ಪೂರ್ಣ ಹೆಸರು : ಪ್ರಧಾನ್ ವೆಂಕಪ್ಪಯ್ಯ ನಾರಾಯಣ
ತಂದೆ-ತಾಯಿ: ದಿವಂಗತ ಪಿ. ವೆಂಕಪ್ಪಯ್ಯ,
ದಿವಂಗತ ನರಸಮ್ಮ
ಹುಟ್ಟಿದ ಊರು: ಅಕ್ಕಿರಾಂಪುರ, ಕೊರಟಗೆರೆ ತಾಲ್ಲೂಕು
ತುಮಕೂರು ಜಿಲ್ಲೆ
ವಿಳಾಸ: 'ತಂಗಾಳಿ' # 30,
ಎರಡನೇ ಕ್ರಾಸ್, ಆರ್ಬಿಐ ಕಾಲೋನಿ
ಜಯನಗರ ಮೂರನೇ ಬ್ಲಾಕ್
ಪೂರ್ವ
ಬೆಂಗಳೂರು ಗ 560 011
ಹುಟ್ಟಿದ ದಿನಾಂಕ:
(ದಾಖಲೆಗಳ ಪ್ರಕಾರ)
18 -
12 - 1942
ವಿದ್ಯಾರ್ಹತೆ : ಎಂ.ಎ. (ಕನ್ನಡ) ಗ
1964,
ಮೈಸೂರು ವಿಶ್ವವಿದ್ಯಾನಿಲಯ;
ಎಂ.ಎ. (ಇಂಗ್ಲಿಷ್) - 1967,
ಕರ್ನಾಟಕ ವಿಶ್ವವಿದ್ಯಾಲಯ;
ಪಿಎಚ್. ಡಿ. (ಕನ್ನಡ) ಗ
1975
ಬೆಂಗಳೂರು ವಿಶ್ವವಿದ್ಯಾಲಯ
ಶಿಕ್ಷಣಾನುಭವ: ರೂರಲ್ ಇನ್ಸ್ಟಟ್ಯೂಟ್,
ಹನುಮನಮಟ್ಟಿ
ವಿದ್ಯೋದಯ ಹೈಸ್ಕೂಲು, ತಿ. ನರಸೀಪುರ
ಪ್ರಥಮ ದರ್ಜೆ ಕಾಲೇಜು, ಆದೋನಿ
ಡಿ. ಬನುಮಯ್ಯ ಕಾಲೇಜು, ಮೈಸೂರು
ಪ್ರಥಮ ದರ್ಜೆ ಕಾಲೇಜು, ತೀರ್ಥಹಳ್ಳಿ
- ಇವುಗಳಲ್ಲಿ ಅಲ್ಪಕಾಲದ ಸೇವೆ;
17 -08 -1968 ರಿಂದ
31 -12- 2000 ದವರೆಗೆ ಬೆಂಗಳೂರಿನ ಬಸವನಗುಡಿಯ
ವಿಜಯ ಕಾಲೇಜಿನಲ್ಲಿ ಕನ್ನಡ
ಅಧ್ಯಾಪಕ, ರೀಡರ್ ಮತ್ತು ಪ್ರಾಧ್ಯಾಪಕನಾಗಿ
ಸೇವೆ ಸಲ್ಲಿಸಿ ನಿವೃತ್ತಿ:
ಬೆಂಗಳೂರು ವಿಶ್ವವಿದ್ಯಾಲಯ ಸಂಜೆಯ
ತರಗತಿಗಳಲ್ಲಿ
ಹಾಗೂ ಶೇಷಾದ್ರಿಪುರಂ ಕಾಲೇಜಿನಲ್ಲಿ ಹಾಗೂ
ಎಂ.ಈ.ಎಸ್. ಕಾಲೇಜುಗಳಲ್ಲಿ ಕನ್ನಡ
ಎಂ.ಎ. ವರ್ಷಗಳ ಕಾಲ
ಬೋಧನೆ; ಒಂಬತ್ತು ಮಂದಿ ಪಿಎಚ್.ಡಿ. ಅಭ್ಯಗಳಿಗೆ ಯಶಸ್ವೀ
ಮಾರ್ಗದರ್ಶನ
ಶೈಕ್ಷಣಿಕ ಚಟುವಟಿಕೆ : ವಿವಿಧ ಸಾಹಿತ್ಯಸಂಬಂಧೀ ವಿಚಾರ
ಸಂಕಿರಣಗಳಲ್ಲಿ
ಹಾಗೂ ಗೋಷ್ಠಿಗಳಲ್ಲಿ ವಿಚಾರ ಮಂಡನೆ;
ಕೆಲವು ವಿಶ್ವವಿದ್ಯಾಲಯಗಳಲ್ಲಿ ವಿಶೇಷೋಪನ್ಯಾಸ
ಸಾಮಾಜಿಕ
ಚಟುವಟಿಕೆ : ಸಾಹಿತಿಗಳ ಕಲಾವಿದರ ಬಳಗದ
ಪ್ರಧಾನ ಸಂಚಾಲಕ
ಪ್ರಧಾನ ಕಾರ್ಯದರ್ಶಿ, ಕನ್ನಡ ಶಕ್ತಿ
ಕೇಂದ್ರ;
ಈಗ, ಅಧ್ಯಕ್ಷ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ
ಪ್ರಕಟಣೆಗಳು
ವಿಮರ್ಶೆ ಮತ್ತು ಸಂಶೋಧನೆ
1. ಬಳ್ಳಿಗಾವೆ ಐಬಿಎಚ್ ಪ್ರಕಾಶನ, 1971,
1972
ಮತ್ತು
1987
2. ಕಾಯಕತತ್ವ ಬೆಂಗಳೂರು ವಿಶ್ವವಿದ್ಯಾಲಯ, 1974,
1985
3. ಚಂಪೂ ಕವಿಗಳು ಬೆಂಗಳೂರು ವಿಶ್ವವಿದ್ಯಾಲಯ, 1975,
2000,
2008
ಸಪ್ನಾ ಬುಕ್ ಹೌಸ್, 2008,
2011
4. ವಚನ ಚಳುವಳಿಸ ರ್ಪಭೂಷಣ ಮಠ, 1981
5. ವಚನ ಸಾಹಿತ್ಯ: ಒಂದು
ಸಾಂಸ್ಕೃತಿಕ ಅಧ್ಯಯನ ತೋಂಟದಾರ್ಯ ಮಠ, 1982
ಮತ್ತು
ವಸಂತ ಪ್ರಕಾಶನ,
2009
6. ವಚನ ವ್ಯಾಸಂಗ ಭಾಗ್ಯಲಕ್ಷ್ಮೀ ಪ್ರಕಾಶನ, 1982
7. ವಚನ ನಿರ್ವಚನ ಪುಸ್ತಕಾಲಯ, 1990
8. ಕನ್ನಡತನ ಮತ್ತು ಭಾರತೀಯತೆ ಸಾಹಿತಿಗಳ ಕಲಾವಿದರ
ಬಳಗ, 1990,
ಕನ್ನಡ ಕ್ರಿಯಾ
ಸಮಿತಿ, ಕರಾರಸಾಸಂ 1991,
ಅಲ್ಲಮಪ್ರಭು ಪೀಠ, 1997
9. ವಚನ ಪರಿಸರ ತಂಗಾಳಿ, 1994
10. ವಚನ ಸಾಹಿತ್ಯ ಅಖಿಲ ಭಾರತ ಶರಣ
ಸಾಹಿತ್ಯ ಪರಿಷತ್ತು, 1997,
ವಸಂತ
ಪ್ರಕಾಶನ, 2010
11.
ಕೆ.ವಿ. ಅಯ್ಯರ್: ಬದುಕು ಮತ್ತು
ಸಾಹಿತ್ಯ ವಿಸೀ ಸಂಪದ, 2000
12. ಬರ್ಟ್ರಂಡ್ ರಸೆಲ್ ಸ್ವಪ್ನ
ಬುಕ್ ಹೌಸ್, 2000 (ಮೂರು ಬಾರಿ),
2006
13.
ಒಳ ಹರಿವು ಕನ್ನಡ ಪುಸ್ತಕ
ಪ್ರಾಧಿಕಾರ, 2004
14.
ಕೆ. ನರಸಿಂಹ ಮೂರ್ತಿ 'ವಿಸೀ ಸಂಪದ`,
2005
15.
ವಚನ ಸಮಗ್ರ ವಸಂತ ಪ್ರಕಾಶನ, 2005
16. ಪ್ರೊ. ಎಲ್.ಎಸ್.
ಶೇಷಗಿರಿ ರಾವ್ ನವಕರ್ಣಟಕ ಪ್ರಕಾಶನ, 2006,
2009
17. ಅನಿಸಿಕೆ-ಅನುಭವ ಸಪ್ನಾ ಬುಕ್
ಹೌಸ್, 2013
ಸಂಪಾದಿತ ಕೃತಿಗಳು
1. ಬಸವ ಪುರಾಣ ಸಂಗ್ರಹ ಪ್ರಿಯದರ್ಶಿನಿ ಪ್ರಕಾಶನ, 1974
2. ಪದ್ಮಿನೀ ಪರಿಣಯ ಕನ್ನಡ ಸಾಹಿತ್ಯ
ಪರಿಷತ್ತು, 1981
3. ಕುಮುದೇಂದು ರಾಮಾಯಣ ಕನ್ನಡ ಸಾಹಿತ್ಯ
ಪರಿಷತ್ತು, 1981,
2006
4. ನುಡಿ ಮಾಣಿಕ್ಯ ಸುವಿದ್ಯಾ ಪ್ರಕಾಶನ, 1994
5. ಶಾಂತಿನಾಥ-ಆಂಡಯ್ಯ ಸಂಪುಟ ಕನ್ನಡ ವಿಶ್ವವಿದ್ಯಾಲಯ, 2006
6. ಶತನಮನ (ಜಿ.ವಿ.
ಅಭಿನಂದನ ಸಂಪುಟ) ಜಯರಾಮ ಸೇವಾ ಮಂಡಳಿ, 2012
7. ಪಂಪ ಕಾವ್ಯಸಾರ ('ಸಂಕ್ಷಿಪ್ತ ಆದಿಪುರಾಣಂ'
ಕಾಮಧೇನು, ಬೆಂಗಳೂರು,
2013
ಮತ್ತು 'ಸಂಕ್ಷಿಪ್ತ ವಿಕ್ರಮಾರ್ಜುನ
ವಿಜಯಂ')
ಪ್ರವಾಸ ಸಾಹಿತ್ಯ
1. ಉಳಿಯ ದನಿ ಕಡಲ
ಮೊರೆ ಕರ್ನಾಟಕ ಸಾಹಿತ್ಯ
ಅಕಾಡೆಮಿ, 1994
ಅನುವಾದಗಳು
1. ಸಮಾಜದ ಮೇಲೆ
ವಿಜ್ಞಾನದ ಪ್ರಭಾವ ಬೆಂಗಳೂರು ವಿಶ್ವವಿದ್ಯಾಲಯ, 1975,
2000
2. ಮದುವೆ ಮತ್ತು ನೀತಿ
ಜ್ಞಾನಪಥ, 1875 ಮತ್ತು
ವಸಂತ ಪ್ರಕಾಶನ,
2007
3. ಹನ್ನೆರಡನೇ ರಾತ್ರಿ ಉಲ್ಲಾಸ., 1975
ವಸಂತ ಪ್ರಕಾಶನ2005
4. ಅರಿಸ್ಟೋಫೆನೀಸ್ನ ಎರಡು ನಾಟಕಗಳು ಗೀತಾ ಬುಕ್
ಹೌಸ್, 1978
5. ಪಾಲ್ಕುರಿಕೆ ಸೋಮನಾಥನ 'ಬಸವ
ಪುರಾಣ' ತರಳಬಾಳು ಪ್ರಕಾಶನ, 1978
ಮತ್ತು
ವಸಂತ ಪ್ರಕಾಶನ,
2009
6. ಅಶ್ವತ್ಥಾಮನ್ (ಹಳಗನ್ನಡದಿಂದ) ಬಿಎಂಶ್ರೀ ಪ್ರತಿಷ್ಠಾನ,
1987
7. ಫಾರ್ ಫ್ರಮ್ ದ
ಮ್ಯಾಡಿಂಗ್ ಕ್ರೌಡ್ ಕನ್ನಡ ಮತ್ತು
ಸಂಸ್ಕೃತಿ ಇಲಾಖೆ, 2001
8. ಬುವಿಯ ಬಸಿರಿಗೆ ಪಯಣ ವಸಂತ ಪ್ರಕಾಶನ, 2002
9. ಷೇಕ್ಸ್ಪಿಯರ್ ನಾಟಕಲೋಕ ವಸಂತ ಪ್ರಕಾಶನ, 2004
10.
ಭಾರತ 2020: ಹೊಸ ಯುಗಕೆ ಮುಂಗಾಣ್ಕೆ ವಾಸನ್ ಪಬ್ಲಿಕೇಷನ್, 2004
11.
ಧರ್ಮಾಮೃತ (ಹೊಸಗನ್ನಡ ಗದ್ಯಕಥ) ವಸಂತ ಪ್ರಕಾಶನ,
2004 ಮತ್ತು
ಕಾಮಧೇನು, ಬೆಂಗಳೂರು,
2013
12.
ಪಂಪ ರಾಮಾಯಣ (ಹೊಸಗನ್ನಡ ಗದ್ಯಕಥನ) ವಸಂತ ಪ್ರಕಾಶನ, 2005
ಮತ್ತು
ಕಾಮಧೇನು, ಬೆಗಳೂರು2013
13.
ಅಧಿಕಾರ ಮೀಮಾಂಸೆ ವಸಂತ ಪ್ರಕಾಶನ,
2007
14.
ವ್ಯೂಹ (ಕಾದಂಬರಿ) ವಸಂತ ಪ್ರಕಾಶನ,
2007
15.
ಸಾವಿನ ಸುತ್ತ (ಹತ್ತು ಕತೆಗಳ
ಅನುವಾದ) ಸಪ್ನ ಬುಕ್
ಹೌಸ್, 2012
ನಿಘಂಟು
1. ಹಳಗನ್ನಡ ಪದಸಂಪದ ಕನ್ನಡ ಸಾಹಿತ್ಯ
ಪರಿಷತ್ತು, 2007,
2010
2. ಚಂಪೂ ನುಡಿಗನ್ನಡಿ ಸಪ್ನಾ ಬುಕ್
ಹೌಸ್, 2011
3. ಪಂಪನ ನುಡಿಗಣಿ ಕಾಮಧೇನು, ಬೆಂಗಳೂರು,
2013
ಕಾದಂಬರಿಗಳು
1. ಸಾಮಾನ್ಯ ಅಕ್ಷಯ ಪ್ರಕಾಶನ, 1979
2. ಅಂತರ ಭಾಗ್ಯಲಕ್ಷ್ಮಿ ಪ್ರಕಾಶನ, 1980
ಮತ್ತು
1995
3. ವಿಕಾಸ ಅಭಿಜಾತ ಪ್ರಕಾಶನ, 1981
4. ಶೋಧನೆ ಭಾಗ್ಯಲಕ್ಷ್ಮಿ ಪ್ರಕಾಶನ, 1981
ಮತ್ತು
ವಸಂತ ಪ್ರಕಾಶನ, 1984
5. ನಿರ್ಧಾರ ಭಾಗ್ಯಲಕ್ಷ್ಮಿ ಪ್ರಕಾಶನ, 1982
6. ಹೋರಾಟ ಭಾಗ್ಯಲಕ್ಷ್ಮಿ ಪ್ರಕಾಶನ, 1983
7. ಸಂದಿಗ್ಧ ಭಾಗ್ಯಲಕ್ಷ್ಮಿ ಪ್ರಕಾಶನ, 1985
8. ಪರಿಸ್ಥಿತಿ ಸಮರ್ಥ ಪ್ರಕಾಶನ, 1985
9. ಧರ್ಮಕಾರಣ ತಂಗಾಳಿ,
1995
ಮಲಯಾಳಂ ಅನುವಾದ ಡಿ.ಸಿ.
ಬುಕ್ಸ್, 2000
ಇವಲ್ಲದೆ, ಅನೇಕ ಪತ್ರಿಕೆಗಳಲ್ಲಿ
ಲೇಖನಗಳು, ಸಣ್ಣ ಕತೆಗಳು; ಅಭಿನಂದನ ಗ್ರಂಥಗಳಲ್ಲಿ
ಸಂಶೋಧನ ಲೇಖನಗಳು ಮತ್ತು ಇಂಗ್ಲಿಷ್‍ನಲ್ಲಿ
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು
ಕುರಿತ ಲೇಖನಗಳು ಪ್ರಕಟವಾಗಿವೆ. ಇತರರೊಡನೆ ಸೇರಿ
ಮಾಡಿದ ಸಹಕರ್ತೃತ್ವದ ಕೆಲವು ಪುಸ್ತಕಗಳು.
'ವಚನ ವ್ಯಾಸಂಗ' ಕೃತಿಗೆ ಇಳಕಲ್ಲಿನ
ಶ್ರೀ ವಿಜಯ ಮಹಾಂತೇಶ ಮಠವು
ಪುರಸ್ಕಾರವಿತ್ತಿದೆ;
'ವಚನ ನಿರ್ವಚನ' ಕೃತಿಗೆ ಬೆಂಗಳೂರಿನ
ಬಸವ ಸಮಿತಿಯು ಮೊದಲ 'ಬಸವ
ಪುರಸ್ಕಾರ'ವನ್ನು ಘೋಷಿಸಿ ಆನಂತರ
ವಾಪಸು ಪಡೆಯಿತು; 'ಸಮಾಜದ ಮೇಲೆ
ವಿಜ್ಞಾನದ ಪ್ರಭಾವ' ಕೃತಿಗೆ ಕರ್ನಾಟಕ
ಸಾಹಿತ್ಯ ಅಕಾಡೆಮಿಯು ಅನುವಾದಕ್ಕಾಗಿ ಬಹುಮಾನವಿತ್ತಿದೆ;
'ಶೋಧನೆ' ಎಂಬ ಕಾದಂಬರಿಯು 'ಸುಧಾ'
ಕನ್ನಡ ವಾರ ಪತ್ರಿಕೆಯು 1980 ರಲ್ಲಿ ನಡೆಸಿದ
ಯುಗಾದಿ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ
ಬಹುಮಾನ ಪಡೆದಿದೆ; "ಧರ್ಮಕಾರಣ' ಕಾದಂಬರಿಗೆ 'ಆರ್ಯಭಟ' ಪ್ರಶಸ್ತಿ ದೊರೆತಿದೆ.
ಇದೇ ಕಾದಂಬರಿಯನ್ನು ಕರ್ನಾಟಕ ಸಾಹಿತ್ಯ
ಅಕಾಡೆಮಿಯು ವರ್ಷದ ಶ್ರೇಷ್ಠ ಕಾದಂಬರಿಯೆಂದು
ಪುರಸ್ಕಾರವನ್ನು
ಘೋಷಿಸಿದಾಗ ಸಾಹಿತ್ಯೇತರ ಕಾರಣಕ್ಕಾಗಿ ಭಾರಿ
ವಿವಾದವೆದ್ದು
ಬಹುಮಾನವನ್ನು
ಲೇಖಕನೇ ತಿರಸ್ಕರಿಸಿದ. ಅಲ್ಲದೆ ವಿವಾದ
ಮುಂದುವರೆದು ಪಟ್ಟಭದ್ರರ ಒತ್ತಡಕ್ಕೆ ಮಣಿದ
ಕರ್ನಾಟಕ ಸರ್ಕಾರ ಅದನ್ನು ಮುಟ್ಟುಗೋಲು
ಹಾಕಿಕೊಳ್ಳುವ
ಆಜ್ಞೆಯನ್ನು ಜಾರಿಮಾಡಿತು. ಈ ತೀರ್ಮಾನದ
ವಿರುದ್ಧ ಕೆಲವು ಮಂದಿ ಕನ್ನಡ
ಲೇಖಕರು, ಮತ್ತು ಕೊನೆಯ ಅಪೀಲುದಾರನಾಗಿ
ಕಾದಂಬರಿಯ ಲೇಖಕನೂ, ಕರ್ನಾಟಕ ಹೈಕೋರ್ಟಿನಲ್ಲಿ
ದಾವೆ ಹೂಡಿದರು; ಕೆಲವರು ಆಕ್ಷೇಪ
ಮಾಡಿದ ಭಾಗಗಳನ್ನು ಕೈಬಿಟ್ಟರೆ ಮುಟ್ಟುಗೋಲು
ಆಜ್ಞೆಯನ್ನು ವಾಪಸು ಪಡೆಯುವುದಾಗಿ ಸರ್ಕಾರ
ಹೇಳಿದಾಗ ಕೋರ್ಟು ಲೇಖಕನ ಅಭಿಪ್ರಾಯ
ಕೇಳಿತು; ಆದರೆ ಲೇಖಕ ಇದಕ್ಕೆ
ಒಪ್ಪಲಿಲ್ಲವಾಗಿ,
ಕೊನೆಗೆ ಕೊರ್ಟು, ಕಾದಂಬರಿಯು ಕೆಲವರ
ಮನಸ್ಸಿಗೆ ನೋವುಂಟುಮಾಡಿರುವುದರಿಂದ ಅದನ್ನು ಲೇಖಕನು ದುರುದ್ದೇಶದಿಂದ
ರಚಿಸಿದನೆಂಬ ತೀರ್ಮಾನಕ್ಕೆ ಬರಬೇಕಾಗಿದೆಯೆಂದು ಹೇಳಿ
ಸರ್ಕಾರದ ಮುಟ್ಟುಗೋಲು ಆಜ್ಞೆಯನ್ನು ಎತ್ತಿ
ಹಿಡಿಯಿತು. ಹೈಕೋರ್ಟಿನಲ್ಲಿ ದಾವೆ ಹೂಡಿದ್ದ
ಲೇಖಕರಲ್ಲಿ ಬಹುಮಂದಿ ಹಾಗೂ ಲೇಖಕ
ಹೈಕೋರ್ಟು ತೀರ್ಪಿನ ವಿರುದ್ಧ ಭಾರತದ
ಸುಪ್ರೀಂ ಕೋರ್ಟಿನಲ್ಲಿ ಅಪೀಲು ಮಾಡಿದ್ದರು.
ಅದು ಸಹ ಇತರರ, ಅದೂ
ಅಲ್ಪಸಂಖ್ಯಾತರ
ಧಾರ್ಮಿಕ ಮನೋಭಾವಕ್ಕೆ ಧಕ್ಕೆ ತರುವ
ಕಾರಣ ಕರ್ನಾಟಕ ಸರ್ಕಾರವು `ಧರ್ಮಕಾರಣ' ಕೃತಿಗೆ ನಿಷೇಧ
ಹೇರುವ 1997 ನೇ ಇಸವಿಯ ಆಜ್ಞೆಯನ್ನು
ಈಚೆಗೆ ಎತ್ತಿಹಿಡಿದಿದೆ.
-000-
.
1 comment:
"ವಚನ ಸಾಹಿತ್ಯ ಒಂದು ಸಾಂಸ್ಕೃತಿಕ ಅಧ್ಯಯನ "
ಸಂಶೋಧಕರು : ಪಿ ವಿ ನಾರಾಯಣ
ಈ ಸಂಶೋಧನೆಯ ಮಾರ್ಗದರ್ಶಕರು ಯಾರು ತಿಳಿಸುವಿರ
Post a Comment