Monday 9 January 2017

ಪಂಪರಾಮಾಯಣ

ಕನ್ನಡ ಚಂಪೂ ಕಾವ್ಯ ಪರಂಪರೆಯಲ್ಲಿ ಉಜ್ವಲವಾದ ಒಂದು ಹೆಸರು ನಾಗಚಂದ್ರನದು. ತನ್ನನ್ನು ‘ಅಭಿನವ ಪಂಪ’ ಎಂದು ಕರೆದುಕೊಂಡ ಅವನು ಪಂಪನಂತೆಯೇ ಎರಡು ಕಾವ್ಯಗಳನ್ನು ರಚಿಸಿದ್ದಾನೆ; ಅವುಗಳಲ್ಲಿ ಒಂದಾದ ‘ರಾಮಚಂದ್ರಚರಿತ ಪುರಾಣ’ವು ‘ಪಂಪರಾಮಾಯಣ’ ಎಂದೇ ಪ್ರಸಿದ್ಧವಾಗಿದೆ. ಜೈನ ಪರಂಪರೆಯ ಕಥಾ ನಿರೂಪಣೆಯಲ್ಲಿ ಕಾಲ ಅಥವಾ ವಿಧಿಯ ಬಗ್ಗೆ ಚಿಂತಿಸುವ ಪರಿಯಿಂದಾಗಿ ಇದು ಅನನ್ಯವಾಗಿದೆ; ರಾವಣನನ್ನು ‘ದುರಂತ ನಾಯಕ’ನಂತೆ ಚಿತ್ರಿಸುವ ಈ ಕಾವ್ಯ ತನ್ನ ವರ್ಣನೆಗಳಿಂದಲೂ, ಅರ್ಥಾಂತರನ್ಯಾಸ ಅಲಂಕಾರಗಳಿಂದಲೂ ಮನಮುಟ್ಟುತ್ತದೆ. ಆ ಕಾವ್ಯದ ಹೊಸಗನ್ನಡ ಗದ್ಯಕಥನ ಇದು

download

No comments: