Wednesday 18 January 2017

ಸಾವಿನ ಸುತ್ತ



 ಸಾವು ಎಂಬುದು ಎಲ್ಲರೂ ಹುಟ್ಟಿನೊಡನೆ ತಮ್ಮ ಬಗಲಲ್ಲಿಯೇ ಹೊತ್ತು ತಂದದ್ದು, ಸಾವು ಸಂಭವಿಸುವವರೆಗೂ ಅದು ನಮ್ಮನ್ನು ಬಿಡುವುದಿಲ್ಲ. ಅದು ಇಷ್ಟು ಅನಿವಾರ್ಯವಾದರೂ ಅದರ ಅನುಭವ ಮನುಷ್ಯರಿಗೆ ದಕ್ಕಲು ಸಾಧ್ಯವೇ ಇಲ್ಲ. ಹೀಗಾಗಿ ಯಾವ ದಾರ್ಶನಿಕ ಏನೇ ವ್ಯಾಖ್ಯಾನ ಮಾಡಿದರೂ ಅದೆಲ್ಲ ಒಂದು ರೀತಿಯ ವ್ಯಾಖ್ಯಾನ ಅಥವಾ ಸ್ವಸಾಂತ್ವನದ ರೀತಿ ಮಾತ್ರವೇ ಆಗಿಬಿಡುತ್ತದೆ. ಅದರ ಬಗೆಗಿನ ಯಾವುದೇ ಜಿಜ್ಞಾಸೆ ತನ್ನಲ್ಲಿಯೇ ಪರ್ಯವಸಾನಗೊಳ್ಳುವಂಥದೇ ಹೊರತು ಅದರಾಚೆಗೆ ಹೋಗಲಾರದು. ಸಾವು ನಮಗೆ ಸಿಕ್ಕುವುದು ಅದು ಮಾಡುವ ಪರಿಣಾಮಗಳ ಮುಖಾಂತರ ಮಾತ್ರವೇ; ಅದೂ ಎಷ್ಟೊಂದು ಬಗೆಯಲ್ಲಿ! ಅವುಗಳನ್ನು ಹಿಡಿದಿಡುವ ಮೂಲಕವೇ ಅದರ ಬಗೆಗಿನ ಕೌತುಕ-ವಿಸ್ಮಯಗಳನ್ನು ಲೇಖಕ ವ್ಯಕ್ತಪಡಿಸುತ್ತಾನೆ. ಇಲ್ಲಿನ ಹತ್ತೂ ಕತೆಗಳಲ್ಲಿನ ಸಾವಿನ ಸಂದರ್ಭದಲ್ಲಿ ಹತ್ತಾರು ಮಾನವಮುಖಗಳ ದರ್ಶನವಾಗುತ್ತದೆ. ಈ ಕತೆಗಳನ್ನು ಅನುವಾದಿಸುವಾಗ ನನಗೆ ಅನಿರ್ವಚನೀಯ ಎನ್ನಿಸುವ ಅನುಭವ; ಹೃದಯ ಹಗುರಾದ ಭಾವ.


No comments: