್ ಸುಮಾರು ಮುನ್ನೂರ ತೊಂಬತ್ತು ಪುಟಗಳಲ್ಲಿ ನಾಲ್ಕು ಭಾಗಗಳುಳ್ಳ ರೋಚಕ ಕಾದಂಬರಿಯಾಗಿಸಿದ್ದಾರೆ. ಕಾದಂಬರಿಯ ಮುಖ್ಯ ಆಶಯ ಪ್ರೇಮದ ಆಳವನ್ನು ತ್ಯಾಗದ ಮೂಲಕ ಬಣ್ಣಿಸುವುದು. ಶಾಂತಲೆ, ಕುವರವಿಷ್ಣು, ಸೋವಲೆ, ಕುವರನ ಬಂಟರು, ಅವರ ಹೆಂಡತಿಯರು, ಮಾಚಕಬ್ಬೆ ಎಲ್ಲ ಬಲಿದಾನ ಮಾಡಿಕೊಳ್ಳುವವರೇ. ಇಲ್ಲಿ ರಕ್ತ ಸಂಬಂಧಿಗಳಲ್ಲಿ ಮಾತ್ರ ಈ ಪ್ರೇಮವಲ್ಲ; ಇತರರೂ ಕೂಡ. ಕುವರವಿಷ್ಣು ಸತ್ತನೆಂಬ ತಪ್ಪು ತಿಳಿವಳಿಕೆಯಿಂದ ಸವಾರ ಪ್ರಾಣಬಿಡುತ್ತಾನೆ, ಲೆಂಕರಾಯ ತಾನಾಗಿ ಭೈರವನಾಗುತ್ತಾನೆ, ಕುವರನೊಂದಿಗೆ ಅವನ ಸೈನ್ಯದ ಆರು ಮಂದಿ ಹೋಗುವ ಪಣತೊಟ್ಟಿದ್ದರು. ಹೀಗೆ ಇಲ್ಲಿನ ಎಲ್ಲರೂ ತಾವು ಆರಾಧಿಸಿದವರಿಗಾಗಿ ಪ್ರಾಣತ್ಯಾಗಕ್ಕೆ ಸಿದ್ದರಾದವರೇ. ಇಂಥ ತ್ಯಾಗಮಯಿ ಪಾತ್ರಗಳೆಲ್ಲ ಉದಾತ್ತವಾದವು, ಅತಿ ಭಾವುಕತೆಯನ್ನು ಮೈಗೂಡಿಸಿಕೊಂಡವು. ಹೀಗೆ ಭಾವುಕತೆಯಿರುವೆಡೆ ತರ್ಕಕ್ಕೆ ಆಸ್ಪದವೆಲ್ಲಿ?
ಕಾದಂಬರಿಯ ಶಿಲ್ಪವು ಮಧ್ಯಮಧ್ಯದ ಯುದ್ಧ ವರ್ಣನೆಗಳಿಂದ ಸಡಿಲವಾಯಿತೆನ್ನಿಸುತ್ತದೆ. ಒಟ್ಟಾರೆ ಕತೆಯು ವೇಗವಾಗಿ ಓಡಿದರೂ ಶಾಂತಲೆಯ ಸಾವಿನ ನಂತರದ ಓಟ ವಿವರವಾಗಿ ತಾರ್ಕಿಕ ಬೆಳವಣಿಗೆಯನ್ನು ಪಡೆಯುತ್ತದೆ. ಕಾದಂಬರಿಯ ಒಟ್ಟು ಗಾತ್ರ ಮುನ್ನೂರ ತೊಂಬತ್ತು ಪುಟಗಳಿಷ್ಟಿದ್ದರೂ, ಶಾಂತಲೆಯ ಶಿವಗಂಗೆಯ ಯಾತ್ರೆ, ಸಾವು, ಅವಳ ಆತ್ಮ ಲಕ್ಷ್ಮಿಯ ದೇಹವನ್ನು ಸೇರುವವರೆಗಿನ ಒಂದೂವರೆ ದಿನದ ನಿರೂಪಣೆ ತೊಂಬತ್ತಾರು ಪುಟಗಳಿಷ್ಟಿದೆ.
ಈ ಕಾದಂಬರಿಯಲ್ಲಿಯೂ ಲೇಖಕರು ಪಾತ್ರಗಳನ್ನು ನಿಯಂತ್ರಿಸುವುದು ಸ್ಪಷ್ಟವಾಗಿದೆ. ಲಕ್ಷ್ಮಿ-ಶಾಂತಲೆಯರ ಸ್ನೇಹ, ವಿಷ್ಣವರ್ಧನ ಇಬ್ಬರನ್ನೂ ಮದುವೆಯಾಗುವ ನಿರ್ಧಾರ ಇವುಗಳು ಮುಖ್ಯ ಪಾತ್ರಗಳ ಮಾನಸಿಕ ಸಂಘರ್ಷದ ಅವಕಾಶವನ್ನು ತಪ್ಪಿಸುತ್ತವೆ. ಇಡೀ ಕಾದಂಬರಿಯಲ್ಲಿ ಸಂಘರ್ಷಕ್ಕೆ ಅವಕಾಶವೇ ಇಲ್ಲ. ಬೇರೆಯವರ ಮಗ ಕುವರವಿಷ್ಣುವಿಗೆ ಪಟ್ಟಕಟ್ಟುವ ಹಾಗಿದ್ದರೆ, ಲಕ್ಷ್ಮಿಯ ಮಗನಿಗೆ ಪಟ್ಟವೇಕೆ ಕಟ್ಟುವಂತಿರಲಿಲ್ಲ? ಹಾಗಿದ್ದರೆ ಶಾಂತಲೆಯ ಆತ್ಮಾರ್ಪಣೆಗೆ ಕಾರಣವಿರುತ್ತಿರಲಿಲ್ಲ. ಆದರೆ ಶಾಂತಲೆಯ ಆತ್ಮಾರ್ಪಣೆ ಎಲ್ಲ ಸಮಸ್ಯೆಗಳಿಗೆ ಮಹಾಪರಿಹಾರವೆನಿಸುತ್ತದೆ. ಅಂದರೆ ಕೊಂಚ ತಾರ್ಕಿಕತೆಗೆ ಅವಕಾಶವಿದ್ದಿದ್ದರೂ ಕಾದಂಬರಿಯ ಕೇಂದ್ರ ಘಟನೆ ನಡೆಯುತ್ತಿರಲಿಲ್ಲ, ಹೀಗಾಗಿ ಏನೂ ಸಂಭವಿಸುತ್ತಿರಲಿಲ್ಲ. ಅಂದರೆ ಇಲ್ಲಿನ ನಿರ್ಧಾರಗಳೆಲ್ಲ ಭಾವುಕತೆಯಿಂದ ನಡೆಯುವಂತಹುದೇ. ಕಾದಂಬರಿಯ ಶೈಲಿಯೂ ಇದಕ್ಕೆ ಹೇಳಿ ಮಾಡಿಸಿದ್ದು. ಇಡೀ ಕಾದಂಬರಿ ಕನಸಿನ ಲೋಕದಲ್ಲಿ ತೇಲುವಂತಹುದು. ಸಾಮಾಜಿಕ ಸ್ಥಾನಮಾನಗಳಲ್ಲಿ ತರತಮವಿದ್ದರೂ ಪಾತ್ರಗಳೆಲ್ಲ ಸಮಾನ ತ್ಯಾಗಮಯವಾದವು, ಅನುದಾರರಿದ್ದರೆ ‘ಆ’ ಕಡೆಯವರು, ಅಂದರೆ ಶತ್ರುಪಕ್ಷದವರು. ಈ ಕನಸಿನ ಲೋಕ ಎರಡು ಅರ್ಥದ್ದು: ಆದರ್ಶ ಮತ್ತು ನಿದ್ದೆಯಲ್ಲಿನ ಕನಸು. ಮುಖ್ಯ ಪಾತ್ರಗಳಿಗೆಲ್ಲ ಕನಸುಗಳು ಬೀಳುತ್ತವೆ, ದೀರ್ಘವಾದ, ತಾರ್ಕಿಕವಾದ ಕನಸುಗಳು. ಕುವರ ವಿಷ್ಣು ಕಂಡ ಕಲ್ಲು ನಂದಿಯ ಕನಸು ಇಪ್ಪತ್ತಮೂರು ಪುಟಗಳಷ್ಟುದ್ದದ್ದು. ಕನಸುಗಳು ಹೀಗೆ ಬೀಳುತ್ತವೆಯೇ ಎಂದು ಕೇಳಿದರೆ, ಬೀಳಬಹುದು ಎಂಬ ಉತ್ತರ ನಮ್ಮ ಬಾಯಿ ಮುಚ್ಚಿಸುತ್ತದೆ.
ನಮ್ಮ ಕೆಲವು ಅನುಮಾನಗಳನ್ನು ಬದಿಗಿಟ್ಟು ಓದಿದರೆ ಕೆಲವು ಕಡೆಯ ಬರವಣಿಗೆ ನಮ್ಮ ಮನಸ್ಸನ್ನು ಸೆರೆಹಿಡಿಯುತ್ತದೆ. ಶಾಂತಲೆ ಶಿವಗಂಗೆಗೆ ಹೋಗಲು ನಿರ್ಧರಿಸಿದ ಕ್ಷಣದಿಂದ ಅವಳ ಆತ್ಮ ಲಕ್ಷ್ಮಿಯನ್ನು ಸೇರುವ, ವಿಷ್ಣುವರ್ಧನನನ್ನು ಉಳಿಸುವವರೆಗಿನ ಭಾಗವು ಉಜ್ವಲವಾದ ಬರವಣಿಗೆ. ಸೂರ್ಯನಿಗೆ ಕೊನೆಯ ನಮಸ್ಕಾರ ಹಾಕಿ ಸಾಯಲು ವಿಷ್ಣುವರ್ಧನ ನಿರ್ಧರಿಸುವ ಹೊತ್ತಿಗೆ ಸರಿಯಾಗಿ, ಲಕ್ಷ್ಮಿಗೆ ಕ್ಷಣಾರ್ಧದಲ್ಲಿ ಎಲ್ಲ ಹೊಳೆಯುವುದರೊಂದಿಗೆ, ಶಾಂತಲೆಯ ಆತ್ಮ ಅವಳನ್ನು ಹೊಕ್ಕು ತಾನೇ ಶಾಂತಲೆಯೆಂದು ಅವಳು ಹೇಳಿಕೊಳ್ಳುವ ಸನ್ನಿವೇಶ ಕಾದಂಬರಿಯ ಶಿಖರ ಸನ್ನಿವೇಶ. ಅಯ್ಯರ್ ಅವರ ಕಲೆಗಾರಿಕೆ ಇಲ್ಲಿ ತುತ್ತ ತುದಿಗೇರಿದೆ. ಶಾಂತಲೆ, ಕುವರವಿಷ್ಣುವಿನ ಸಾವಿನ ಸುದ್ದಿ ಎಲ್ಲಡೆ ನಿಧಾನವಾಗಿ ಹರಡುವ ರೀತಿಯ ವಿವರಣೆ ಓದುಗ ಉಸಿರು ಬಿಗಿ ಹಿಡಿದು ಕುಳ್ಳಿರುವಂತೆ ಮಾಡುವಷ್ಟು ಬಿಗಿಯಾಗಿದೆ. ಕೆಲವು ಕಡೆಗಳ ಯುದ್ಧ ವಿವರವೂ ಕೂಡ ಅಚ್ಚುಕಟ್ಟಾಗಿ ಬಂದಿದೆ.
ಅಯ್ಯರ್ ಅವರ ಬರವಣಿಗೆಯ ಬಗೆ ನಿರೂಪಣಾತ್ಮಕವಾದದ್ದು. ಸರ್ವಜ್ಞತ್ವವನ್ನು ಮೀರಿದ ಕನಸುಗಳ ಮೂಲಕವೂ ಪಾತ್ರ ಸೃಷ್ಟಿ ಮಾಡುವ ಪರಿ ಅದು. ಭಾಷೆಯೂ ಇದಕ್ಕನುಗುಣವಾಗಿದೆ. ಸಾಮಾನ್ಯದೂರವಾದ ಸನ್ನಿವೇಶನಿರ್ಮಾಣ ಸಲೀಸಾಗಿದೆ. ಇಲ್ಲಿನ ಪಾತ್ರಗಳ ಪರಹಿತಚಿಂತನೆಯ ಗುಣ ಎಷ್ಟು ಆಳವಾದುದು ಎಂಬುದನ್ನು ಲೇಖಕರು ಚೆನ್ನಾಗಿ ಚಿತ್ರಿಸಬಲ್ಲರು, ಪರಸ್ಪರ ಪ್ರೀತಿಯನ್ನು ಅಭಿವ್ಯಕ್ತಿಸುವ ಸನ್ನಿವೇಶಗಳೂ ಅಷ್ಟೆ. ಆದರೆ ಕೆಲವು ವೇಳೆ ಪಾತ್ರಗಳ ಮನಃಸ್ಥಿತಿಗೆ ಅನುಗುಣವಾದ ಮಾತು ಬರುವುದಿಲ್ಲ. ನಿದರ್ಶನಕ್ಕೆ, ಶಾಂತಲೆಯ ಸಾವಿನಿಂದ ಮತಿವಿಕಲ್ಪಕ್ಕೊಳಗಾದ ವಿಷ್ಣುವರ್ಧನನ ತರ್ಕಶುದ್ಧ ಮಾತುಗಳು. ಸಂಭಾಷಣೆಗಳು ಕೆಲವು ಕಡೆ ತುಂಬ ದೀರ್ಘವಾದವು, ಎಲ್ಲ ಕಡೆ ಗಾಂ್ರಥಿಕವಾದವು. ಕೆಲವು ಕಡೆ ಪ್ರಸಂಗಗಳೇ ಸಂಭಾಷಣೆಯಲ್ಲಿ ನಿರೂಪಿತವಾಗುತ್ತವೆ.
ಇಲ್ಲಿನ ಮುಖ್ಯ ಆಶಯ ಪ್ರೇಮ. ಆದರೆ ರಾಜನ ಕತೆಯಾದ್ದರಿಂದ, ಯುದ್ಧ ಮುಂತಾದ ರಾಜಶಾಹಿ ಮೌಲ್ಯಗಳ ವಿವೇಚನೆ ನಡೆಯಬಹುದಾಗಿತ್ತು. ಎಲ್ಲ ಕಡೆಯೂ ಯುದ್ಧದ ಪೃಥಕ್ಕರಣೆಯೇ ಇದೆ. ಸತ್ತ ಸೈನಿಕರಿಗೆ ರಾಜ ಉಂಬಳಿಯ ಏರ್ಪಾಟು ಮಾಡಿದಾಗ, ಅದು ರಾಜನ ಔದಾರ್ಯದ ಕಾರ್ಯವೆಂಬತೆ ಕಾಣುತ್ತದೆಯೇ ಹೊರತು ಪ್ರಾಣಹಾನಿಯ ಬಗ್ಗೆ ಚಕಾರವಿಲ್ಲ. ಯುದ್ಧ, ಸ್ವಾಮಿನಿಷ್ಠೆ, ವೀರಮರಣ, ಮಹಾಸತಿ ಪದ್ಧತಿ  ಮುಂತಾದ ಊಳಿಗಮಾನ್ಯ ಮೌಲ್ಯಗಳನ್ನು ಕಾದಂಬರಿ ವೈಭವೀಕರಿಸಿದೆ. ಬೊಪ್ಪಣನಂತಹ ಯುವಕನೂ “ಈ ಲೋಕಕ್ಕೆ ಬರುವುದೇ ತಪ್ಪು, ಬಂದ ಮೇಲೆ ಆದಷ್ಟು ಬೇಗ ತೊಲಗುವುದೇ ಲೇಸು” ಎಂಬ ಮಾತುಗಳನ್ನಾಡುತ್ತಾನೆ. ಒಟ್ಟಾರೆ ಕಾದಂಬರಿ ಒಪ್ಪಿತ ರಾಜಶಾಹಿ ಮೌಲ್ಯಗಳನ್ನು ವೈಭವೀಕರಿಸುವುದಲ್ಲದೆ, ಆ ಬಗ್ಗೆ ಅತಿರಂಜಿತ ಭಾವುಕತೆಯನ್ನು ಬಿತ್ತುತ್ತದೆ ಎನಿಸುತ್ತದೆ. 
4
ಅಯ್ಯರ್ ಅವರ ಏಕೈಕ ಕಥಾಸಂಕಲನ ‘ಸಮುದ್ಯತಾ’. ಇದರಲ್ಲಿ ಹತ್ತು ಕತೆಗಳಿವೆ. ಅವುಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಬಹುದು: ‘ಸಮುದ್ಯತಾ’, ‘ಪೊನ್‍ವೆಯಿಲ್’ ಮತ್ತು ‘ವಿಷಬೆಳೆಸು’ ಇವು ಗಂಡು-ಹೆಣ್ಣಿನ ಪ್ರೇಮವನ್ನು ಕುರಿತವು; ‘ಅನಾಥೆ ಅನಸೂಯೆ’ ಮತ್ತು ‘ಚೇಳು!.. ಅಜ್ಜಾ.. ಚೇಳು’ ವಾತ್ಸಲ್ಯವನ್ನು ಹಿನ್ನೆಲೆಯಾಗುಳ್ಳ ಕತೆಗಳು; ‘ಜೆನ್ನಿ’ ಮತ್ತು ‘ಬದಲು ಖೈದಿ ಮಾದ’ಗಳು ಸಾಮಾನ್ಯರೆನ್ನಿಸಿಕೊಂಡವರ ಉದಾತ್ತತೆಯನ್ನು ಚಿತ್ರಿಸುವಂಥವು; ಧೈರ್ಯ-ಸಾಹಸಗಳ ಬಗೆಗಿನ ಕತೆಗಳೆಂದರೆ ‘ದೆಯ್ಯದ ಮನೆ’ ಮತ್ತು ‘ಎದ್ದು ಬಂದ ಹೆಣ’; ಇನ್ನು, ‘ಇನ್ಸ್‍ಪೆಕ್ಟರ್ ಗಧಾ’ ಹಗುರವಾದ ಬರವಣಿಗೆ. ಎಲ್ಲವೂ ಸಾಮಾಜಿಕ ವಸ್ತುವಿರುವ ಕತೆಗಳು. ಅದರಲ್ಲೊಂದು ಹಿಂದೆಯೇ ಬೇರೆಯಾಗಿ ಪ್ರಕಟವಾಗಿದ್ದ, ಜನಮನ್ನಣೆ ಪಡೆದ ಮೊದಲ ಕತೆ ‘ದೆಯ್ಯದ ಮನೆ’ ಅಥವಾ ‘ಆಷಾಢ ಬಹುಳ ಅಮಾವಾಸ್ಯೆ’. ಇದು ಐವತ್ತೈದು ಪುಟಗಳ ಒಂದು ನೀಳ್ಗತೆ. ‘ಹಳೇ ಬೆಂಗಳೂರು’, ‘ಕಾಮನ ಹುಣ್ಣಿಮೆ’, ‘ದೆಯ್ಯದ ಮನೆ’ ಮತ್ತು ‘ಆಷಾಢ ಬಹುಳ ಅಮಾವಾಸ್ಯೆ’ ಎಂಬ ನಾಲ್ಕು ಭಾಗಗಳಲ್ಲಿ ಕತೆ ಹರಿಯುತ್ತದೆ. ಇದರಲ್ಲಿ ಹಳೆಯ ಬೆಂಗಳೂರಿನ ಸ್ವರೂಪ, ಅಲ್ಲಿನ ಗರಡಿ ಮನೆಗಳ ವರ್ಣನೆ, ಆ ಹಿನ್ನೆಲೆಯಲ್ಲಿ ಕಥಾನಾಯಕ ಪುಟ್ಟಮಲ್ಲನ ಸಾಹಸಗಳ ವಿವರ, ದೆವ್ವದ ಮನೆಗೆ ಆ ಹೆಸರು ಬರಲು ಕಾರಣ, ಪುಟ್ಟಮಲ್ಲು ಎದುರಿಸಿದ ದುರಂತ ಇವೆಲ್ಲ ಕೈಕಾಲು ಪಡೆಯುತ್ತವೆ. ಜೈನರ ಪದ್ಮಯ್ಯ ಕಟ್ಟಿಸಿದ ಮನೆಯಲ್ಲಿ ದುರಂತಗಳ ಸರಮಾಲೆಯೇ ನಡೆದು ದೆವ್ವದ ಮನೆ ಎಂದು ಹೆಸರಾಯಿತು. ಈಚಿನ ದುರಂತವಾಗಿದ್ದ ಕೇರಳ ಕುಟುಂಬದ ಮಗು ಸತ್ತಿದ್ದ ಆಷಾಢ ಬಹುಳ ಅಮಾವಾಸ್ಯೆಯಂದು ಮಧ್ಯರಾತ್ರಿ ತಾನು ಆ ಮನೆಗೆ ಹೋಗಿ ಬರುವುದಾಗಿ ಹೊಸದಾಗಿ ಮದುವೆಯಾದ ಗಟ್ಟಿ ಗುಂಡಿಗೆಯ ಕುಸ್ತಿ ವಸ್ತಾದಿ ಪುಟ್ಟಮಲ್ಲು ಪಣ ತೊಡುತ್ತಾನೆ. ಹಾಗೆ ಮಾಡಿದರೆ ಚಿನ್ನದ ತೋಡ ಕೊಡಿಸುವುದಾಗಿ ಕೆಲವರು ಸವಾಲೆಸೆಯುತ್ತಾರೆ. ಮಧ್ಯರಾತ್ರಿ ದೆವ್ವದ ಮನೆಗೆ ಹೋಗಿ ಅದರ ಬಾಗಿಲಿಗೆ ಮೊಳೆ ಹೊಡೆದು ಬರುವುದು ಪರೀಕ್ಷೆ. ಪುಟ್ಟಮಲ್ಲು ಮಧ್ಯರಾತ್ರಿ ಅಲ್ಲಿಗೆ ಹೊರಟ; ಆದರೆ ಸ್ವಲ್ಪ ಹೊತ್ತಿನಲ್ಲೇ ‘ಅಯ್ಯಯ್ಯೋ’ ಎಂಬ ಅವನ ಆರ್ತಧ್ವನಿ ಕೇಳಿಸಿತು. ಪೋಲೀಸರಿಗೆ ವಿಷಯ ತಿಳಿಯಿತು. ಅವರು ಮನೆಯ ಬಳಿ ಹೋಗಿ ನೊಡಿದಾಗ, ಮೆಟ್ಟಿಲ ಬಳಿ ಪುಟ್ಟಮಲ್ಲು ಸತ್ತು ಬಿದ್ದಿದ್ದ. ಬಾಗಿಲಿಗೆ ಮೊಳೆ ಹೊಡೆಯುವಾಗ ಗಾಳಿಗೋ ಇನ್ನು ಹೇಗೋ ಅವನ ಷರಟಿನ ಕೊನೆಯನ್ನೂ ಸೇರಿಸಿ ಕತ್ತಲಲಲ್ಲಿ ಗೊತ್ತಾಗದೆ ಅವನು ಮೊಳೆ ಹೊಡೆದಿದ್ದ. ಬೇಗನೇ ವಾಪಸಾಗುವ ಆತುರದಲ್ಲಿ ಹಿಂದಿರುಗಿದಾಗ ಯಾರೋ ತನ್ನ ಷರಟನ್ನು ಹಿಡಿದೆಳೆದ ಅನುಭವ; ದೆವ್ವವೇ ಇರಬೇಕೆಂಬ ಭಯದಿಂದಲೋ ಏನೋ ಅವನಿಗೆ ಹೃದಯಸ್ತಂಭನವಾಯಿತು. ಇಷ್ಟು ಕತೆ. ತುಂಬ ರೋಚಕವಾಗಿ ಕತೆ ಸಾಗುತ್ತದೆ. ಅದಕ್ಕೆ ಲೇಖಕರು ನೀಡುವ ಹಿನ್ನೆಲೆ ತುಸು ಹೆಚ್ಚಾಯಿತೆನಿಸಿದರೂ ಸೂಕ್ತ ಹಿನ್ನೆಲೆಯೊದಗಿಸುತ್ತದೆ. ‘ತುರಾ’, ಕಲ್ಕಿ’ ಎಂಬ ಎರಡು ಕುಸ್ತಿ ಪಂಗಡಗಳ ಲಾವಣಿಯ ವಾಗ್ವಾದ, ಕಾಮನ ಹುಣ್ಣಿಮೆಯಂದು ಆಟಕ್ಕೆ ಚಟ್ಟದ ಮೇಲೆ ಮಲಗಿದ್ದವನ ಸಾವು, ಪುಟ್ಟಮಲ್ಲು ಸವಾಲು ಸ್ವೀಕರಿಸಿ ರಾತ್ರಿ ಹೋದಾಗ ಇತರರು ಅನುಭವಿಸುವ ಕಾತರ - ಇವೆಲ್ಲ ತುಂಬ ಸೊಗಸಾಗಿ ಮೂಡಿ ಬಂದಿದೆ. ದೊಡ್ಡ ಆಶಯವಿಲ್ಲದಿದ್ದರೂ ಕತೆ ಓದುಗನ ಮನೆ ಸೆರೆಹಿಡಿಯುವುದರಲ್ಲಿ ಸಂಶಯವಿಲ್ಲ.
       ಧೈರ್ಯ-ಸಾಹಸಕ್ಕೆ ಸಂಬಂಧಿಸಿದ ಮತ್ತೊಂದು ಕತೆ ‘ಎದ್ದು ಬಂದ ಹೆಣ’. ವಿಪರೀತ ಮಂಜು ಪ್ರದೇಶವಾದ ಡಾರ್ಜಿಲಿಂಗ್‍ನ ಟೆಲಿಗ್ರಾ¥sóï ಲೈನ್‍ಮನ್ ರಾಜಬಹಾದೂರ್ ಗುರೂಂಗ್ ಮತ್ತು ಜೊತೆಗಾರ ರಾಸ್ ಬಿಹಾರಿ ಸಪ್ರು ಜೊತೆ ನಿರ್ಜನ ಪ್ರದೇಶದಲ್ಲಿ ಹಳೆ ಕಟ್ಟಡದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ರೋಗಿಯಾಗಿದ್ದ ಸಪ್ರು ಸಾಯುತ್ತಾನೆ, ಗುರೂಂಗ್ ಅವನನ್ನು ಹೂಳುತ್ತಾನೆ; ಆದರೆ ಮಾರನೆಯ ಬೆಳಿಗ್ಗೆ ಸಪ್ರುನ ಹೆಣ ಕುರ್ಚಿಯಲ್ಲಿ ಕೂತಿರುತ್ತದೆ. ಮತ್ತೆ ಹೂಳುತ್ತಾನೆ, ಮತ್ತೆ ಹಾಗೆಯೇ ಆಗುತ್ತದೆ. ಗಾಬರಿಯಾದ ಗುರೂಂಗ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ನಿದ್ದೆಯಲ್ಲಿ ನಡೆದಾಡುವ ಗುರೂಂಗ್ ರಾತ್ರಿ ಒಂಟಿಯಾಗಿರಲು ಹೆದರಿ ತಾನೇ ಹೂತ ಸಪ್ರುವಿನ ಹೆಣವನ್ನು ಹೊರತೆಗೆದು ಕುರ್ಚಿಯ ಮೇಲೆ ಕೂಡಿಸಿರುತ್ತಾನೆ. ಇದರ ಅರಿವಿರದ ಅವನು ಗಾಬರಿಯಿಂದ ಆತ್ಮಹತ್ಯೆಗೆ ಶರಣಾಗಿರುತ್ತಾನೆ. ಕತೆಯ ಸನ್ನಿವೇಶನಿರ್ಮಾಣ ಅದ್ಭುತವಾಗಿದೆ. ಇಲ್ಲಿಯೂ ‘ದೆಯ್ಯದ ಮನೆ’ಯ ಪುಟ್ಟಮಲ್ಲುವಿನಂತೆ ಗಾಬರಿಯಿಂದಾದ ಎದೆಗಾರನ ಸಾವು. ಈ ಕತೆಗಳಲ್ಲಿ ಅಯ್ಯರ್ ಅವರಲ್ಲಿ ಅಪರೂಪವಾದ ವೈಜ್ಞಾನಿಕ ವಿವರಣೆಯಿರುವುದು ವೈಶಿಷ್ಟ್ಯ.  ಪ್ರಾಯಶಃ ಇದಕ್ಕೆ ಕಾರಣ ಈ ಕತೆಯ ಮೂಲ ಅವರು ‘ರೀಡರ್ಸ್ ಡೈಜೆಸ್ಟ್’ನಲ್ಲಿ ಓದಿದ್ದ ಕಿರು ಬರಹ.
       ಸಂಕಲನದ ಮೂರು ಪ್ರೇಮ ಕತೆಗಳಲ್ಲಿ ‘ಸಮುದ್ಯತಾ’ ಮತ್ತು ‘ವಿಷಬೆಳಸು’ ಮೇಲುವರ್ಗದ ತರುಣ-ತರುಣಿಯರಿಗೆ ಸಂಬಂಧಿಸಿದ್ದರೆ, ‘ಪೊನ್‍ವೆಯಿಲ್’ ಕೆಳವರ್ಗದವರಿಗೆ ಸಂಬಂಧಿಸಿದ್ದು. ಈಗ ‘ಸಮುದ್ಯತಾ’ ಬಗ್ಗೆ. ಇಂಜಿನಿಯರ್ ಶ್ರೀವತ್ಸ ಹಳೆಯ ¥sóÀರ್ನಿಚರ್ ಅಂಗಡಿಯಲ್ಲಿ ಒಂದು ದೊಡ್ಡ ಮೇಜನ್ನು ಕೊಳ್ಳುತ್ತಾನೆ; ಮನೆಗೆ ಬಂದು ನೊಡಿದಾಗ ಅದರ ಡ್ರಾನಲ್ಲಿ ಸಮುದ್ಯತಾ ಹೆಸರಿನ ಒಬ್ಬ ತರುಣಿಯ ಪ್ರೇಮ ಪತ್ರ ಇರುತ್ತದೆ; ಒಲ್ಲದವನಿಗೆ ತನ್ನನ್ನು ಕೊಟ್ಟು ಮದುವೆ ಮಾಡುವುದನ್ನು ತಪ್ಪಿಸಲು ಅವಳು ಪ್ರಿಯಕರನನ್ನು ಕೋರಿದ್ದಾಳೆ. ಶ್ರೀವತ್ಸ ಭ್ರಮೆಯಲ್ಲಿ ಅದಕ್ಕೆ ಉತ್ತರ ಬರೆದು ಹಳೆಯ ಅಂಚೆ ಚೀಟಿ ಅಂಟಿಸಿ ಹಳೆಯ ಅಂಚೆ ಕಚೇರಿಯ ಡಬ್ಬದಲ್ಲಿ ಹಾಕುತ್ತಾನೆ; ಕೆಲ ದಿನಗಳ ಬಳಿಕ ಅಲ್ಲಿ ಅವನಿಗೆ ಸಮುದ್ಯತಾಳ ಉತ್ತರವಿರುತ್ತದೆ! ಮುಂದೊಂದು ಪತ್ರದಲ್ಲಿ ಫೋಟೋ! ಒಮ್ಮೆ ಅವನು ನಾದಸ್ವರ ಕಚೇರಿಗೆ ಹೋದಾಗ ಆ ಟೋಟೋದ ಯುವತಿಯನ್ನು ಕಾಣುತ್ತಾನೆ, ಮಾತಾಡಿಸುತ್ತಾನೆ. ಆದರೆ ಚಿತ್ರ ಅವಳ ಅಜ್ಜಿಯದು. ಅವಳೂ ಇವನಿಗೆ ಪತ್ರ ಬರೆದಿದ್ದವಳೇ! ಮುಂದೆ ಅವರಿಬ್ಬರ ಮದುವೆ ನಡೆಯುತ್ತದೆ. ಈ ಜನ್ಮಜನ್ಮಾಂತರದ ಕತೆ ಕುತೂಹಲಕಾರಕವಾಗಿದ್ದರೂ, ಈ ಜನ್ಮಾಂತರದ ಪ್ರೇಮ ಈಗ ಮುಂದುವರಿಯಲು ಕಾರಣವೇನು ಎಂಬುದು ತಿಳಿಯುವುದಿಲ್ಲ.
       ‘ವಿಷಬೆಳಸು’ ಇನ್ನೊಂದು ವಾಸ್ತವದೂರವಾದ ಕತೆ. ತನ್ನ ಪ್ರೀತಿಯ ಹುಡುಗಿ ಇತರರ ಜೊತೆ ಓಡಾಡುವುದನ್ನು ಸಹಿಸದ ನಿರೂಪಕ ತಾನು ಸಂಶೋಧನೆಗಾಗಿ ಪ್ರಯೋಗಶಾಲೆಯಲ್ಲಿ ಬೆಳೆಸಿದ್ದ ಘೋರ ವಿಷಮಶೀತಜ್ವರದ ರೋಗಾಣುಗಳನ್ನು ಹಣ್ಣಿನ ರಸದಲ್ಲಿ ಹಾಕಿ ಅವಳಿಗೆ ವಿಷಮಶೀತಜ್ವರ ಬರುವಂತೆ ಮಾಡಿ ಕೊಲ್ಲುತ್ತಾನೆ. ಇದು ಕೊಲೆಯೆಂಬ ಭಾವನೆಯಿಂದ ನಿರೂಪಕ ಮತಿವಿಕಲ್ಪಕ್ಕೊಳಗಾಗುತ್ತಾನೆ. ಅಸಾಧ್ಯವಲ್ಲದಿದ್ದರೂ ಅಸಂಭವವೆನ್ನಿಸುವಂತಿದೆ.
       ‘ಪೊನ್‍ವೆಯಿಲ್’ ಕೂಲಿಗಳಿಗೆ ಸಂಬಂಧಿಸಿದ ಕತೆ. ಕುರೂಪಿ, ಆದರೆ ಮಾನವೀಯ ಹೃದಯದ ಪಯ್ಯಾ ಕುರುಡಿ ಭಿಕ್ಷುಕಿಗೆ ಆಸರೆಯೀಯುತ್ತಾನೆ. ಆದರೆ ಅವಳು ಬಲವಂತಕ್ಕೋ ಏನೋ ಇನ್ನಾರಿಗೋ ಬಸಿರಾಗಿರುತ್ತಾಳೆ. ಇದನ್ನು ಲೆಕ್ಕಿಸದ ಪಯ್ಯಾ ಅವಳನ್ನು ಮದುವೆಯಾಗುವುದರ ಜೊತೆಗೆ, ಅವಳಿಗೆ ತಿಳಿಯದಂತೆ ತನ್ನೊಂದು ಕಣ್ಣನ್ನಿತ್ತು ಶಸ್ತ್ರಚಿಕಿತ್ಸೆಯ ಮೂಲಕ ಅವಳಿಗೆ ದೃಷ್ಟಿ ಬರುವಂತೆ ಮಾಡುತ್ತಾನೆ. ಈಗ ನೋಡಬಲ್ಲ ಆಕೆ ತನಗೆ ದೃಷ್ಟಿಯಿತ್ತ ಅವನನ್ನು ತಂದೆ ಎನ್ನುತ್ತಾಳೆ. ಅವಳೀಗ ತನ್ನ ಕಾಲ ಮೇಲೆ ನಿಲ್ಲಬಲ್ಲ ಕಾರಣದಿಂದ ಅವನು  ಬೌದ್ಧಭಿಕ್ಷುವಾಗುತ್ತಾನೆ. ಬಡವರ ಹೃದಯಶ್ರೀಮಂತಿಕೆಯನ್ನು ತೆರದು ತೋರಿಸಲು ಅಯ್ಯರ್ ಈ ಅರುವತ್ತು ನಾಲ್ಕು ಪುಟಗಳ ಈ ಕತೆ ಬರೆಯುತ್ತಾರೆ. ಆದರೆ ಸಾಮಾನ್ಯರ ಅಸಾಮಾನ್ಯ ಗುಣವನ್ನು ಮಾಸ್ತಿ ಮಾಡುವಂತೆ ಸಾಧಾರಣ ಬದುಕಿನ ಮೂಲಕವೇ ನೀಡದೆ ಅತಿಭಾವುಕವಾಗಿಸುತ್ತಾರೆ. ಮಾಸ್ತಿಯವರ ‘ವೆಂಕಟಿಗನ ಹೆಂಡತಿಯ’ ವೆಂಕಟಿಗ ಇತರರಿಗೆ ಬಸುರಾದ ಹೆಂಡತಿಯನ್ನು ಅವಳ ಮೇಲಿನ ಪ್ರೇಮದಿಂದಷ್ಟೇ ಸ್ವೀಕರಿಸುತ್ತಾನೆ; ಆದರೆ ಇಲ್ಲಿನ ಪಯ್ಯಾ ಕುರುಡಿಗೆ ಬಾಳು ನೀಡುವುದಕ್ಕಾಗಿಯೇ ತಾನು ಪ್ರಜ್ಞಾಪೂರ್ವಕವಾಗಿ ಬಾಳಿಗೆ ವಿಮುಖನಾಗುತ್ತಾನೆ.
       ವಾತ್ಸಲ್ಯಭಾವದ ಆಶಯವುಳ್ಳ ಎರಡು ಕತೆಗಳೆಂದರೆ ‘ಅನಾಥೆ ಅನಸೂಯೆ’ ಮತ್ತು ‘ಚೇಳು!..ಅಜ್ಜಾ.. ಚೇಳು!’ ವಾತ್ಸಲ್ಯ ಬೆಸೆದ ಎರಡು ತುದಿಗಳ ವಿಭಿನ್ನ ಸಂಬಂಧವನ್ನಿವು ಚಿತ್ರಿಸುತ್ತವೆ. ಮೊದಲನೆಯದು ನಲವತ್ತು ವರ್ಷದ ವಿಧವೆ ಅನಸೂಯೆಗೆ ಸಂಬಂಧಿಸಿದ್ದು. ಆಕಸ್ಮಿಕವಾಗಿ ಪರಿಚಯವಾದ ಒಬ್ಬ ಪುಟ್ಟ ಹುಡುಗಿ ಅನಸೂಯೆ, ಒಮ್ಮೆ ರಾತ್ರಿ ತನ್ನ ಮನೆಗೆ ಬಂದು ತಿನ್ನಲು ಕೇಳುತ್ತಾಳೆ. ಅವಳು ಹೋದ ಮೇಲೆ ಈ ದೊಡ್ಡ ಅನಸೂಯೆ ಅಸ್ವಸ್ಥಳಾಗುತ್ತಾಳೆ. ಮಾರನೇ ದಿನ ಬೆಳಿಗ್ಗೆಯೇ ಚಿಕ್ಕವಳು ಬರುತ್ತಾಳೆ, ರಾತ್ರಿಯವರೆಗೂ ಇರುತ್ತಾಳೆ. ಯಾವುದೋ ಮಾಯೆಯಲ್ಲಿ ಮನೆಯಲ್ಲೇ ಅಡಗಿಕೊಳ್ಳುತ್ತಾಳೆ, ಹೊರ ಬಂದು ಅಮ್ಮ ಎಂದು ಕರೆಯುತ್ತಾಳೆ. ಕತೆಯಲ್ಲಿ ಚಿಕ್ಕ ಅನಸೂಯೆಯ ಹಿನ್ನೆಲೆಯಿಲ್ಲ; ಪ್ರಾಯಶಃ ವಿಧವೆಯ ಮನಸ್ಸಿನಲ್ಲಿನ ತಾಯ್ತನದ ಹಂಬಲ ಚಿಮ್ಮುವುದನ್ನು ಚಿತ್ರಿಸುವುದು ಕತೆಗಾರನ ಉದ್ದೇಶವಿರಬೇಕು.
       ಮೇಲಿನ ಕತೆ ಹೃದಯಾಂತರಾಳದ ವಾತ್ಸಲ್ಯ ಚಿಮ್ಮುವುದನ್ನು ಚಿತ್ರಿಸಿದರೆ ಇದಕ್ಕೆ ವಿರುದ್ಧವಾದದ್ದು ‘ಚೇಳು!..ಅಜ್ಜಾ.. ಚೇಳು!’ ಕಣ್ಣಿನ ಪೊರೆಯಿಂದ ಕುರುಡಾದ ನರಸೇಗೌಡನಿಗೆ ಫಟಿಂಗ ಮೊಮ್ಮಗ ರಂಗನದೇ ಚಿಂತೆ. ಕುರುಡ ತಾತನಲ್ಲಿ ದಿನದಿನವೂ ಚೇಳಿನ ಭಯ ಹುಟ್ಟಿಸಿ ಹಣ ಕೀಳುವ ಪ್ರವೃತ್ತಿ ಮೊಮ್ಮಗನದು. ಕೆಲದಿನಗಳ ಬಳಿಕ ಈ ತಂತ್ರ ಅರ್ಥ ಮಾಡಿಕೊಂಡ ತಾತ, ಒಮ್ಮೆ ಮೊಮ್ಮಗ ಗೋಳು ಹುಯ್ದುಕೊಂಡಾಗ ರೂಮಿನ ಬಾಗಿಲು ಹಾಕಿಕೊಂಡು ತನ್ನ ಊರೆಗೋಲಿನಿಂದ ಹೊಡೆದಾಗ ರಂಗನ ತಲೆ ಸೀಳುತ್ತದೆ; ಅವನ ಆರ್ತನಾದ ಕೇಳಿದ ತಾತ ದಿಗ್ಭ್ರಮೆಯಿಂದ ಕುಸಿಯುತ್ತಾನೆ. ಬಹು ತೆಳುವಾದ ವಸ್ತುವನ್ನು ಮೊಮ್ಮಗನ ಕೀಟಲೆಯ ನಾಟಕೀಯತೆಯಿಂದ ಕತೆಗಾರ ತುಂಬುತ್ತಾರೆ.  ಸಹಜ ಸಂಭಾಷಣೆಗಳು ಇದನ್ನೊಂದು ಯಶಸ್ವೀ ಬಾನುಲಿ ರೂಕವನ್ನಾಗಿಸಲು ಡಾ. ಎಚ್.ಕೆ. ರಂಗನಾಥ್ ಅವರಿಗೆ ಸಾಧ್ಯವಾಗಿಸಿದೆ. ವಾತ್ಸಲ್ಯ ಹರಿಯುವ ಮತ್ತು ಪರಿಣಾಮ ಬೀರುವ ವಿಭಿನ್ನ ಪರಿಗಳನ್ನು ಈ ಎರಡು ಕತೆಗಳು ಚಿತ್ರಿಸುತ್ತವೆ.
       ಸಾಮಾನ್ಯ ವ್ಯಕ್ತಿಗಳ ಉದಾತ್ತತೆಯನ್ನು ತೋರಿಸುವ ಮತ್ತೆರಡು ಕತೆಗಳೆಂದರೆ ‘ಜೆನ್ನಿ’ ಮತ್ತು ‘ಬದಲು ಖೈದಿ ಮಾದ’.  ‘ಜೆನ್ನಿ’ ಕತೆಯಲ್ಲಿ ನಿರೂಪಕನಿಗೆ ಲೋಬೋ ಎಂಬ ಕೃಶ ಕೈಕಾಲುಗಳ ಭಿಕ್ಷುಕ ಬಾಲಕನೊಬ್ಬನ ಪರಿಚಯವಾಗುತ್ತದೆ; ಲೋಬೋ ಆಕಸ್ಮಿಕಕ್ಕೆ ಒಳಗಾದರೂ ಅವನ ತಾಯಿ ಅತ್ಯಂತ ಸಂಯಮದಂದ ತನ್ನ ದುಃಖವನ್ನು ತಡೆದುಕೊಳ್ಳುತ್ತಾಳೆ. ಮುಂದೆ ನಿರೂಪಕ ಆ ಹೆಂಗಸನ್ನು ಕಾಣುವುದು ತನ್ನ ಪರಿಚಯದವರ ಮನೆಯಲ್ಲಿ, ಕೆಲಸದವಳಾಗಿ. ಅಂದು ಅವಳ ಮಗನ ಆಕಸ್ಮಿಕದ ವಿವರಗಳು ದೊರೆಯುತ್ತವೆ. ಲೋಬೋ ಸಿಕ್ಕಿ ಸತ್ತದ್ದು ಒಬ್ಬ ಮಿಲಿಟರಿ ಅಧಿಕಾರಿಯ ಕಾರಿಗೆ. ಆದರೆ ಅದರ ಚಾಲಕನದು ಏನೂ ತಪ್ಪಿಲ್ಲವೆಂದು ಮನವರಿಕೆಯಾಗಿ ತಾಯಿ ಜೆನ್ನಿ ಶಿಕ್ಷೆಯಾಗುವುದರಿಂದ ಅವನನ್ನು ಪಾರುಮಾಡುವುದರ ಜೊತೆಗೆ, ತನಗೆ ಮಿಲಿಟರಿ ಅಧಿಕಾರಿಯಿಂದ ಬಂದ ಪರಿಹಾರಧನವನ್ನೂ ಚರ್ಚ್‍ಗೆ ಕೊಟ್ಟಿರುತ್ತಾಳೆ. ಹೀಗೆ ಆ ಬಡವಳ ನಡವಳಿಕೆಯ ಉದಾತತ್ತೆಯನ್ನು ಕತೆ ನೇರವಾಗಿ ನಿರೂಪಿಸುತ್ತಾರೆ.
ಇದೇ ಆಶಯದ ಇನ್ನೊಂದು ಕತೆ ‘ಬದಲು ಖೈದಿ ಮಾದ’. ಇದರ ಮುಖ್ಯ ಪಾತ್ರ ಮಾದ. ಅವನು ತಾಯಿಯ ಕೂಡಾವಳಿ ಗಂಡನ ಕ್ರೌರ್ಯವನ್ನು ತಾಳಲಾರದೆ ಮನೆಯಿಂದ ಓಡಿಹೋಗುತ್ತಾನೆ. ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸಿ ಕೊನೆಗೆ ಒಬ್ಬ ಪಿಟೀಲು ನುಡಿಸುವ ಭಿಕ್ಷುಕನೊಡನೆ ಸೇರಿಕೊಳ್ಳುತ್ತಾನೆ. ಅವನೊಬ್ಬ ಕಳ್ಳ; ಒಮ್ಮೆ ಅವನೊಡನೆ ಸೇರಿಕೊಂಡು ತಾನೂ ಸಿಕ್ಕಿಹಾಕಿಕೊಳ್ಳುತ್ತಾನೆ. ಶಿಕ್ಷೆ ಹೊಂದಿ ವಾಪಸಾದರೂ ಕಳ್ಳತನ ಮುಂದುವರಿಸುತ್ತಾನೆ. ಕೊನೆಗೆ ಒಳ್ಳೆಯವಾಗಿ ಬಾಳಲು ನಿರ್ಧರಿಸಿ ಒಂದು ಹೋಟಲಲ್ಲಿ ಕೆಲಸಕ್ಕೆ ಸೇರುತ್ತಾನೆ. ಆದರೆ ಅಲ್ಲಿನ ಮತ್ತೊಬ್ಬ ಕೆಲಸಗಾರ ಪುಟ್ಟಯ್ಯ ಹೊಸದಾಗಿ ಮದುವೆಯಾಗಿ ಹೆಂಡತಿಗೆಂದು ಮ್ಯಾಜಿಸ್ಟ್ರೇಟರೊಬ್ಬರ ಮನೆಯಲ್ಲಿ ಒಡವೆ ಕದ್ದು ಸಿಕ್ಕಿ ಹಾಕಿಕೊಂಡಾಗ, ಅವನನ್ನು ಪಾರುಮಾಡಲು ಮಾದ ತನ್ನ ಮೇಲೆ ಕಳ್ಳತನವನ್ನು ಹೊತ್ತು ಶಿಕ್ಷೆ ಅನುಭವಿಸಿರುತ್ತಾನೆ. ತಪ್ಪಿತಸ್ಥರನ್ನು ಸುಧಾರಿಸುವ ಬಗ್ಗೆ ಆಲೋಚಿಸುವ ಲೇಖಕರು, ವ್ಯಕ್ತಿಯ ಹಿನ್ನೆಲೆ ಯವುದೇ ಇದ್ದರೂ ಅವನಲ್ಲಿ ನೆಲಸಿರಬಹುದಾದ ಉದಾತ್ತತೆಯ ಬಗ್ಗೆ ಗಮನ ಸೆಳೆಯುವ ಆಶಯ ಹೊತ್ತವರು.
ಇಲ್ಲಿನ ಹತ್ತನೆಯ ಕತೆ ‘ಇನ್ಸ್‍ಪೆಕ್ಟರ್ ಗಧಾ’. ಕಳ್ಳಬಟ್ಟಿಯನ್ನು ಸಂಪೂರ್ಣವಾಗಿ ನಾಶ ಮಾಡಲು ಪಣತೊಟ್ಟವನು ಇನ್ಸ್‍ಪೆಕ್ಟರ್ ಮಾದಪ್ಪ. ಅದಕ್ಕೆ ಸಹಾಯಕವಾದ ಮಾದಪ್ಪನ ಕುದುರೆಯನ್ನು ಕದಿಯಲು ಕಳ್ಳಬಟ್ಟಿ ಇರಿಸಿಕೊಂಡಿದ್ದವನ ಮಗ ಮಲ್ಲ ಪಣತೊಟ್ಟ. ಉಪಾಯದಿಂದ ಅದನ್ನು ಕದ್ದು ಕಳ್ಳಬಟ್ಟಿ ಇದ್ದ ಗವಿಗೆ ತಂದ; ಅದು ಕಳ್ಳಬಟ್ಟಿ ಕುಡಿದು ನಿದ್ದೆ ಹೋಯಿತು. ಆ ಹೊತ್ತಿಗೆ ಅಲ್ಲಿಗೆ ಬಂದ ಮಾದಪ್ಪ ಉರುಳಿ ಬಿದ್ದು ಮೂರ್ಚೆ ಹೋದ. ಆ ಸಮಯದಲ್ಲಿ ಅಲ್ಲಿದ್ದ ಎಲ್ಲವನ್ನೂ ಬೇರೆಡೆ ಸೇರಿಸಿ ಸ್ಥಳವನ್ನು ಭಜನೆ ಮನೆಯಂತೆ ಮಾರ್ಪಡಿಸಿದರು. ಎಚ್ಚೆತ್ತ ಇನ್ಸ್‍ಪೆಕ್ಟರ್ ಕೇಸು ಹಾಕಿದಾಗ, ಎವಿಡೆನ್ಸ್ ಇಲ್ಲವೆಂದು ಕೇಸ್ ಡಿಸ್‍ಮಿಸ್ ಆಯಿತು. ಮಲ್ಲನ ತಂದೆ ಕಾಫೀ ಪ್ಲಾಂಟರ್ ಆದ. ಮಲ್ಲನಿಗೆ ಇನ್ಸ್‍ಪೆಕ್ಟರ್‍ನ ಮಗಳು ಉಷೆಯ ಬಗ್ಗೆ ಮೋಹ. ಅವರಿಬ್ಬರ ಮದುವೆ ನಡೆಯಿತು. ಒಂದು ತಮಾಷೆಯ ಕಲ್ಪಕ ಕತೆ, ಅಷ್ಟೆ. 
ಒಟ್ಟಾರೆ, ಅಯ್ಯರ್ ಕುತೂಹಲಕಾರವಾಗಿ ಕತೆ ಹೇಳಬಲ್ಲರು. ಅವರ ದೊಡ್ಡ ಪ್ಲಸ್ ಪಾಯಿಂಟ್ ಅಂದರೆ ಸನ್ನಿವೇಶ ನಿರ್ಮಾಣ ಕೌಶಲ. ಹೀಗಾಗಿ ಕಥಾಂಶ ತೆಳುವಾದರೂ ಆಕರ್ಷಕವಾಗಿ ನಿಭಾಯಿಸಬಲ್ಲವರು. ‘ದೆಯ್ಯದ ಮನೆ’ ಯನ್ನು ‘ರೂಪದರ್ಶಿ’ಯಾದ ಮೇಲೆ ಬರೆದರೂ, ಕಾದಂಬರಿಯನ್ನು ಆನಂತರ ಆಮೂಲಾಗ್ರ ಮಾರ್ಪಡಿಸಿದರು. ಅವರ ಶೈಲಿ ಭಾವುಕತೆಗೆ ಅನುಗುಣವಾಗುವಂತೆ ಬದಲಾಯಿತು. ಅಯ್ಯರ್ ಅವರದು ಜನ್ಮಾಂತರ, ಆತ್ಮನ ಶಾಶ್ವತತೆ, ಪವಾಡ ಮುಂತಾದವುಗಳನ್ನು ನಂಬುತ್ತಿದ್ದ ಮನಸ್ಸು. ಅಂತಹ ಮನೋಭಾವ ಅವರ ಹೆಚ್ಚಿನ ಬರವಣಿಗೆಗಳಲ್ಲಿ ಕಾಣಸಿಗುತ್ತದೆ, ಬರವಣಿಗೆಯನ್ನು ರೂಪಿಸುತ್ತದೆ.
5
       ಅಯ್ಯರ್ ಅವರ ಮತ್ತೊಂದು ಆಕರ್ಷಕ ಕೃತಿ ‘ಶ್ರೀ ಕೈಲಾಸಂ ಸ್ಮರಣೆ’. ಈ ಕೃತಿ ಕೈಲಾಸಂ ಅವರ ಕೃತಿಗಳ ವಿಮರ್ಶೆಯಲ್ಲ; ಅವರ ಹತ್ತಿರದ ಶಿಷ್ಯರಾಗಿ, ಒಂದು ಬಗೆಯ ಪೋಷಕರಾಗಿ, ಅವರ ಲಿಪಿಕಾರರಾಗಿ ಕಟ್ಟಿಕೊಟ್ಟಿರುವ ನೆನಪಿನ ಬುತ್ತಿ. ಓದುಗನಿಗೆ ಮುದ ನೀಡುವ ಬರವಣಿಗೆ. ‘ಮುತ್ಯಾಲಗಟ್ಟು’, ‘ವ್ಯಾಯಾಮಶಾಲಾ’, ‘ವೈಟ್ ಹೌಸ್’, ನನ್ನ ಗುರು’, ‘ಕಂಬ್ಳೀವುಳ’, ‘ಕೈಲಾಸಂ ನಾಟಕ’, ‘ದಿ ನೂಕ್’, ‘ಹೇಳಿ ಬರೆಯಿಸಿ’, ‘ಸುಖದ ದಿನಗಳು’, ‘ಕೊನೆಗೆ ಕೊಂಚ ಮುಂಚೆ’ ಮತ್ತು ‘ಕೊನೆಕೊನೆಗೆ’ ಎಂಬ ಸಣ್ಣ ಸಣ್ಣ ಅಧ್ಯಾಯಗಳಲ್ಲಿ ಸುಮಾರು ಒಂದು ನೂರು ಪುಟಗಳಲ್ಲಿ ಕೈಲಾಸಂ ಅವರನ್ನು ಒಂದು ರೀತಿಯಲ್ಲಿ ವಿಭೂತಿ ಪುರುಷರಂತೆ ಅಯ್ಯರ್ ಚಿತ್ರಿಸುತ್ತಾರೆ. ಮೊದಲ ಬಾರಿಗೆ ತಾವು ಕೈಲಾಸಂ ಅವರನ್ನು ಭೇಟಿ ಮಾಡಿದ ಕಾಲದಿಂದ ಅವರ ಕೊನೆಯವರೆಗೂ ಇಲ್ಲಿನ ಚಿತ್ರಣದ ಹರಹಿದೆ. ಕೈಲಾಸಂ ಅವರ ನೆನಪಿನ ಶಕ್ತಿ, ಅವರ ಮಾತಿನ ವೈಖರಿ, ಎಲ್ಲದರ ಬಗ್ಗೆಯ ಅವರಿಗಿದ್ದ ಆಳವಾದ ತಿಳಿವಳಿಕೆ, ಊಟದಲ್ಲಿ ಹಾಕಿಸಿಕೊಂಡ ಬಹುಪಾಲನ್ನು ಚೆಲ್ಲುವುದು, ಅವರ ವಾಸದ ಕೋಣೆಯ ಗಲೀಜು, ತಮ್ಮ ಮನಸ್ಸಿನಲ್ಲಿ ಮೂಡುವ ನಾಟಕಗಳನ್ನು ಸವಿವರವಾಗಿ ನಿರೂಪಿಸುವ ಬಗೆ, ಅವರ ಮಾತಿನ ಮೋಡಿ, ಎಲ್ಲ ವರ್ಗದ ಜನರೊಡನೆ ಸಹಜವಾಗಿ ಬೆರೆಯಬಲ್ಲ ಸಾಮಥ್ರ್ಯ, ನಾಟಕ, ನಟನೆ, ಸಿನಿಮ ಮುಂತಾದವುಗಳ ಬಗೆಗಿನ ಅವರ ಪರಿಣತ ಜ್ಞಾನ, ಸೂಕ್ಷ್ಮ ನಿರೀಕ್ಷಣಾ ಶಕ್ತಿ ಮುಂತಾದವನ್ನು ಅಯ್ಯರ್ ಆಕರ್ಷಕವಾಗಿ ಈ ಕಿರು ಹೊತ್ತಗೆಯಲ್ಲಿ ನಿರೂಪಿಸುತ್ತಾರೆ. ಕೈಲಾಸಂ ಅವರ ಗುಣಗಳ ಬಗ್ಗೆ ಮುಕ್ತವಾಗಿ ಭಕ್ತಿಭಾವ ಪ್ರದರ್ಶಿಸುವ ಅಯ್ಯರ್ ಅವರ ವಿಷಯದಲ್ಲಿ ಕೆಲವು ವೇಳೆ ವಿಮರ್ಶಾತ್ಮಕವಾಗಿಯೂ ಬರೆಯಬಲ್ಲರು. ಕೈಲಾಸಂ ಮಾತಿನ ವೇಗ, ಅವರು ಆಡಿಸಿದ ನಾಟಕಗಳ ರಂಗಸಜ್ಜಿಕೆಯ ಅಸಮರ್ಪಕತೆ ಇವುಗಳ ಬಗ್ಗೆಯೂ ಬರೆಯುತ್ತಾರೆ. ಕೈಲಾಸಂ ಅವರದು ಹೊರಗಿನದನ್ನು ನಮ್ಮ ಜಾಯಮಾನಕ್ಕೆ ಅಳವಡಿಸಿಕೊಳ್ಳುವ ಅಪೂರ್ವ ಸಾಮಥ್ರ್ಯ: ‘ಟೊಳ್ಳುಗಟ್ಟಿ’ ಇಂಗ್ಲಿಷ್ ನಾಟಕವೊಂದರ ಇಂತಹ ಅಳವಡಿಕೆಯಂತೆ; ಅವರ ಅನೇಕ ಜೋಕುಗಳು ‘ಪಂಚ್’ ‘ಆಮ್ನಿಬಸ್ ಬುಕ್’ ಮುಂತಾದ ಪತ್ರಿಕೆಗಳಿಂದ ಆರಿಸಿಕೊಂಡಿದ್ದವಂತೆ. ಭೂಗರ್ಭ ಇಲಾಖೆಯ ದೊಡ್ಡ ಅಧಿಕಾರಿಯಾಗಿದ್ದರೂ ಕೂಲಿಯವರೊಡನೆಯೂ ಆತ್ಮೀಯವಾಗಿ ಬೆರೆಯುತ್ತಿದ್ದ ಅವರ ಸಜ್ಜನಿಕೆ, ಅವರ ವಿಚಿತ್ರ ನಡವಳಿಕೆ ಇಂತಹವುಗಳ ಬಗ್ಗೆ ಲೇಖಕರು ಆತ್ಮೀಯವಾಗಿ ಬರೆಯುತ್ತಾರೆ. ಆದರೆ ಅವರ ವೈಚಿತ್ರ್ಯಕ್ಕೆ ಕಾರಣವೇನು ಎಂದು ವಿಶ್ಲೇಷಿಸುವುದಿಲ್ಲ. ಈ ಸಣ್ಣ ಪುಸ್ತಕದಲ್ಲಿ ಕೈಲಾಸಂ ಅವರ ಇಂಗ್ಲಿಷ್ ಮಿಶ್ರಿತಮಾತುಗಳ ಇಪ್ಪತ್ತೆರಡು ಪುಟಗಳ ಟಿಪ್ಪಣಿ ಮತ್ತು ಮದ್ರಾಸ್ ಸಾಹಿತ್ಯ ಸಮ್ಮೇಳನದ ಅವರ ಭಾಷಣದ ಪಾಠ, ಎ.ಐ.ಆರ್.ನಲ್ಲಿ ಅವರು ಮಾಡಿದ ಒಂದು ಭಾಷಣ ಇವುಗಳು ಸೇರಿವೆ. ಒಟ್ಟಾರೆ, ಈ ಪುಟ್ಟ ಪುಸ್ತಕ ಕೈಲಾಸಂ ಅವರ ರೀತಿನೀತಿಗಳನ್ನು ಅಧಿಕಾರಯುತವಾಗಿ ನಿರೂಪಿಸುವಲ್ಲಿ ಯಶಸ್ವಿಯಾಗಿದೆ. ಓದಿನ ವಿಷಯದಲ್ಲಿ ತಮ್ಮಲ್ಲಿಆತ್ಮವಿಶ್ವಾಸ ಮೂಡಿಸಿದ ಪರಿಯನ್ನು ವಿವೇಕಾನಂದರಿಗೆ ಬೋಧೆ ಮಾಡಿದ ರಾಮಕೃಷ್ಣರಿಗೆ ಹೋಲಿಸುವಂತಹ ಅವರ ಬಗೆಗಿನ ಅತ್ಯಂತ ಗೌರವಯುತ ಭಾವನೆಯಿದ್ದರೂ, ಸ್ವಲ್ಪ ಮಟ್ಟಿಗೆ ವಸ್ತುನಿಷ್ಠತೆಯೂ ಇಲ್ಲಿದೆ. ಇಡೀ ಪುಸ್ತಕದ ಹಿನ್ನೆಲೆಯಲ್ಲಿರುವುದು ಅಯ್ಯರ್ ಅವರ ಮೃದುಲತೆ, ಸಹಾಯಹಸ್ತ, ಒಳ್ಲೆಯದನ್ನು ಮೆರಸುವ ಔದಾರ್ಯ ಈ ಗುಣಗಳು. ಹೀಗಾಗಿ ಇಲ್ಲಿ ಕೈಲಾಸಂ ಅವರ ಪರಿಚಯವಾದಷ್ಟೇ ಅಯ್ಯರ್ ಅವರ ಸ್ವಭಾವ ಪರಿಚಯವೂ ಆಗುತ್ತದೆ.
6
       ಕೆ.ವಿ. ಅಯ್ಯರ್ ಅವರಿಗೆ ಮೊದಲಿನಿಂದಲೂ ರಂಗಕ್ರಿಯೆಯ ಬಗ್ಗೆ ತುಂಬ ಆಸಕ್ತಿ. ಕೈಲಾಸಂ ಅಂತಹವರ ಸಹವಾಸದಿಂದ ಅದು ಮತ್ತಷ್ಟು ತೀಕ್ಷ್ನವಾಗಿರಲೂ ಸಾಕು. ಕೈಲಾಸಂ ಅವರ ರಂಗ ಚಟುವಟಿಕೆಗಳ ಮತ್ತು ನಾಟಕಗಳ ವಿಮರ್ಶೆ ಇವರಲ್ಲಿ ಆ ಬಗ್ಗೆ ಸೂಕ್ಷ್ಮತೆಯನ್ನುಂಟುಮಾಡಿರಲಿಕ್ಕೂ ಸಾಕು. ‘ರವಿ ಕಲಾವಿದರು’ ಎಂಬ ರಂಗತಂಡದೊಡನೆ ಅಯ್ಯರ್ ಅವರು ದೀರ್ಘಕಾಲದ ಒಡನಾಟವಿಟ್ಟುಕೊಂಡಿದ್ದರು. ತಮ್ಮ ‘ವ್ಯಾಯಾಮಶಾಲೆ’ಯನ್ನು ರಂಗಮಂದಿರವಾಗಿಯೂ ಪರಿವರ್ತಿಸುತ್ತಿದ್ದರು. ಆ ತಂಡಕ್ಕೆ ಅವರು ರಂಗಸಂಬಂಧಿತ ಪರಿಕರಗಳನ್ನು ಸಂಗ್ರಹಿಸಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅಯ್ಯರ್ ಅವರು ಸ್ವತಂತ್ರ ನಾಟಕಗಳನ್ನೇಕೆ ರಚಿಸಲಿಲ್ಲ ಎಂಬ ಆಶ್ಚರ್ಯವುಂಟಾಗುತ್ತದೆ. ಅಥವಾ ಅಂಥ ಪ್ರಯತ್ನಗಳಿಗೇನಾದರೂ ಕೈಹಾಕೊದ್ದರೋ ತಿಳಿಯದು. ಆದರೆ ಅವರು ಅನೇಕ ನಾಟಕಗಳನ್ನು ರೂಪಾಂತರಿಸಿದರು, ರಂಗಪಠ್ಯವನ್ನು ತಯಾರಿಸಿದರು. ಅವರ ರೂಪಾಂತರಗಳಲ್ಲಿ ಇಬ್ಸೆನ್‍ನ ಮೂರು ಮತ್ತು ಗೋಲ್ಡ್‍ಸ್ಮಿತ್‍ನ ಒಂದು - ಹೀಗೆ ನಾಲ್ಕು ಪಾಶ್ಚಾತ್ಯ ನಾಟಕಗಳೂ, ಶೂದ್ರಕನ ‘ಮೃಚ್ಛಕಟಿಕ’ ನಾಟಕದ ಸಂಗ್ರಹ ರಂಗಪಠ್ಯವೂ ಸೇರುತ್ತವೆ. ಪಾಶ್ಚಾತ್ಯ ನಾಟಕಗಳನ್ನು ನೇರವಾಗಿ ಅನುವಾದಿಸಲೂ ಇಲ್ಲ; ನಮ್ಮ ಪರಿಸರಕ್ಕೆ ತಕ್ಕಂತೆ ರೂಪಾಂತರಿಸಲೂ ಇಲ್ಲ; ಅದರ ಬದಲು ಬಹುತೇಕ ಹೆಸರುಗಳನ್ನಷ್ಟೇ ನಮ್ಮದಾಗಿ ಬದಲಿಸಿ ರೂಪಾಂತರಗಳೆಂದು ಕರೆದರು. ಇಬ್ಸೆನ್‍ನ ‘ಡಾಲ್ಸ್ ಹೌಸ್’ ಅನ್ನು ‘ಪತ್ನಿಯೋ? ಪತಿಯ ಕೈಗೊಂಬೆಯೋ?’ ಎಂದು, ‘ದ ಮಾಸ್ಟರ್ ಬಿಲ್ಡರ್’ ಅನ್ನು ‘ಮಹಾಶಿಲ್ಪಿ’ ಎಂದು, ‘ಎನ್ ಎನಿಮಿ ಆ¥sóï ದ ಪೀಪಲ್’ ಅನ್ನು ‘ಪ್ರಜಾಪ್ರಗತಿ’ ಎಂದು, ಗೋಲ್ಡ್‍ಸ್ಮಿತ್‍ನ ‘ಷಿ ಸ್ಟೂಪ್ಸ್ ಟು ಕಾಂಕರ್’ ಅನ್ನು ‘ವರಪರೀಕ್ಷೆ’ ಎಂದು ಕನ್ನಡಕ್ಕೆ ತಂದಿದ್ದಾರೆ. ಶೂದ್ರಕನ ದೀರ್ಘ ನಾಟಕವನ್ನು ಮೂರು ಗಂಟೆಗಳಲ್ಲಿ ಪ್ರದರ್ಶಿಸಬಹುದಾದಂತೆ ಸಂಗ್ರಹ ಮಾಡಿ, ಎರಡು ಸಣ್ಣ ಆದರೆ ಪ್ರಮುಖ ವ್ಯತ್ಯಾಸಗಳನ್ನು ತಂದು ಸಮರ್ಥ ರಂಗಪಠ್ಯವನ್ನು ಸಿದ್ಧಪಡಿಸಿದ್ದಾರೆ. ಕೊನೆಯದು ಮಾತ್ರ ಅವರ ಜೀವಿತಕಾಲದಲ್ಲಿಯೇ ಪ್ರಕಟವಾದರೂ ಉಳಿದವು ಮರಣಾನಂತರದ ಪ್ರಕಟಣೆಗಳು.
       ‘ಡಾಲ್ಸ್ ಹೌಸ್’ನ ರೂಪಾಂತರವಾದ ‘ಪತ್ನಿಯೋ? ಪತಿಯ ಕೈಗೊಂಬೆಯೋ?’ ಮೂರು ಅಂಕಗಳ ನಾಟಕ; ಅದರಲ್ಲಿ ಕೆಲವೇ ಮುಖ್ಯ ಪಾತ್ರಗಳು. ಅದರ ವಸ್ತು, ಮಧ್ಯಮ ವರ್ಗಕ್ಕೆ ಸೇರಿದ ಒಬ್ಬ ಮಹಿಳೆ ತನ್ನನ್ನು ಕೈಗೊಂಬೆಯೆಂದು ತಿಳಿದು ವರ್ತಿಸುವ ಗಂಡನ ವಿರುದ್ಧ ತೋರುವ ಪ್ರತಿಭಟನೆ. ಸುಮನ ಗಂಡ ಸತ್ಯವ್ರತನ ನಡವಳಿಕೆಯಿಂದ, ವಿಶೇಷವಾಗಿ ಹಣಕಾಸಿಗೆ ಸಂಬಂಧಿಸಿದ ಒಂದು ಪ್ರಸಂಗದಲ್ಲಿನ ತಪ್ಪು ತಿಳಿವಳಿಕೆಯಿಂದ ತನ್ನನ್ನು ನಡೆಸಿಕೊಳ್ಳುವ ರೀತಿಯಿಂದ ಬೇಸತ್ತು ಅವನಿಂದ ಬೇರಾಗಲು ಪ್ರಯತ್ನಿಸುತ್ತಾಳೆ. ಸರಿಯಾದ ಮಾಹಿತಿ ದೊರೆತು ಅವನು ಹೆಂಡತಿಯೊಡನೆ ಮತ್ತೆ ಬಾಳಲು ಅಪೇಕ್ಷಿಸಿದರೂ ಅವನಿಂದ ದೂರಾಗಲು ನಿರ್ಧರಿಸುತ್ತಾಳೆ. ನಾಟಕದಲ್ಲಿ ಮೂಲ ಸನ್ನಿವೇಶಗಳು ಹಾಗೆಯೇ ಇವೆ. ಟೊರ್‍ವಾಲ್ಡ್ ಹೆಲ್ಮರ್, ನೋರಾ, ಡಾಕ್ಟರ್ ರ್ಯಾಮಕ್, ನೀಲ್ಸ್ ಕ್ರಗ್‍ಸ್ಟಾಡ್ ಮತ್ತು ಮಿಸೆಸ್ ಲಿಂಡ್ ಇವರುಗಳು ಕ್ರಮವಾಗಿ ಸತ್ಯವ್ರತ, ಸುಮನ, ಡಾಕ್ಟರ್ ಸುಮಿತ್ರ, ಶಂಭುನಾಥ ಮತ್ತು ಸಹಜ ಆಗಿದ್ದಾರೆ. ಮೂಲಕತೆಯೇ ತೆಳುವಾದುದು, ಸನ್ನಿವೇಶಗಳೂ ಸರಳವಾದವು. ಹಾಗಾಗಿ ನಾಟಕವನ್ನು ನಮ್ಮ ಸನ್ನಿವೇಶಕ್ಕೆ ತಕ್ಕಂತೆ ಬದಲಾಯಿಸಲು ಕಷ್ಟವಾಗಬಾರದು. ಆದರೆ ಮೂಲದ ಸಮಸ್ಯೆಯನ್ನೇ, ಅದು ನಮ್ಮದಕ್ಕೆ ಹೊಂದಿಕೊಳ್ಳದಿದ್ದರೂ, ಉಳಿಸಿಕೊಳ್ಳುವ ಔಚಿತ್ಯ ಅರ್ಥವಾಗದು. ಅದೇ ರೀತಿ ಸಮಸ್ಯೆ ಇರುವುದರಿಂದ ಹೆಸರು ಬದಲಾವಣೆಯ ಕಾರಣ ಅಸಹಜವೆನಿಸುತ್ತದೆ. ಒಳ್ಳೆಯ ಉದ್ದೇಶಕ್ಕಾಗಿ ಸಾಲ ತೆಗೆದುಕೊಳ್ಳಲೆಂದು ಸುಮನ ಸತ್ತ ತಂದೆಯ ಸಹಿಯನ್ನು ತಾನೇ ಮಾಡಿದ್ದಾಳೆ, ಆದರೆ ಈ ವಿಚಾರವನ್ನು ಗಂಡನಿಂದ ಮರೆಮಾಚಿದ್ದಾಳೆ. ಇದರಿಂದ ಉಂಟಾಗುವ ಜಟಿಲತೆಯೇ ಗಂಡಹೆಂಡಿರ ಬೇರ್ಪಡೆಗೆ ಕಾರಣವಾಗುತ್ತದೆ. ಇದು ನಮ್ಮ ಸನ್ನಿವೇಶಕ್ಕೆ ಅಷ್ಟು ಸಹಜವೆನ್ನಿಸುವುದಿಲ್ಲ. ಅಲ್ಲದೆ ಸಂಭಾಷಣೆಗಳು ಗ್ರಾಂಥಿಕವಾಗಿ ಕೃತಕವಾಗಿವೆ. “ನಾನು ನನ್ನ ಪದವಿಯಿಂದ ಬೀಳಿಸಲ್ಪಟ್ಟವನಾದರೆ, ಅದರೊಡನೆ ನಿಮ್ಮ ಅಧಃಪತನ ತಪ್ಪಿದ್ದಲ್ಲ”, “ಅವನ ಮನಸ್ಸಿನಲ್ಲಿ ನಿರ್ಮಲತೆ ಇಲ್ಲ” ಎಂಬಂತಹ ವಾಕ್ಯಗಳನ್ನು ನೋಡಬಹುದು.
       ಇಬ್ಸೆನ್‍ನ ‘ಮಾಸ್ಟರ್ ಬಿಲ್ಡರ್’ ಅಯ್ಯರ್ ಅವರ ಕೈಯಲ್ಲಿ ‘ಮಹಾಶಿಲ್ಪಿ’ಯಾಗಿದೆ. ಇದು ಹಿಂದಿನ ನಾಟಕಕ್ಕಿಂತ ಹೆಚ್ಚು ಪ್ರಬುದ್ಧವಾದ ನಾಟಕ. ತರುಣಿ ಮಾಯೆ ಕೀರ್ತಿಕಾಮನೆಂಬ ವಿವಾಹಿತ ವಾಸ್ತುಶಿಲ್ಪಿಯ ಗಂಡುಗಾಡಿಗೆ ಮೆಚ್ಚಿ ಅವನಿಗಾಗಿ ಹಂಬಲಿಸುತ್ತಾಳೆ; ಅಂತೆಯೇ, ಅವನು ಅವಳ ಮೋಹಕ ಮಾತುಗಳಿಗೆ ಮರುಳಾಗಿ ತನಗೆ ಅಸಾಧ್ಯವಾದ ಕೆಲಸ ಮಾಡಲು ಮುಂದಾಗುತ್ತಾನೆ. ತಾನೊಬ್ಬ ಮೇರು ವಾಸ್ತುಶಿಲಿಯೆನ್ನಿಸಿಕೊಳ್ಳುವ ಆಸೆಯಿಂದ ಪ್ರವೃದ್ಧಿಗೆ ಬರುತ್ತಿರುವ ತರುಣ ಉದಯನನಿಗೆ ತೊಡರುಗಾಲಾಗುತ್ತಾನೆ. ಮಾಯೆಯ ಬಗೆಗಿನ ವ್ಯಾಮೋಹದಿಂದ ಕೀರ್ತಿಕಾಮ ತನಗಾಗದ ಕೆಲಸ ಮಾಡಲು ಹೋಗಿ ದುರಂತಕ್ಕೀಡಾಗುತ್ತಾನೆ. ನಾಟಕದ ಕೊನೆಗೆ ಒಮ್ಮೆಲೇ ಮೂರು ಸಾವುಗಳು ಸಂಭವಿಸುತ್ತವೆ. ಸ್ವಾರ್ಥಪೂರಿತ ಏಳಿಗೆ ಒಂದಲ್ಲ ಒಂದು ಕ್ಷಣ ಕುಸಿಯುತ್ತದೆ ಎಂಬ ಎಚ್ಚರಿಕೆ ಈ ನಾಟಕದಲ್ಲಿದೆ. ಅದರಿಂದಲೇ ಅಯ್ಯರ್ ನಾಟಕಕ್ಕೆ ‘ಅತ್ಯುನ್ನತಿಃ ಪತನಹೇತುಃ’ ಎಂಬ ಉಪಶೀರ್ಷಿಕೆ ಕೊಟ್ಟಿದ್ದಾರೆ. ಇದು ಉಚಿತವಾಗಿದೆ, ಅಲ್ಲದೆ, ಇದು ಹಿಂದಿನ ನಾಟಕಕ್ಕಿಂತ ಹೆಚ್ಚು ಯಶಸ್ವೀ ಅನುವಾದವಾಗಿದೆ, ನಾಟಕದ ಆಶಯಕ್ಕನುಗುಣವಾಗಿ ಅಯ್ಯರ್ ಕೆಲವೆಡೆ ಸಾಂಕೇತಿಕತೆಯನ್ನು ತಂದಿದ್ದಾರೆ; ಹೆಸರುಗಳೂ ಅನ್ವರ್ಥಕವಾಗಿದೆ. ಇಲ್ಲಿನ ಭಾಷೆಯೂ ಹೆಚ್ಚು ಸಹಜವಾಗಿದೆ. ಅಯ್ಯರ್ ಅವರ ಶೈಲಿಯೇ ಮೂಲತಃ ಗ್ರಾಂಥಿಕಭಾಷೆಯನ್ನೊಳಗೊಂಡುದು. ಆದರೆ ಇಲ್ಲಿ ಇದ್ದುದರಲ್ಲಿ ಅದು ಸಹಜತೆಗೆ ಸನಿಹವಾಗಿದೆ. ನಾಟಕದ ವಸ್ತು ನಮ್ಮ ಸಂದರ್ಭಕ್ಕೆ, ಅಷ್ಟು ಅಸಹಜವೆನ್ನಿಸುವುದಿಲ್ಲ, ಜೊತೆಗೆ ಸಾಂಕೇತಿಕ ಸ್ತರಕ್ಕೇರಿದಾಗ ಉಳಿದ ಅಸಹಜತೆಯೂ ಮಯವಾಗುತ್ತದೆ. ಆದರೆ ಕೆಲವೆಡೆ ಅಯ್ಯರ್ ಸಂಭಾಷಣೆಗಳಲ್ಲಿ ಮಾಡಿಕೊಂಡಿರುವ ಮಾರ್ಪಾಟು ಅಷ್ಟು ಉಚಿತವೆನಿಸುವುದಿಲ್ಲ. ಆದರೂ, ಇದು ಹೆಚ್ಚು ಸಹಜ ರೂಪಾಂತರವಾಗಿದೆ.
       ‘ಪ್ರಜಾಪ್ರಗತಿ’ ಐದಂಕದ ನಾಟಕ, ‘ಎನ್ ಎನಿಮಿ ಆಫ್ದ ಪೀಪಲ್’ನ ರೂಪಾಂತರ. ಇದರ ವಸ್ತು ಸಮಾಜದ ಬಗೆಗಿನ ನಾಟಕಕಾರನ ಮನೋಭಾವನ್ನು ಸೂಚಿಸುವಂಥದು. ಆದರ್ಶ ವ್ಯಕ್ತಿಯನ್ನೂ ಸಮಾಜವು ಕ್ರೂರವಾಗಿ ನಡೆಸಿಕೊಂಡು ಖಳನಾಯಕನಂತೆ ವರ್ತಿಸುತ್ತದೆ; ಅದಕ್ಕೆ ತನ್ನದೇ ವ್ಯಕ್ತಿತ್ವವಿಲ್ಲ, ಪ್ರಬಲರಿಗೆ ಮಣಿಯುವ, ಅವರ ಇರಾದೆಗಳಿಗನುಗುಣವಾಗಿ ವರ್ತಿಸುವಂಥದು ಅದು. ಹೀಗಾಗಿ ವ್ಯಕ್ತಿ ತನ್ನ ಪಾಡಿಗೆ ತಾನಿರಬೇಕು, ಇಲ್ಲ ಅದರ ವಿರುದ್ಧ ಹೋರಾಡುವ ಗಟ್ಟಿತನ ಬೆಳೆಸಿಕೊಳ್ಳಬೇಕು. ನಾಟಕದ ಮೊದಲಿಗೆ, ಗ್ರೀಕ್ ವೇದಾಂತಿ ಡಯಾಜಿನೀಸ್ ಲಾಂದ್ರ ಹಿಡಿದು ಪ್ರಾಮಾಣಿಕರಿಗಾಗಿ ಹುಡುಕಾಡುವ ‘ಪ್ರವೇಶ’ದ ದೃಶ್ಯ ತುಂಬ ಮಾರ್ಮಿಕವಾಗಿದೆ. ನಾಟಕದ ಕೇಂದ್ರ ಪಾತ್ರ ಪ್ರಾಮಾಣಿಕನಾದ ಡಾಕ್ಟರ್ ಯಶೋವರ್ಧನ, ಅವನ ಅಣ್ಣ ಭ್ರಷ್ಟನಾದ ಊರಿನ ಮೇಯರ್. ಅವರಿಬ್ಬರ ನಡುವೆ ಕಲುಷಿತ ನೀರು ಸರಬರಾಜಿನ ಹಿಂದಿನ ಭ್ರಷ್ಟಾಚಾರದ ಕಾರಣದಿಂದ ಉಂಟಾಗುವ ಸಂಘರ್ಷ; ಇವರ ನಡುವೆ ಪ್ರಸಾರ ಹೆಚ್ಚಿಸಿಕೊಳ್ಳಲು ಯಾರ ಮರ್ಜಿಯನ್ನು ಬೇಕಾದರೂ ಹಿಡಿಯುವ ಪತ್ರಿಕೆಯ ಸಂಪಾದಕ, ಪ್ರಕಾಶಕರು. ಜನಹಿತವನ್ನು ಬಯಸುವ ಯಶೋವರ್ಧನ ಒಂದೆಡೆ, ಅವನ ವಿರುದ್ಧ ಸ್ವಹಿತ ಸಾಧಕರಾದ ಮಿಕ್ಕವರು. ತನ್ನ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹೇಳಲು ಸೇರಿದ ಸಭೆಯಲ್ಲಿ ಗಲಭೆಯಾಗಿ ಜನರು ಕೂಡ ಸ್ವಹಿತಾಸಕ್ತಿಗಳ ಪರವಾಗಿಯೇ ನಿಂತು ಯಶೋವರ್ಧನನ ತೇಜೋವಧೆ ಮಾಡುತ್ತಾರೆ, ತೊಂದರೆ ಕೊಡುತ್ತಾರೆ. ಇದರಿಂದ ಬೇಸತ್ತ ಅವನು ಊರು ಬಿಡಲು ನಿರ್ಧರಿಸಿದರೂ, ಕೊನೆಗೆ ಮನೆಯವರ ಬೆಂಬಲದಿಂದ ಅನ್ಯಾಯದ ವಿರುದ್ಧ ಹೋರಾಡಲು ಊರಲ್ಲಿಯೇ ಇರಲು ತೀರ್ಮಾನಿಸುತ್ತಾನೆ. ಮಿಕ್ಕ ನಾಟಕಗಳಂತೆಯೇ ಇಲ್ಲಿಯೂ ಪಾತ್ರದ ಹೆಸರುಗಳನ್ನಷ್ಟೇ ಅಯ್ಯರ್ ಬದಲಿಸಿಕೊಂಡಿದ್ದಾರೆ, ಸನ್ನಿವೇಶಗಳನ್ನಲ್ಲ. ಮೂಲದಲ್ಲಿ ಪತ್ರಿಕೆಯ ಹೆಸರು ‘ಪೀಪಲ್ಸ್ ಮೆಸೆಂಜರ್’; ಅದು ಇಲ್ಲಿ ‘ಪ್ರಜಾಪ್ರಗತಿ’ಯಾಗಿದೆ, ನಾಟಕದ ಶೀರ್ಷಿಕೆಯೂ ಆಗಿದೆ. ಇದರಿಂದ ಮೂಲ ಶೀರ್ಷಿಕೆಯದಕ್ಕಿಂತಲೂ ಹೆಚ್ಚು ಮೊನಚಾದ ವ್ಯಂಗ್ಯ ಲಭ್ಯವಾಗಿದೆ. ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕೆಯ ಆಶಯದ ಮೇಲೆ ಮಾಡಿದ ವ್ಯಾಖ್ಯಾನದಂತಿದೆ. ಇಲ್ಲಿ ಅಯ್ಯರ್ ಬಳಸುವ ಭಾಷೆ ಪ್ರಯೋಗಸಾಧ್ಯವಾದುದು. ಆದರೆ ನಾಟಕದ ಕೇಂದ್ರ ಅಂಶವಾದ ಸ್ನಾನಘಟ್ಟಗಳ ಪರಿಕಲ್ಪನೆ ನಮ್ಮ ಸನ್ನಿವೇಶಕ್ಕೆ ದೂರವಾದುದು. ನಾಟಕದ ಆಶಯ ಪ್ರಸ್ತುತವಾದರೂ, ಪರಕೀಯ ಹಿನ್ನೆಲೆ ಸಹಜವಾಗಿಲ್ಲ.
       ‘ವರಪರೀಕ್ಷೆ’ ಆಲಿವರ್ ಗೋಲ್ಡ್‍ಸ್ಮಿತ್‍ನ ‘ಷಿ ಸ್ಟೂಪ್ಸ್ ಟು ಕಾಂಕರ್’ನ ಅಳವಡಿಕೆ. ಇದೊಂದು ಪ್ರಹಸನ ಮೂಲವು ಇಂಗ್ಲಿಷ್ ಪ್ರಹಸನಗಳಲ್ಲಿ ಗಣ್ಯಸ್ಥಾನವನ್ನು ಹೊಂದಿರುವಂಥದು. ಐಶ್ವರ್ಯವಂತ ಹಳ್ಳಿಗ ಹರಿಕೃಷ್ಣ, ಹೊಸತನ್ನು ಬಯಸುವ ಅವನ ಹೆಂಡತಿ ಶ್ರೀಮತಿ ಹರಿಕೃಷ್ಣ, ಅವರ ಮಕ್ಕಳು, ಮಕ್ಕಳ ಪ್ರೇಮ, ಮಗ ಸ್ವಯಂಭುವಿಗೆ ಬೇಡವಾದ ಹುಡುಗಿಯನ್ನು ತಂದುಕೊಳ್ಳುವ ತಾಯಿಯ ಪ್ರಯತ್ನ, ಮಗಳು ಪಟ್ಟಣದ ಹುಡುಗನ್ನು ಪ್ರೀತಿಸುವುದು ಈ ಹಿನ್ನೆಲೆಯಲ್ಲಿ ಅನೇಕ ಘಟನೆಗಳು ಸಂಭವಿಸುತ್ತವೆ; ಕೊನೆಗೆ ಎರಡು ಜೋಡಿಗಳು ತಾವು ಇಷ್ಟಪಟ್ಟವರನ್ನು ಕೂಡಿ ಹಿರಿಯರಿಗೆ ಸಂತಸವಾಗುತ್ತದೆ. ನಾಟಕದಲ್ಲಿ ಹಾಸ್ಯವಿದ್ದರೂ ಅದು ಕ್ರೂರವಾಗುವುದಿಲ್ಲ, ಭಾವವಿದ್ದರೂ ಅದು ಅತಿರೇಕವಾಗುವುದಿಲ್ಲ. ಅವಾಸ್ತವ ಕತೆ, ಅಸಂಭವ ಘಟನೆಗಳಿಂದ ಕೂಡಿದ್ದರೂ, ಸನ್ನಿವೇಶಗಳ ರೀತಿಯಿಂದಲೂ, ಮಿಸ್ಟೇಕನ್ ಐಡೆಂಟಿಟಿಯಿಂದಲೂ ಹಾಸ್ಯ ಉಕ್ಕುತ್ತದೆ. ಹವ್ಯಾಸಿ ರಂಗಭೂಮಿಯೊಡನೆ ನೇರ ಸಂಬಂಧ ಹೊಂದಿದ್ದ ಅಯ್ಯರ್ ಸಹಜವಾಗಿ ಇದರಿಂದ ಆಕರ್ಷಿತರಾಗಿ ಅದನ್ನು ಕನ್ನಡಕ್ಕೆ ತಂದಿದ್ದಾರೆ. ಕೇವಲ ಪಾತ್ರಗಳ ಹೆಸರನ್ನಷ್ಟೇ ಬದಲಾಯಿಸಿಕೊಂಡು ಅನುವಾದಿಸಿದರೆ ಆಗುವ ಅಸಾಂಗತ್ಯಗಳು ಇದರಲ್ಲೂ ಇವೆ. ಉದಾಹರಣಗೆ, ಹಳ್ಳಿಯ ಹೋಟಲು, ಸಾಹುಕಾರರ ಸಾರೋಟು ಇತ್ಯಾದಿ. ಇಲ್ಲಿನ ಸಂಭಾಷಣೆಗಳು ಬಹುಮಟ್ಟಿಗೆ ಸಹಜವಾಗಿವೆ, ಆದರೆ ಕೆಲವೆಡೆ ಕೃತಕತೆ ನುಸುಳಿದೆ. ಇದೇ ನಾಟಕವನ್ನು ಪರ್ವತವಾಣಿಯವರು ‘ಉಂಡಾಡಿ ಗುಂಡ’ ಎಂಬ ಹೆಸರಿನಿಂದ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಇವೆರಡನ್ನೂ ಒಟ್ಟಿಗೆ ಇರಿಸಿದಾಗ ಅಯ್ಯರ್ ಅವರ  ರೂಪಾಂತರದ ಮಿತಿ ಅರಿವಿಗೆ ಬರುತ್ತದೆ. ಪರ್ವತವಾಣಿಯವರ ಸಹಜ ಬೀಸು ಇಲ್ಲಿಲ್ಲ.
       ಶೂದ್ರಕನ ‘ಮೃಚ್ಛಕಟಿಕ’ ಅತ್ಯಂತ ಜನಪ್ರಿಯ ಸಂಸ್ಕøತ ನಾಟಕಗಳಲ್ಲೊಂದು. ಅದು ರಚಿತವಾದ ಕಾಲದಂದ ಇಂದಿನವರೆಗೂ ಮಾನ್ಯತೆ ಪಡೆದಿದೆ, ದೇಶವಿದೇಶಗಳಲ್ಲೂ ನಮ್ಮಲ್ಲೂ ನೂರಾರು ರಂಗಪ್ರಯೋಗಗಳನ್ನು ಕಂಡಿದೆ. ಅದರ ಆಶಯವು ಜನಪರವೂ ಕ್ರಾಂತಿಕಾರಕವೂ ಆದುದು. ಒಂದೆಡೆ ಚಾರುದತ್ತರ-ವಸಂತಸೇನೆಯರ ನಿರ್ಮಲ ಪ್ರೇಮಪ್ರಕರಣ, ಮತ್ತೊಂದೆಡೆ ಪ್ರಜಾಪೀಡಕ ರಾಜನನ್ನು ಜನಗಳು ಕೆಳಗಿಳಿಸಿ ಜನಮುಖಂಡನ್ನು ರಾಜನ್ನಾಗಿ ಆಯ್ದುಕೊಳ್ಳುವ ಕತೆ ಅದರದ್ದು. ಹತ್ತು ಅಂಕಗಳಿಂದಲೂ ನೂರಾರು ಪದ್ಯಗಳಿಂದಲೂ ಕೂಡಿ ತುಂಬ ದೀರ್ಘವಾದ ಈ ನಾಟಕವನ್ನು ಅಯ್ಯರ್ ತುಂಬ ಸಮರ್ಪಕವಾಗಿ ಸಂಗ್ರಹಿಸಿ ಅಚುಕಟ್ಟಾಗಿ ಅನುವಾದಿಸಿ, ಮೂರು ಗಂಟೆಗಳಲ್ಲಿ ಅಭಿನಯಿಸಲು ತಕ್ಕುದನ್ನಾಗಿ ಮಾಡಿದ್ದಾರೆ. ಶೂದ್ರಕ ಗಮನಿಸದಿದ್ದ ಎರಡು ಸಣ್ಣ ದೋಷಗಳನ್ನು ಅಯ್ಯರ್ ತಿದ್ದಿಕೊಂಡು ಸುಸಾಂಗತ್ಯವನ್ನು ತಂದಿದ್ದಾರೆ. ಮೊದಲು ಹೊರಟು ನಾನಾ ತೊಂದರೆಗಳಿಗೆ ಸಿಕ್ಕಿದರೂ ವರ್ಧಮಾನಕನ ಗಾಡಿ ಮೊದಲು ಉದ್ಯಾನ ತಲುಪುವುದು, ಯಾವುದೇ ತೊಂದರೆಯಿಲ್ಲದೆಯೂ ಸ್ಥಾವರಕನ ಗಾಡಿ ಆನಂತರ ತಲುಪುವುದು. ಈ ದೋಷ ನಿವಾರಣೆಗೆ ಅಯ್ಯರ್ ಸರಳ ಉಪಾಯ ಹುಡುಕಿದ್ದಾರೆ. ಇವುಗಳಲ್ಲಿ ಸ್ಥಾವರಕನದು ಮಾತ್ರ ಇಲ್ಲಿ ಉದ್ಯಾನ ತಲುಪುತ್ತದೆ, ಚಾರುದತ್ತ ವಸಂತಸೇನೆ ಬರಲಿಲ್ಲವೆಂದು ಕಳವಳದಿಂದ ಮರಳುವಾಗ ದಾರಿಯಲ್ಲಿ ವರ್ಧಮಾನಕ ಅವನಿಗೆ ವಿಷಯ ತಿಳಿಸುವಂತೆ ಮಾರ್ಪಡಿಸಿಕೊಳ್ಳುವ ಮೂಲಕ ಗೊಂದಲವನ್ನು ಅಯ್ಯರ್ ನಿವಾರಿಸಿಕೊಂಡಿದ್ದಾರೆ. ಹಾಗೆಯೇ ವಸಂತಸೇನೆಯ ಶವವನ್ನು ಪರೀಕ್ಷಿಸಲು ನ್ಯಾಯಾಧಿಪತಿಯಿಂದ ಆಜ್ಞಪ್ತನಾದ ವೀರಕ ಸುಳ್ಳು ಹೇಳುವುದರ ಹಿನ್ನೆಲೆಯನ್ನು, ಸ್ವಲ್ಪ ಕಾಲ ಹೊರಗೆ ಹೋಗಿ “ಆನಂತರ ಶಕಾರ ಪ್ರ¥sóÀುಲ್ಲವದನನಾಗಿ ಒಳಕ್ಕೆ ಬಂದು ಆಸೀನನಾಗುತ್ತಾನೆ” ಎಂಬ ಒಂದು ರಂಗನಿರ್ದೇಶನದಿಂದ ಸರಿಪಡಿಸಿಕೊಂಡಿದ್ದಾರೆ. ಇದು ಅಯ್ಯರ್ ಅವರ ಪರಿಪೂರ್ಣ ರಂಗಪ್ರಜ್ಞೆಯ ದ್ಯೋತಕ. ಅನೇಕ ದೀರ್ಘ ಸ್ವಗತಗಳನ್ನು ತೆಗೆದು ಹಾಕಿ, ದೀರ್ಘ ಸಂಭಾಷಣೆಗಳನ್ನು ಮೊಟಕುಗೊಳಿಸಿ ಸರಳಗೊಳಿಸಿ ಚುರುಕುತನ ತಂದು ಇದನ್ನು ರಂಗಪ್ರಯೋಗಕ್ಕೆ ಅನುಕೂಲವಾಗುವಂತೆ ಮಾಡಿದ್ದಾರೆ.
       ಪಾಶ್ಚಾತ್ಯ ನಾಟಕಗಳನ್ನು ಕನ್ನಡಕ್ಕೆ ತರುವಾಗ ಅಯ್ಯರ್ ಪಾತ್ರಗಳ ಹೆಸರುಗಳನ್ನಷ್ಟೇ ಬದಲಾಯಿಸುವುದರಿಂದ ಅದನ್ನು ರೂಪಾಂತರವೆನ್ನುವುದು ಕಷ್ಟ. ನಾಟಕದ ದರ್ಶನ-ಆಶಯಗಳನ್ನು ತಂದುಕೊಂಡು, ಒಟ್ಟು ಬಂಧವನ್ನೂ ಹಾಗೆಯೇ ಇರಿಸಿಕೊಂಡು ನಮ್ಮ ಸನ್ನಿವೇಶಗಳಿಗೆ ಹೊಂದಿಸಿದ್ದರೆ ಅದು ರೂಪಾಂತರವೆನಿಸಿಕೊಳ್ಳುತ್ತಿತ್ತು. ಬಿ.ಎಂ.ಶ್ರೀ, ಎ.ಎನ್. ಮೂರ್ತಿರಾವ್, ಪರ್ವತವಾಣಿ - ಇವರುಗಳಂತೆ ಅಯ್ಯರ್ ರೂಪಾಂತರಿಸಲಿಲ್ಲ. ಇದಕ್ಕೆ ಬೇಕಾದ ವ್ಯವಧಾನ ಅವರಿಗಿರಲಿಲ್ಲವೋ ಇನ್ನಾವ ಕಾರಣವೋ ತಿಳಿಯದು. ‘ಮೃಚ್ಛಕಟಿಕ’ದ ಸಂಗ್ರಹಕಾರ್ಯದಲ್ಲಿ ಅವರು ತೋರುವ ರಂಗಜಾಣ್ಮೆ, ಸ್ವೋಪಜ್ಞ ನಾಟಕಕಾರ ಕೈಲಾಸಂ ಅವರ ಒಡನಾಟವಿದ್ದೂ, ಹವ್ಯಾಸಿ ರಂಗದೊಡನೆ ದೀರ್ಘ ಸಂಬಂಧವಿದ್ದೂ ಅಯ್ಯರ್ ಪಾಶ್ಚಾತ್ಯ ನಾಟಕಗಳ ಸಮರ್ಪಕ ರೂಪಾಂತರವನ್ನು ಮಾಡದಿದ್ದುದು ಹಾಗೂ ಸ್ವತಂತ್ರ ನಾಟಕಗಳನ್ನು ರಚಿಸದಿದ್ದುದು ಅಚ್ಚರಿಯನ್ನುಂಟುಮಾಡುತ್ತದೆ.
7
ಪ್ರೊಫೆಸರ್ ಕೆ.ವಿ.  ಅಯ್ಯರ್ ಅವರ ಬದುಕು ಅವರ ಕೃತಿಗಳಿಗಿಂತ ಹೆಚ್ಚು ಉನ್ನತವಾದವೆಂದು ಅವರನ್ನು ಬಲ್ಲ ಹಿರಿಯರೆಲ್ಲರೂ ಹೇಳುತ್ತಾರೆ. ವಜ್ರಸಮ ದೇಹವಿದ್ದೂ, ಕುಸುಮಸಮ ಮನಸ್ಸನ್ನು ಹೊಂದಿದ್ದುದು ಮುಂದಿನವರಿಗೆ ಐತಿಹ್ಯವೆನ್ನುವಷ್ಟು ಆಕರ್ಷಕ ವ್ಯಕ್ತಿತ್ವದವರು ಅವರು. ಅವರ ಕಾದಬರಿಗಳು ಒಂದು ಕಾಲದಲ್ಲಿ ಕನ್ನಡಿಗರನ್ನು ಭಾವಲೋಕಕ್ಕೆ ಕರೆದೊಯ್ಯುತ್ತಿದ್ದವು. ಅವರ ವ್ಯಾಯಾಮಶಾಲೆ ದೇಹದಾಢ್ರ್ಯ ಸುಧಾರಿಸಿಕೊಳ್ಳುವವರಿಗೆ ಹೇಗೆಯೋ ಹಾಗೆಯೋ ಹವ್ಯಾಸಿ ರಂಗಾಸಕ್ತರಿಗೂ ಪ್ರಿಯವಾದ ಜಾಗವಾಗಿತ್ತು. ಅವರ ಸ್ನೇಹಗುಣವನ್ನು ಅವರ ಕಿರಿಯರೂ ಹಿರಿಯರೂ ಒಂದೇ ಬಗೆಯಲ್ಲಿ ನೆನಪಿಸಿಕೊಳ್ಳುತ್ತಾರೆ. ಅವರ ಬಗ್ಗೆ ಡಿವಿಜಿ ಈ ರೀತಿ ಉದ್ಗಾರವೆತ್ತಿದ್ದಾರೆ: “ಕೈಲಾಸಂ ಅವರಂತೆ ಕೆ.ವಿ. ಅಯ್ಯರೂ ಕುತೂಹಲಕಾರಕ ವ್ಯಕ್ತಿ. ಗದೆಯನ್ನು ಹೇಗೆಂದರೆ ಹಾಗೆ ತಿರುಗಿಸಬಲ್ಲ ಕೈ ಲೇಖಣಿಯನ್ನೂ ಹಾಗೇ ತಿರುಗಿಸಬಲ್ಲದ್ದೆಂಬ ಸಂಗತಿ ಮೋಹಕವಾಗಿದೆ. ಅಯ್ಯರವರ ಕಲ್ಪನ ಚಿತ್ರಣ ಸಾಮಥ್ರ್ಯಗಳು ಬೇರೆ ಗ್ರಂಥಗಳಲ್ಲಿ ಸ್ವತಂತ್ರವಾಗಿ ಗಣನೆ ಸಂಪಾದಿಸಿಕೊಂಡಿವೆ. ಸೊಗಸಾದ ಗರಡಿಸಾಮು, ಸೊಗಸಾದ ಭೋಜನ, ಸೊಗಸಾದ ಬರವಣಿಗೆ, ಸೊಗಸಾದ ಸ್ನೇಹ - ಭಾಗ್ಯವೆಂದರೆ ಇನ್ನೇನು!”

+++++

Wednesday, 11 January 2017

ಶೋಧನೆ : ಒಂದು ಕಿರು ಕಾದಂಬರಿ

ಈ ಕಿರು ಕಾದಂಬರಿಯು 1980 ರ ‘ಸುಧಾ’ ವಾರಪತ್ರಿಕೆ ನಡೆಸಿದ ಯುಗಾದಿ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದು, 1981 ರಲ್ಲಿ ಮೊದಲ ಮುದ್ರಣವಾಗಿ ಪುಸ್ತಕರೂಪದಲ್ಲಿ ಬಂತು; ಬಹು ಬೇಗ ಎರಡನೆಯ ಆವೃತ್ತಿಯೂ ಹೊರಬಿದ್ದು, ಇದೀಗ ಮತ್ತೆ ಮುದ್ರಣಗೊಂಡಿದೆ. ಇದರ ಮೊದಲ ಮುದ್ರಣದ ಬೆನ್ನುಡಿಯಲ್ಲಿ. ಡಾ. ಜಿ.ಎಸ್. ಶಿವರುದ್ರಪ್ಪನವರು ಹೀಗೆಂದಿದ್ದಾರೆ: "ಮಾನವೀಯ ಸಂಬಂಧಗಳ ಹಿಂದಿರುವ ಹಲವಾರು ಎಳೆಗಳನ್ನು ಅತ್ಯಂತ ಕುತೂಹಲಕರವಾಗಿ ಮತ್ತು ಸ್ವಾರಸ್ಯವಾಗಿ ನಿರೂಪಿಸುವ ಈ ಕೃತಿ ನಾರಾಯಣ ಅವರ ಕಲೆಗಾರಿಕೆಗೆ ಹಿಡಿದ ಕನ್ನಡಿಯಾಗಿದೆ.”

ರಾಷ್ಟ್ರಬಂಧು ನಿಜಲಿಂಗಪ್ಪ

ಶ್ರೀ ಎಸ್. ನಿಜಲಿಂಗಪ್ಪನವರ ಬಗೆಗಿನ ಸಂಪೂರ್ಣವೂ ಅಧಿಕೃತವೂ ಆದ ಈ ಜೀವನಚರಿತ್ರೆಯನ್ನುಅಪಾರ ಪರಿಶ್ರಮ ಮತ್ತು ಶ್ರದ್ಧೆಗಳಿಂದ ಇಂಗ್ಲಿಷ್‍ನಲ್ಲಿ  ರಚಿಸಿದವರು ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕರೂ ಸಾಹಿತಿಗಳೂ ಪ್ರಗತಿಶೀಲ ಚಿಂತಕರೂ ಆದ ಡಾ| ಕೆ. ರಾಘವೇಂದ್ರರಾವ್ ಅವರು. ಆ ಗ್ರಂಥದ ಕನ್ನಡ ಅನುವಾದವಿದು.

Tuesday, 10 January 2017

ಧರ್ಮಾಮೃತ

ಹನ್ನೆರಡನೆಯ ಶತಮಾನದ ಆರಂಭದಲ್ಲಿದ್ದ ನಯಸೇನ ಚಂಪೂ ಕಾವ್ಯದ ಸ್ವರೂಪಕ್ಕೆ ಹೊಸ ಾಯಾಮವಿತ್ತವನು; ಜೈನಮತದ ಹಿರಿಮೆಯನ್ನು ಮನಗಾಣಿಸಲು ಒಂದೇ ಕತೆಯನ್ನು ಆಧರಿಸಿದ ಹದಿನಾಲ್ಕು ವಿಭಿನ್ನ ಕತೆಗಳನ್ನು ಹೆಣೆದಿದ್ದಾನೆ. .. .. ಅನೇಕ ಕಥಾಸರಣಿಯ ಮೂಲಕವೇ ಒಂದು ಕತೆಯನ್ನು ಹೇಳುವುದು ಇವನ ತುರುಫು. ಗದ್ಯಪ್ರಾಚುರ್ಯವಾದ ಈ ಕಾವ್ಯ  ಕನ್ನಡ ಕಥನಪರಂಪರೆಗೆ ಮತ್ತು ಗದ್ಯ ಬರವಣಿಗೆಗೆ ಗಟ್ಟಿ ಭೂಮಿಕೆಯನ್ನೊದಗಿಸಿತು.

Monday, 9 January 2017

ಪರಿಸ್ಥಿತಿ: ಒಂದು ಕಿರು ಕಾದಂಬರಿ

"ಸಂವೇದನಾಶೀಲನಾದ ಪ್ರಜ್ಞಾವಂತ ವ್ಯಕ್ತಿಗೆ ಬದುಕಿನಲ್ಲಿ ತೊಡಕುಗಳು ಅನೇಕ. ಸಮಾಜದಲ್ಲಿ ಬಗೆಯ ಮನೋಧರ್ಮದ ವ್ಯಕ್ತಿಗಳು ಅನುಭವಿಸುವ ಮಾನಸಿಕ ಹಿಂಸೆಯೂ ಅಪಾರವಾದುದು. ದೈನಂದಿನ ಅಗತ್ಯಗಳಾದ ಅನ್ನ, ಬಟ್ಟೆ, ವಸತಿಗಳಿಗೆ ಪರದಾಡುತ್ತ ನರಳುವ ಸಮಾಜದ ವರ್ಗಕ್ಕಿಂತ ವಿಭಿನ್ನವಾದ ಮಧ್ಯಮ ವರ್ಗದ ವ್ಯಕ್ತಿಗಳ ನೋವು-ನಲಿವುಗಳು ಡಾ| ನಾರಾಯಣ ಅವರ ಅನೇಕ ಕಾದಂಬರಿಗಳ ವಸ್ತುವಾಗಿದೆ." – ಡಾ| ಬಿ.ಎಸ್. ರಾಮಪ್ರಸಾದ್

download https://drive.google.com/open?id=0B-xaLVXaPXVNZGxkeEJqUUVUZG8

ಅಂತರ :ಒಂದು ಕಿರು ಕಾದಂಬರಿ

“ಬೆಳೆಯುವುದು ‘ಅಂತರ’ದ ವಸ್ತು, ವ್ಯಕ್ತಿ ಹೊರಗಿನ ಜಗತ್ತಿನ ವಿಷಯ ಹೊಸ ಹೊಸ ಅಂಶಗಳನ್ನು ಕಂಡುಕೊಳ್ಳುವುದು, ದೇಹ-ಮನಸ್ಸುಗಳ ವಿಷಯ ಹೊಸ ಹೊಸ ಅಂಶಗಳನ್ನು ಕಂಡುಕೊಳ್ಳುವುದು, ಈ ಹೊಸ ಅರಿವು  ತರುವ ನೋವು-ದಿಗ್ಭ್ರಮೆಗಳನ್ನು ಅರಗಿಸಕೊಂಡ ಬಾಳಿನೊಡನೆ ಹೊಂದಾಣಿಕೆ ಮಾಢಿಕೊಳ್ಳಲು ಸೆಣಸುವುದು ಬೆಳೆಯುವ ಪ್ರಕ್ರಿಯೆ.. .. ಕಾದಂಬರಿ ಒಂದು ವ್ಯಕ್ತಿತ್ವದ ದಳ-ದಳ ಅರಳುವ  ಪ್ರಕ್ರಿಯೆಯನ್ನು, ಅರಳುವ ಅನುಭವವನ್ನು ನಿರಾಡಂಬರವಾದ ಸುಭಗವಾದ ಭಾಷೆಯಲ್ಲಿ ಬಿಡಿಸಿಡುತ್ತದೆ.” – ಪ್ರೊ| ಎಲ್. ಎಸ್. ಶೇಷಗಿರಿ ರಾವ್

downloadhttps://drive.google.com/open?id=0B-xaLVXaPXVNQ1dUYzU2cm9ZNmM

ಅಧಿಕಾರ ಮೀಮಾಂಸೆ


ಅಸೀಮ ಚಿಂತಕ ಬರ್ಟ್‍ರಂಡ್ ರಸಲ್ ಅವರ ‘ಪವರ್: ಎ ನ್ಯೂ ಸೋಷಿಯಲ್ ಅನಾಲಿಸಿಸ್’ ಕೃತಿಯನ್ನು ಇಲ್ಲಿ ಕನ್ನಡಿಸಲಾಗಿದೆ. ಈ ಕೃತಿಯು ಸಾಮಾಜಿಕ ಅಧಿಕಾರದ ಬಗ್ಗೆ ವಿಶೇಷವಾಗಿ ವಿಶ್ಲೇಷಿಸುತ್ತದೆ. ರಸೆಲ್ ಪ್ರಕಾರ ಸಾಮಾಜಿಕ ವಿಜ್ಞಾನಗಳು ಅಧಿಕಾರದ ಆರ್ಥಿಕ, ಸೈನಿಕ, ಸಾಂಸ್ಕೃತಿಕ ಹಾಗೂ ನಾಗರಿಕ ಎಂಬ ಮುಖ್ಯ ಸ್ವರೂಪಗಳ ವಿಶ್ಲೇಷಣೆಯೇ ಆಗಿದೆ; ಒಂದು ಬಗೆಯ ಅಧಿಕಾರ ಮತ್ತೊಂದಾಗಿ ಮಾರ್ಪಡುವ ಸೂಕ್ಷ್ಮಗಳನ್ನು ಅವು ಗುರುತಿಸಬೇಕೆಂಬ ಮಂಡನೆ ಇಲ್ಲಿದೆ.

downloadhttps://drive.google.com/open?id=0B-xaLVXaPXVNZkZlWWdWTGZmODA